ರಾಯಚೂರು: ಚರಂಡಿ ನಿರ್ಮಾಣಕ್ಕೆ ತೋಡಿರುವ ಗುಂಡಿಯಲ್ಲಿ ಇಬ್ಬರು ಬಾಲಕರು ಬಿದ್ದು ಸಾವನ್ನಪ್ಪಿರುವ ಘಟನೆ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಡೆದಿದೆ.
ಬ್ಯಾಗವಾಟ್ ಗ್ರಾಮದ ಅಜಯ್ (8), ಸುರೇಶ್ (6) ಮೃತ ಬಾಲಕರು. ಅಣ್ಣ-ತಮ್ಮಂದಿರ ಮಕ್ಕಳಾದ ಅಜಯ್, ಸುರೇಶ್ ನಿನ್ನೆ ಸಂಜೆ ಶಾಲೆ ಬಳಿ ಆಟವಾಡ್ತಿದ್ದರು. ಈ ವೇಳೆ ಚರಂಡಿ ಕಾಮಗಾರಿ ಮಾಡಲು ತೋಡಲಾಗಿದ್ದ ಗುಂಡಿಯೊಳಗೆ ಬಾಲಕರು ಬಿದ್ದು ಮೃತಪಟ್ಟಿದ್ದಾರೆ.
ಎರಡ್ಮೂರು ತಿಂಗಳು ಹಿಂದೆಯೇ ಚರಂಡಿ ಕಾಮಗಾರಿಗೆಂದು ಗುಂಡಿ ತೋಡಲಾಗಿತ್ತು. ಗುಂಡಿ ಮುಚ್ಚದ ಕಾರಣ ಅದರಲ್ಲಿ ನೀರು ನಿಂತಿತ್ತು. ಬಾಲಕರ ಸಾವಿಗೆ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post