ಕಿರುತೆರೆಯ ಬ್ಯೂಟಿಫುಲ್ ತಾರೆಯರಲ್ಲಿ ನಟಿ ಅಮುಲ್ಯಾ ಗೌಡ ಕೂಡ ಒಬ್ರು. ಅಪರಂಜಿ, ಅಗ್ನಿಸಾಕ್ಷಿ, ನನ್ನರಿಸಿ ರಾಧೆ ಧಾರಾವಾಹಿಯ ಮೂಲಕ ಸ್ಮಾಲ್ ಸ್ಕ್ರೀನ್ನಲ್ಲಿ ಫೇಮ್ ಗಳಿಸಿದ ನಟಿ ಅಮೂಲ್ಯಾ. ಸದ್ಯ ಈಗ ಒಂದು ಗುಡ್ ನ್ಯೂಸ್ ಮೂಲಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.
ಹೊಸ ಚಿತ್ರ ಕುರುಡು ಕಾಂಚಾಣ ಮೂಲಕ ಮೊಟ್ಟ ಮೊದಲನೆ ಬಾರಿಗೆ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಾಲಿದ್ದಾರೆ. ಹೌದು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಅಮೂಲ್ಯಾ ಕಾಲಿರಿಸಲಿದ್ದಾರೆ.
ಈಗಾಗಲೇ ಈ ಸಿನಿಮಾದ ಪೋಸ್ಟರ್ ಲಾಂಚ್ ಆಗಿದ್ದು ಕನ್ನಡದಲ್ಲಿ ಅಲ್ಲದೆ , ತೆಲುಗು, ತಮಿಳಿನ ಅವತರಿಣಿಕೆಯಲ್ಲೂ ಕೂಡ ಈ ಚಿತ್ರ ಬರಲಿದೆ. ಇನ್ನೂ ಸಿನಿಮಾದಲ್ಲಿ ನಟ ಕಿರಣ್ ರಾಜ್ ಅವ್ರಿಗೆ ಜೋಡಿಯಾಗಲಿದ್ದಾರೆ ಅಮುಲ್ಯಾ. ಇನ್ನು ಕುರುಡು ಕಾಂಚಾಣ ಚಿತ್ರವನ್ನ ಪ್ರದೀಪ್ ಎಸ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರ ತಂಡ ಈಗಾಗಲೇ ಅರ್ಧ ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದ್ದು, ಸದ್ಯದಲ್ಲೇ ಸಾಂಗ್ ಶೂಟಿಂಗ್ಗೆ ಕೇರಳಕ್ಕೆ ತೆರಳಲಿದ್ದಾರೆ.
ನಟಿ ಅಮೂಲ್ಯಾ ತನ್ನ ಮೊಟ್ಟ ಮೊದಲ ಚಿತ್ರದ ಬಗ್ಗೆ ಬಹಳಷ್ಟು ಕೂತೂಹಲ ಇಟ್ಟುಕೊಂಡಿದ್ದಾರೆ. ‘ನಾನು ಕೂಡ ಒಬ್ಬ ಆ್ಯಂಕರ್ , ನಾನು ಶಿವರಾಜ್ ಕುಮಾರ್, ಉಪೇಂದ್ರ, ಮಾಲಾಶ್ರೀ,ರಮ್ಯಾ, ಸಂಗೀತಾ, ಭಾರತಿ ವಿಷ್ಣುವರ್ಧನ್ ಹೀಗೆ ಹಲವಾಗರು ಕನ್ನಡ ಚಲನ ಚಿತ್ರರಂಗದ ಮೇರು ನಟರುಗಳನ್ನ ಸಂದರ್ಶನ ಮಾಡಿದ್ದೀನಿ. ಅವರಿಂದ ಸಿನಿಮಾ ಕೆಲಸ ಮಾಡಲು ಮತ್ತಷ್ಟು ಪ್ರೇರೆಪಣೆಗೊಂಡಿದ್ದೇನೆ ಎಂದು ಹೇಳಿದ್ದಾರೆ’. ಅಂತೂ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರೋ ಖುಷಿ ನನ್ನ ಪಾಲಾಗಿದೆ ಎಂದು ಅವರ ಖುಷಿಯನ್ನ ಹಂಚಿಕೊಂಡಿದ್ದಾರೆ.
ಇನ್ನು ಈ ಸಿನಿಮಾಗೆ ಮ್ಯೂಸಿಕ್ ಗೀತಾ ಕೈವಾರ್ ಅವರು ಮಾಡಿದ್ರೆ , ಸಿನಿಮಾದ ಸಿನಿಮಾಟೋಗ್ರಾಫರ್ ಆಗಿ ಪ್ರವೀಣ್ ಶೆಟ್ಟಿ ಇರಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post