ಉತ್ತರ ಪ್ರದೇಶ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ನ ‘ಭಾರತ್ ಜೋಡೋ’ ಯಾತ್ರೆಗೆ ದೇಶದ್ಯಾಂತ ಅಭೂತ ಪೂರ್ವ ಬೆಂಬಲ ಸಿಗ್ತಿದೆ. ಮಹಾತ್ಮ ಗಾಂಧಿ ಮೊಮ್ಮಗ ತುಷಾರ್ ಗಾಂಧಿ, ನಟ ಕಮಾಲ್ ಹಾಸನ್, ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಹಲವರು ಗಣ್ಯರ ಬೆನ್ನಲ್ಲೇ ಈಗ ಅಯೋಧ್ಯೆಯ ರಾಮಮಂದಿರ ಪ್ರಧಾನ ಅರ್ಚಕ ರಾಹುಲ್ ಗಾಂಧಿ ಮೇಲೆ ಶ್ರೀರಾಮನ ರಕ್ಷೆ ಇರಲಿದೆ ಎಂದು ಶುಭ ಹಾರೈಸಿದ್ದಾರೆ.
‘ಭಾರತ್ ಜೋಡೋ ಯಾತ್ರೆ’ ಕುರಿತು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸಂತ್ಯೇಂದ್ರ ದಾಸ್ ಪತ್ರ ಮೂಲಕ ಶುಭಾಶಯ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಶ್ರೀರಾಮನ ಆಶೀರ್ವಾದ ಸದಾ ಇರಲಿದೆ. ಸರ್ವೇ ಜನತೋ ಸರ್ವೆ ಸುಖಿನೋ ಎಂಬಂತೆ ಜನರ ಹಿತಸಕ್ತಿಗಾಗಿ ನೀವು ಹೋರಾಟ ಮಾಡುತ್ತಿದ್ದೀರೋ ಅದು ಯಶಸ್ಸು ಕಾಣಲಿದೆ. ಮುಂದಿನ ಕೆಲಸಗಳು ನೆರವೇರಲಿವೆ. ನಿಮ್ಮ ಆರೋಗ್ಯ ಇನ್ನೂ ಸುದೀರ್ಘವಾಗಿರಲಿ ಎಂದು ರಾಹುಲ್ ಗಾಂಧಿಗೆ ಶುಭ ಹಾರೈಸಿದ್ದಾರೆ.
ಪ್ರಧಾನ ಅರ್ಚಕ ಸಂತ್ಯೇಂದ್ರ ದಾಸ್ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದ್ರೆ ಅವರಿಗೆ ಅನಾರೋಗ್ಯ ಕಾಡುತ್ತಿರೋದ್ರಿಂದ ಯಾತ್ರೆಗೆ ಪತ್ರದ ಮೂಲಕ ಬೆಂಬಲ ಸೂಚಿಸಿದ್ದಾರೆ. 9 ದಿನಗಳ ಕಾಲ ವಿಶ್ರಾಂತಿ ಪಡೆದ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನ ಮತ್ತೆ ಆರಂಭಿಸಿದ್ದರು. ಹಿಮಾಚಲ ಪ್ರದೇಶದ ಮೂಲಕ ಇಂದು ಸಂಜೆ ವೇಳೆಗೆ ಉತ್ತರ ಪ್ರದೇಶಕ್ಕೆ ಯಾತ್ರೆ ತಲುಪಲಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post