ಸೂರ್ಯಕುಮಾರ್ ಯಾದವ್- ಎಬಿ ಡಿವಿಲಿಯರ್ಸ್, ಈ ಇಬ್ಬರಲ್ಲಿ ಯಾರು ನಿಜವಾದ ಮಿಸ್ಟರ್ 360.? ಇಬ್ಬರಲ್ಲಿ ಯಾರು ಗ್ರೇಟ್ ಅಂತ ಕೇಳಿದ್ರೆ ಉತ್ತರ ಕೊಡೋದು ಕಷ್ಟ. ಆದ್ರೆ, ಈ ಲೆಜೆಂಡ್ ಸೂರ್ಯಕುಮಾರ್ಗೆ ವೋಟ್ ಹಾಕಿದ್ದಾರೆ. ಇದರಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ.
ಸೂರ್ಯಕುಮಾರ್ ಯಾದವ್.! ಕ್ರಿಕೆಟ್ ದುನಿಯಾದ ಹೊಸ ಮಿಸ್ಟರ್ 360. ಈ ಮುಂಬೈಕರ್ ಕ್ರೀಸ್ನಲ್ಲಿ ಅಕ್ಷರಶಃ ರುದ್ರತಾಂಡವ ಆಡ್ತಾರೆ. ಬೌಲರ್ ಯಾರೇ ಇದ್ರು, ಅಂಜೋದೆ ಇಲ್ಲ. ಎಂತದ್ದೇ ಬಾಲ್ ಇದ್ರು, ನೀರು ಕುಡಿದಷ್ಟೇ ಸಲೀಸಾಗಿ ಬೌಂಡರಿ ಲೈನ್ ದಾಟಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆರ್ಭಟಿಸ್ತಾರೆ. ಇದು ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ರಿಪೀಟ್ ಆಗಿದೆ. ಭರ್ಜರಿ ಬ್ಯಾಟಿಂಗ್ ನಡೆಸಿ ಲಂಕಾ ಬೌಲರ್ಗಳ ಬೆವರಿಳಿಸಿದ ಸೂರ್ಯ 51 ರನ್ ಚಚ್ಚಿದ್ರು.
T20 ಫಾರ್ಮೆಟ್ನಲ್ಲಿ ಸೂರ್ಯ, ನಿಜಕ್ಕೂ ರಾಕ್ಷಸ.! ಕಳೆದ ವರ್ಷ ಹೊಡಿಬಡಿ ಆಟದಲ್ಲಿ ಸೂರ್ಯ ಬರೆದ ದಾಖಲೆ, ಮಾಡಿದ ಸಾಧನೆ ಸಾಮಾನ್ಯ ಅಲ್ಲ. ಸೂರ್ಯ ಬ್ಯಾಟಿಂಗ್ ನೋಡಿ ಫ್ಯಾನ್ಸ್, ಮಾಜಿ ಪ್ಲೇಯರ್ಸ್, T20 ಬ್ಯಾಟ್ಸ್ಮನ್ ಅಂದ್ರೆ ಹಿಂಗಿರಬೇಕು. ಫಿಯರ್ಲೆಸ್ ಬ್ಯಾಟಿಂಗ್ ಅಂದ್ರೆ, ಇದು ಅಂತಿದ್ದಾರೆ.
ಸೂರ್ಯಕುಮಾರ್- ಎಬಿಡಿ ಇಬ್ಬರಲ್ಲಿ ಯಾರು ಗ್ರೇಟ್.?
T20ಯಲ್ಲಿ ಸೂರ್ಯ, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್. ಹಲವು ಪಂದ್ಯಗಳನ್ನ ಸೂರ್ಯ, ಗೆಲ್ಲಿಸಿಕೊಟ್ಟಿದ್ದಾರೆ. ತಂಡದ ಬೇರೆ ಬ್ಯಾಟರ್ಸ್ ಫೇಲ್ ಆದ್ರು, ಸೂರ್ಯ ಇದ್ದಾನೆ, ಚಿಂತೆ ಬೇಡ ಅನ್ನೋ ನಂಬಿಕೆ ಹುಟ್ಟಿಕೊಂಡಿದೆ. T20ಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರೋ ಸೂರ್ಯರನ್ನ, ಎಬಿ ಡಿವಿಲಿಯರ್ಸ್ ಜೊತೆಗೆ ಕಂಪೇರ್ ಮಾಡಲಾಗ್ತಿದೆ. ಇದರಿಂದ ಈ ಇಬ್ಬರಲ್ಲಿ ಯಾರು ಗ್ರೇಟ್ ಅನ್ನೋ ಡಿಬೇಟ್ ಶುರುವಾಗಿದೆ.
ಡಿವಿಲಿಯರ್ಸ್ರನ್ನೇ ಮೀರಿಸಿದ್ದಾರಾ ಸೂರ್ಯ.?
ಯೆಸ್, ಕ್ರಿಕೆಟಲ್ಲಿ 360 ಡಿಗ್ರಿ ಬ್ಯಾಟಿಂಗ್ ಪರಿಚಯ ಮಾಡಿಸಿದ್ದೇ AB ಡಿವಿಲಿಯರ್ಸ್. ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರನ ಅಸಾಮಾನ್ಯ, ಅತ್ಯದ್ಭುತ ಬ್ಯಾಟಿಂಗ್ಗೆ ಎಂತರವೂ ಸ್ಟನ್ ಆಗ್ಲೇಬೇಕು. ಡಿವಿಲಿಯರ್ಸ್ ಮುಂದೆ, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾರಂತ ಖತರ್ನಾಕ್ ಬೌಲರ್ಗಳೇ ಡಮ್ಮಿ ಅನ್ನಿಸ್ತಿದ್ರು.
ಆದ್ರೀಗ, ಸೂರ್ಯ ಕುಮಾರ್ ಥೇಟ್ ಎಬಿಡಿಯಂತೆ 360 ಡಿಗ್ರಿ ಬ್ಯಾಟಿಂಗ್ ಮೂಲಕ ಮಿಂಚ್ತಿದ್ದಾರೆ. ಇದೇ ಕಾರಣಕ್ಕೆ ಸೂರ್ಯರನ್ನ ಎಬಿಡಿ ಜೊತೆ ಹೋಲಿಸಲಾಗ್ತಿದೆ. ಆದ್ರೆ, ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಎಬಿಡಿಗಿಂತ ಸೂರ್ಯಕುಮಾರ್ ಬೆಸ್ಟ್ ಬ್ಯಾಟ್ಸ್ಮನ್. ಎಬಿಡಿ ಕ್ಲಾಸ್, ಆದರೆ ಸೂರ್ಯ ರಿಯಲ್ ಫಿಯರ್ಲೆಸ್ ಬ್ಯಾಟ್ಸ್ಮನ್ ಅಂತ ಹೇಳಿದ್ದಾರೆ.
ನನ್ನ ಆಯ್ಕೆ ಸೂರ್ಯಕುಮಾರ್.!
‘ಸೂರ್ಯಕುಮಾರ್- ಎಬಿ ಡಿವಿಲಿಯರ್ಸ್ ಇಬ್ಬರಲ್ಲಿ ಯಾರು ಅಂದ್ರೆ, ನಾನು ಸೂರ್ಯ ಅಂತ ಹೇಳ್ತೀನಿ.ABDಅಂದ್ರೆ ಕ್ಲಾಸ್. ಆದ್ರೆ, SKY ಫಿಯರ್ಲೆಸ್. ಹೀಗಾಗಿ ನಾನು 100 ಪರ್ಸೆಂಟ್ ಸೂರ್ಯರನ್ನ ಆಯ್ಕೆ ಮಾಡಿಕೊಳ್ಳುತ್ತೇನೆ’
– ಶೋಯೆಬ್ ಅಖ್ತರ್, ಪಾಕ್ ಮಾಜಿ ಆಟಗಾರ
ಫ್ಯಾನ್ಸ್ ತಮ್ಮನ್ನ ಎಬಿಡಿ ಜೊತೆಗೆ ಹೋಲಿಸ್ತಿರೋದಕ್ಕೆ ಸೂರ್ಯ ಖುಷಿಯಾಗಿದ್ದಾರೆ. ಆದ್ರೆ, ಕ್ರಿಕೆಟ್ ಜಗತ್ತಿಗೆ ಮಿಸ್ಟರ್ 360 ಅಂದ್ರೆ, ಎಬಿಡಿ ಒಬ್ಬರೇ ನಾನಲ್ಲ ಅಂತ ಹಿಂದೊಮ್ಮೆ ಸೂರ್ಯ ಹೇಳಿದ್ರು.
ಜಗತ್ತಿಗೆ ಒಬ್ಬರೇ 360 ಡಿಗ್ರಿ ಪ್ಲೇಯರ್.!
‘ಈ ಜಗತ್ತಿಲ್ಲಿ 360 ಪ್ಲೇಯರ್ ಒಬ್ಬರೇ ಇರೋದು, ನಾನು ಅವರಂತೆ ಆಗಲು ಪ್ರಯತ್ನಿಸುತ್ತಿದ್ದೇನೆ’
– ಸೂರ್ಯ ಕುಮಾರ್ ಯಾದವ್, ಕ್ರಿಕೆಟಿಗ
ಅದೇನೆ ಇರಲಿ, ಸೂರ್ಯಕುಮಾರ್ ಯಾದವ್ ಸದ್ಯ ಕ್ರಿಕೆಟ್ ಜಗತ್ತಿನ ರಿಯಲ್ ಫಿಯರ್ಲೆಸ್ ಬ್ಯಾಟ್ಸ್ಮನ್ ಅಂದ್ರೆ ತಪ್ಪಿಲ್ಲ. ಹಾಗಂತ, ಇಷ್ಟು ಬೇಗ ಎಬಿಡಿಗಿಂತ ಸೂರ್ಯ ಗ್ರೇಟ್ ಅಂತ ಹೇಳಲು ಸಾಧ್ಯವಿಲ್ಲ. ಆದ್ರೆ, ಸೂರ್ಯ ಇದೇ ಕನ್ಸಿಸ್ಟೆನ್ಸಿ, ಫಾರ್ಮ್ ಮುಂದುವರಿಸಿದ್ರೆ, ಎಬಡಿಯ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post