ಹೊಟ್ಟೆ ತುಂಬಾ ಊಟ ಸಿಕ್ಕಾಗ ಯುದ್ಧ, ಯುದ್ಧ ಅಂತಿದ್ದ ಉಗ್ರರ ಸ್ವರ್ಗ, ಪಾಪಿ ಪಾಕಿಸ್ತಾನ ತುತ್ತು ಅನ್ನ ತಿನ್ನೋಕೂ ಗತಿಯಿಲ್ಲದೆ ಪರದಾಡುತ್ತಿರುವಾಗ ಬುದ್ಧಿ ಕಲಿತಿದೆ. ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಶಾಂತಿಯ ಬಾವುಟ ಹಾರಿಸಿ ಪ್ರಧಾನಿ ನರೇಂದ್ರ ಮೋದಿ ಜೊತೆ ಸ್ನೇಹದ ಹಸ್ತ ಚಾಚಿದ್ದಾರೆ.
ಮೂರು ಯುದ್ಧದ ಪಾಠ
ಪಾಕ್ ಪ್ರಧಾನಿ ಶಹಬಾಜ್, ಅಲ್ ಅರೀಬಿಯಾ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ, ಭಾರತ-ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧದ ಕರಾಳ ನೆನಪುಗಳನ್ನ ಸ್ಮರಿಸಿದ್ದಾರೆ. ನಾವು ಭಾರತದ ಜೊತೆ ಮೂರು ಯುದ್ಧಗಳನ್ನ ಮಾಡಿದ್ದೇವೆ. ಈ ಯುದ್ಧಗಳಿಂದ ನಮಗೆ ಸಿಕ್ಕಿರೋದು ಬಡತನ, ನಿರುದ್ಯೋಗವಷ್ಟೇ. ನಾವೀಗ ಶಾಂತಿಯಿಂದ ಜೀವನ ನಡೆಸಬೇಕು ಅಂತಾ ಇದ್ದೇವೆ. ನಮ್ಮ ಸಂಪನ್ಮೂಲವನ್ನ ಬಾಂಬ್, ಗುಂಡುಗಳಲ್ಲಿ ವ್ಯರ್ಥ ಮಾಡಲ್ಲ. ನಾನು ಭಾರತದ ಪ್ರಧಾನಿ ಮೋದಿಗೂ ಈ ಸಂದೇಶ ನೀಡುತ್ತೇನೆ ಎಂದಿದ್ದಾರೆ.
ನೆರೆ ಹೊರೆಯ ನೆನಪು
ಭಾರತ ಮತ್ತು ಪಾಕಿಸ್ತಾನಗಳೆರಡೂ ನೆರೆ ಹೊರೆಯ ರಾಷ್ಟ್ರಗಳು. ನಾವು ಶಾಂತಿಯಿಂದ ಇರುವುದು ನಮ್ಮ ಕೈನಲ್ಲಿಯೇ ಇರುತ್ತದೆ ಅನ್ನೋದು ಶಹಬಾಜ್ ಷರೀಫ್ ವಾದವಾಗಿದೆ. ನಮ್ಮ ಸಮಸ್ಯೆಗಳನ್ನ ನಾವು ಸರಿಪಡಿಸಿಕೊಳ್ಳಬೇಕು ಅಂತಿದ್ದೇವೆ. ನಮ್ಮ ದೇಶವನ್ನ ಬಡತನ ಮುಕ್ತಗೊಳಿಸಬೇಕು. ನಮ್ಮ ಜನರಿಗೆ ಒಳ್ಳೆ ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಬೇಕು ಎಂದು ಷರೀಫ್ ಹೇಳಿದ್ದಾರೆ.
ಶಾಂತಿ ಹಿಂದೆ ಕಾಶ್ಮೀರದ ಕಿರಿಕ್!
ಭಾರತದೊಂದಿಗೆ ಶಾಂತಿ ಮಾತಾಡುತ್ತಲೇ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತನ್ನ ನರಿ ಬುದ್ಧಿಯನ್ನೂ ಪ್ರದರ್ಶಿಸಿದ್ದಾರೆ. ಸಂದರ್ಶನದಲ್ಲಿ ಕಾಶ್ಮೀರದ ಬಗ್ಗೆ ಪ್ರಸ್ತಾಪ ಮಾಡಿರುವ ಅವರು, ಕಾಶ್ಮೀರದಲ್ಲಿ ಏನೆಲ್ಲಾ ಆಗುತ್ತಿದೆಯೋ ಅದನ್ನ ನಿಲ್ಲಿಸಬೇಕು. ನಾಗರಿಕ ಹಕ್ಕುಗಳ ಉಲ್ಲಂಘನೆಯನ್ನ ತಡೆದು ನಾವು ಒಟ್ಟಿಗೆ ಕುಳಿತು ಶಾಂತಿ ಮಾತುಕತೆಯನ್ನ ನಡೆಸಬೇಕು ಎಂದಿದ್ದಾರೆ. ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರ ಶಾಂತಿ ಮಾತುಕತೆಯ ಆಹ್ವಾನವನ್ನ ಭಾರತ ನಯವಾಗಿ ತಿರಸ್ಕರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post