ರಾಯಚೂರು: ಕಳಪೆ ಕಾಮಗಾರಿ ಮಾಡಿದ ಹಿನ್ನೆಲೆಯಲ್ಲಿ ಮಾನ್ವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಸಾರ್ವಜನಿಕ ಸ್ಥಳದಲ್ಲೇ ಗುತ್ತಿಗೆದಾರನ ಕನ್ನಡಕ ಕಿತ್ತೆಸೆದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಸಾರ್ವಜನಿಕರು, ಶಾಸಕರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಇಂದು ಕವಿತಾಳ ಪಟ್ಟಣಕ್ಕೆ ಕಾಮಗಾರಿ ವೀಕ್ಷಣೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗಮಿಸಿದ್ದರು. ಈ ವೇಳೆ ಕಾಮಗಾರಿಯನ್ನ ವೀಕ್ಷಿಸಿ, ಗುತ್ತಿಗೆದಾರ ಪ್ರಭುಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಾಳ್ಮೆ ಕಳೆದುಕೊಂಡ ಶಾಸಕರು ಪ್ರಭು ಹಾಕಿದ್ದ ಕನ್ನಡಕವನ್ನ ಕಿತ್ತು ನೆಲಕ್ಕೆ ಬಿಸಾಡಿದ್ದಾರೆ.
ಗುಲ್ಬರ್ಗದಿಂದ ಯಾಕೆ ಇಲ್ಲಿಗೆ ಬರ್ತಿರಾ? ನಮ್ಮ ತಾಲೂಕಿನಲ್ಲಿ ಕೆಲಸ ಮಾಡುವವರು ಯಾರು ಇಲ್ವಾ? ನಮ್ಮವರು ಕೆಲಸ ಮಾಡಿದ್ದರೇ ಇಷ್ಟೊತ್ತಿಗೆ ಕೆಲಸ ಮುಗಿದೋಗ್ತಿತ್ತು. ಈ ಕಾಮಗಾರಿ ಒಳಗಾಕಿ ಹೂತು ಬಿಡ್ತೀನಿ. ನಮ್ಮ ಹೆಸರು ಕೆಡಿಸಲು ನೀವು ಪ್ಲಾನ್ ಮಾಡಿದ್ದೀರಿ. ರಾಯಚೂರಿನವರ ಮಾತು ಕೇಳಿ ಹೀಗೆಲ್ಲ ಮಾಡ್ತಿದ್ದೀರಿ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post