ಕಿರುತೆರೆಯ ಲೋಕದಲ್ಲಿ ಹೊಸ ಹೊಸ ಎಕ್ಸ್ಪೆರಿಮೆಂಟ್ಸ್ ಧಾರಾವಾಹಿಗಳ ಬರ್ತಾನೆ ಇರ್ತಾವೆ. ಈಗ ಅದೇ ಹಾದಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಕಿರುತೆರೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈಗಾಗಲೇ ಜೀ ಅಂಗಳಕ್ಕೆ ಬರ್ತಿರೋ ಎರಡು ಹೊಚ್ಚ ಹೊಸ ಧಾರಾವಾಹಿಗಳು ಬಂದಿವೆ. ಒಂದು ಸೀತಾರಾಮ ಮತ್ತೊಂದು ಭೂಮಿಗೆ ಬಂದ ಭಗವಂತ.
ಭೂಮಿಗೆ ಬಂದ ಭಗವಂತ ಧಾರಾವಾಹಿಯ ಮೊದಲ ಪ್ರೋಮೋ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದೆ. ಪ್ರೋಮೋ ಮಾತ್ರ ಅತ್ಯಅದ್ಭುತವಾಗಿದ್ದು ವೀಕ್ಷಕರನ್ನ ಮೊದಲನೇ ಪ್ರೋಮೋದಲ್ಲೇ ಧಾರಾವಾಹಿ ಸೆಳೆದಿದೆ. ಪ್ರೋಮೋದಲ್ಲಿ ಕತೆಯ ಎಳೆಯನ್ನ ತೋರಿಸಲಾಗಿದೆ. ಒಂದು ಪಕ್ಕಾ ಬೆಂಗಳೂರು ಮಿಡಲ್ ಕ್ಲಾಸ್ ಫ್ಯಾಮಿಲಿ ಕತೆಯಿದು. ಆಗೋದಕ್ಕೆಲ್ಲ ಶನೇಶ್ವರನೇ ಕಾರಣ ಅನ್ನೋ ಹಾಗೆ, ಈ ಸೀರಿಯಲ್ ಕಥಾ ನಾಯಕ ಯಾವಾಗಲೂ ದೇವರನ್ನ ಬೈಕೊಳ್ತಾನೆ ಇರ್ತಾನೆ. ಆದರೆ ಇವನ ಸಂಕಷ್ಟಕ್ಕೆಲ್ಲಾ ದೇವರು ಭೂಮಿಗೆ ಮನುಷ್ಯನ ರೂಪದಲ್ಲಿ ಇವನ ಕೇಡು ಪಾಡುಗಳನ್ನ ಬಗೆಹರಿಸುತ್ತಾನೆ. ಇದುವೆ ಕತೆಯ ಪ್ರಮುಖ ಅಂಶವಾಗಿದೆ.
ಪ್ರತಿದಿನ ಬರುವ ಕಷ್ಟಗಳನ್ನ ದೇವರು ಇವರ ಜೀವನದಲ್ಲಿ ಬಗೆಹರಿಸುತ್ತಾ ಬರ್ತಾನೆ. ಜೊತೆಗೆ ದೈವ ಲೀಲೆ ಏನು ಅನ್ನುವುದನ್ನು ಮನ ಮುಟ್ಟಿಸುತ್ತಾ ಬರ್ತಾನೆ ಆ ಭಗವಂತ. ಕತೆಯಲ್ಲಿ ಎಲ್ಲರೂ ಒಳ್ಳೆ ಅನುಭವ ಹೊಂದಿರೋ ಕಲಾವಿದರೆ ಇದ್ದಾರೆ. ಬಹು ವರ್ಷಗಳ ನಂತರ ಕಿರುತೆರೆಯಲ್ಲಿ ಡೈರೆಕ್ಷನ್ ಬಿಟ್ಟು ಫುಲ್ ಫ್ಲೆಡ್ಜ್ ನಾಯಕ ನಟನಾಗಿ ನಟ ನವೀನ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಹಲವಾರು ವರ್ಷಗಳ ಬಳಿಕ ಕಿರುತೆರೆಗೆ ನಟಿ ಕೃತಿಕಾ ವಾಪಸ್ ಬಂದಿದ್ದಾರೆ. ಭಗವಂತನ ಪಾತ್ರದಲ್ಲಿ ನಟ ಕಾರ್ತಿಕ್ ನಟಿಸಲಿದ್ದಾರೆ.
ಆರೂರ್ ಜಗದೀಶ್ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲು ಸಜ್ಜಾಗಿದೆ. ಆರೂರ್ ಜಗದೀಶ್ ಅವರು ಈಗಾಗಲೇ ಹಲವಾರು ಬ್ಲಾಕ್ ಬಾಸ್ಟರ್ ಧಾರಾವಾಹಿಗಳನ್ನ ಕಿರುತೆರೆಗೆ ಕೊಟ್ಟಿದ್ದಾರೆ. ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಜೋಡಿ ಹಕ್ಕಿ ಹೀಗೆ ಕಿರುತೆರೆಗೆ ಬಹಳಷ್ಟು ಕಾಂಟ್ರಿಬ್ಯೂಟ್ ಮಾಡಿದ್ದಾರೆ. ಹಾಗಾಗಿ ಈ ಸೀರಿಯಲ್ನ ಕೂಡ ಸ್ವತಹ: ಆರೂರ್ ಜಗದೀಶ್ ಅವರೇ ಕೈಗೆತ್ತಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಧಾರಾವಾಹಿ ಬಂದ ಮೊದಲ ಪ್ರೋಮೋದಲ್ಲೇ ಸಾಕಷ್ಟು ಕೂತೂಹಲ ಮೂಡಿಸಿರೋದು ಸುಳ್ಳಲ್ಲ. ಅತೀ ಶೀಘ್ರದಲ್ಲಿ ಈ ಧಾರಾವಾಹಿ ನಿಮ್ಮ ಮನೆಗಳಿಗೆ ತಲುಪಲಿದೆ. ಸದ್ಯದಲ್ಲೇ ಧಾರಾವಾಹಿ ಮತ್ತೊಂದು ಪ್ರೋಮೋ ಕೂಡ ಬಿಡುಗಡೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post