ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಎಲ್ಲರ ಗಮನ ಸೆಳೆದಿದ್ದು, ಒಂದೇ ಒಂದು. ಅದು ಅವರು ಧರಿಸಿದ್ದ, ವೈಟ್ ಅಂಡ್ ವೈಟ್ ಟೀ ಶರ್ಟ್. ಮಳೆಯೇ ಬರಲಿ, ನಡುಗುವ ಚಳಿಯೇ ಇರಲಿ ರಾಹುಲ್ ಗಾಂಧಿ ಟೀ ಶರ್ಟ್ ಧರಿಸಿಯೇ ಹೆಜ್ಜೆ ಹಾಕಿದ್ರು. ಯಾರು ಏನೇ ಹೇಳಿದ್ರು ಸ್ವೆಟರ್ ಕೂಡ ಹಾಕಲಿಲ್ಲ. ಇದು ಯಾಕೆ ಅಂತಾ ಯಾರಿಗೂ ಗೊತ್ತಿರಲಿಲ್ಲ.
ಇದನ್ನೂ ಓದಿ:ಮೈಕೊರೆಯುವ ಚಳಿಯಲ್ಲೂ ಬರೀ ಟೀ-ಶರ್ಟ್‌ನಲ್ಲೇ ಪಾದಯಾತ್ರೆ; ರಾಹುಲ್ ಮೇಲೆ ಸಂಶೋಧನೆಗೆ ಮುಂದಾದ ಯೋಗಿ ಸರ್ಕಾರ
ಸಂಶೋಧನೆಗೆ ರೆಡಿಯಾದ ಸರ್ಕಾರ
ಮೈನಸ್ 4 ಡಿಗ್ರಿ ಉಷ್ಣಾಂಶದಲ್ಲೂ ರಾಹುಲ್ ಗಾಂಧಿ ಉತ್ತರಭಾರತದ ಹಲವೆಡೆ ಪಾದಯಾತ್ರೆ ನಡೆಸಿದ್ರು. ಇದು ಬಿಜೆಪಿಯ ನಾಯಕರಿಗಂತೂ ಅಚ್ಚರಿಯ ವಿಷಯವಾಗಿತ್ತು. ಗಡಗಡ ನಡುಗುವ ಚಳಿಗೆ ಜನರು ಜೀವನೇ ಬಿಡ್ತ್ತಿದ್ದಾರೆ. ಇಷ್ಟಾದ್ರೂ ರಾಹುಲ್ ಗಾಂಧಿ ಆರೋಗ್ಯವಾಗಿರೋದು ಹೇಗೆ. ಅವರ ದೇಹದಲ್ಲಿ ವಿಶೇಷ ರೋಗನಿರೋಧಕ ಜೀವಾಣು ಇರಬಹುದು. ಅದರ ಬಗ್ಗೆ ಸಂಶೋಧನೆ ನಡೆಸುವುದಾಗಿ ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ಸಚಿವರೇ ಹೇಳಿಕೆ ನೀಡಿದ್ರು. ಇನ್ನೂ ಹಲವರು ರಾಹುಲ್ ಗಾಂಧಿ ಟೀ ಶರ್ಟ್ ಒಳಗೆ ಥರ್ಮಲ್ ಉಡುಪು ಧರಿಸಿದ್ದಾರೆ ಅನ್ನೋ ಫೋಟೋಗಳನ್ನ ವೈರಲ್ ಮಾಡಿದ್ರು.
ಬಡ ಹೆಣ್ಣು ಮಕ್ಕಳ ಪರಿಸ್ಥಿತಿ
ಇಷ್ಟೆಲ್ಲಾ ಊಹಾಪೋಹಗಳ ಮಧ್ಯೆ ಖುದ್ದು ರಾಹುಲ್ ಗಾಂಧಿ ಅವರೇ ತಮ್ಮ ಟೀ ಶರ್ಟ್ ರಹಸ್ಯವನ್ನ ಬಿಟ್ಟಿಟ್ಟಿದ್ದಾರೆ. ಕನ್ಯಾಕುಮಾರಿ, ಕೇರಳದಲ್ಲಿ ಯಾತ್ರೆ ಶುರುವಾದಾಗ ಬಿಸಿಲಿನ ವಾತಾವರಣ ಇತ್ತು. ನಂತರ ಮಧ್ಯಪ್ರದೇಶಕ್ಕೆ ಬರುವಷ್ಟರಲ್ಲಿ ಸ್ಪಲ್ಪ ಚಳಿ ಶುರುವಾಯ್ತು. ಒಂದು ದಿನ ಮುಂಜಾನೆ ಮೂವರು ಬಡ ಹೆಣ್ಣು ಮಕ್ಕಳು ನನ್ನನ್ನ ಭೇಟಿ ಮಾಡಲು ಬಂದರು. ನಾನು ಅವರ ಕೈ ಹಿಡಿದುಕೊಂಡಾಗ ಚಳಿಯಿಂದ ನಡುಗುತ್ತಿದ್ದರು. ಹರಿದ ಬಟ್ಟೆಯಲ್ಲಿ ಅವರು ಗಡಗಡ ನಡುಗುತ್ತಿದ್ದರು. ನಾನು ಅಂದೇ ತೀರ್ಮಾನ ತೆಗೆದುಕೊಂಡೆ. ಆ ಬಡ ಹೆಣ್ಣು ಮಕ್ಕಳಿಗೆ ಚಳಿಯಾಗುತ್ತಿದ್ದರೆ ರಾಹುಲ್ ಗಾಂಧಿಗೂ ಚಳಿಯಾಗುತ್ತಿರುತ್ತೆ. ಈ ಮೂಲಕ ಆ ಹೆಣ್ಣು ಮಕ್ಕಳಿಗೆ ಸಂದೇಶ ನೀಡಲು ನಾನು ಬಯಸಿದ್ದೇನೆ ಎಂದಿದ್ದಾರೆ.
इस टी-शर्ट से बस इतना इज़हार कर रहा हूं,
थोड़ा दर्द आपसे उधार ले रहा हूं। pic.twitter.com/soVmiyvjqA— Rahul Gandhi (@RahulGandhi) January 9, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post