ರಾಯಚೂರು: 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರ ಕೆಡವಲು ಕ್ಷಿಪ್ರ ಕ್ರಾಂತಿ ನಡೆಸಿದ್ದ ರೂವಾರಿ. ಮುಂಬೈ ಹೋಟೆಲ್‌ನಲ್ಲಿ ಹೈಡ್ರಾಮಾ ನಡೆಸಿದ್ದ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್‌ಗೆ ಬಾಂಬೆ ಸ್ನೇಹಿತರು, ಬಿಜೆಪಿ ಪಕ್ಷ ಸಾಕಾಗಿ ಹೋಗಿದೆ.
ಮಂತ್ರಾಲಯದಲ್ಲಿ ಪಥ ಬದಲಾವಣೆ
ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರೋ ಹೆಚ್.ವಿಶ್ವನಾಥ್, ಮಂತ್ರಾಲಯದಲ್ಲಿ ರಾಜಕೀಯದ ಪಥ ಬದಲಾಯಿಸಿದ್ದಾರೆ. ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದಿದ್ದೇನೆ. ನನ್ನ ರಕ್ತನೇ ಕಾಂಗ್ರೆಸ್. ಹೌದು ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ.
ಬಿಜೆಪಿ MLC ನಾನಲ್ಲ
ಬಹಳ ಜನರಿಗೆ ಇದು ಗೊತ್ತಿಲ್ಲ. ನಾನು ಫ್ರೀ ಬರ್ಡ್. ನಾನು ಸಾಹಿತ್ಯ ಕ್ಷೇತ್ರದ ಎಂಎಲ್‌ಸಿ ಆಗಿದ್ದೇನೆ. ಬಿಜೆಪಿ ಎಂಎಲ್‌ಸಿ ಅಲ್ಲ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ಬಳಿಕ ನಾಮಿನೆಟ್ ಮಾಡಿದ್ದಾರೆ. ನನ್ನ ಸೋಲಿಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಹಿಟ್ ಅಂಡ್ ರನ್ ಬಿಡಬೇಕು
ಸ್ಯಾಂಟ್ರೋ ರವಿ ಯಾರೂ ಅನ್ನೋದು ನನಗೆ ಗೊತ್ತಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಸುಮ್ನೆ ಗಾಳಿಪಟ ಬಿಟ್ಟಿದ್ದಾರೆ. ಕುಮಾರಸ್ವಾಮಿ ರಾಜಕೀಯಕ್ಕೂ ಮೊದಲು ಸಿನಿಮಾ ಫೀಲ್ಡ್‌ನಲ್ಲಿದ್ದವರು.
ಎರಡು ಬಾರಿ ಸಿಎಂ ಆಗಿದ್ದವರು. ಪ್ರತ್ಯಕ್ಷದರ್ಶಿ ತರಹ ಹೇಳುವವರು ಸಾಕ್ಷಿಗಳಿದ್ದರೆ ಇಂದೇ ತೋರಿಸಲಿ. ಕುಮಾರಸ್ವಾಮಿ ಹಿಟ್ ಅಂಡ ರನ್ ಬಿಡಬೇಕು ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post