ಬಿಗ್ಬಾಸ್ ಸೀಸನ್ 09 ಮುಗಿದು ಸರಿ ಸುಮಾರು ಹದಿನೈದು ದಿನಗಳು ಕಳಿತಾ ಬಂತು. ಆದ್ರೆ ಬಿಗ್ಬಾಸ್ ಬಿಸಿ ಇನ್ನು ಹೋಗಿಲ್ಲಾ. ಯಾಕಂತೀರಾ? ಕಾರಣ ಇದೆ. ಬಿಗ್ಬಾಸ್ ಅನ್ನುವ ರಿಯಾಲಿಟಿ ಶೋನಲ್ಲಿ ಒಂದು ಸಲ ಇದ್ದು ಬರೋದೆ ಕಷ್ಟ ಆದ್ರೆ, ಈ ಬಾರಿ ಸೀಸನ್ನಲ್ಲಿ ಕೆಲವ್ರು ಎರಡೆರೆಡು ಸಲ ಒಳಗೆ ಹೋಗಿ ಬಂದಿದ್ದಾರೆ.ಅದ್ರಲ್ಲಿ ಅನುಪಮಾ ಗೌಡ ಕೂಡ ಒಬ್ರು, ಇವಾಗ್ ಇವ್ರ ಬಗ್ಗೆ ಏನ್ ಹೇಳೋಕ್ ಹೊರಟಿದ್ದೀವಿ ಅಂತಾ ಯೋಚಿಸ್ತಿದ್ದೀರಾ?ಮುಂದೆ ಓದಿ..
ಅನುಪಮಾ ಅವ್ರು ಬಿಗ್ ಮನೇಲಿ ಒನ್ ಆಫ್ ದಿ ಸ್ಟ್ರಾಂಗ್ ಕಂಟೆಸ್ಟೆಂಟ್, ಅದು ನಿಮ್ಗುನೂ ಗೊತ್ತು. ಆದ್ರೆ ಎರಡು ಸೀಸನ್ ಅಲ್ಲೂ ಅನುಗೆ ಲಕ್ ಕೈ ಹಿಡಿಲಿಲ್ಲ. ಕಳೆದ ಎರಡು ಸೀಸನ್ಗಳಲ್ಲೂ ಫಿನಾಲೆ ಹಂತಕ್ಕೆ ಇನ್ನೇನೂ ಕೆಲವೇ ಹೆಜ್ಜೆಗಳಿರುವಾಗಲೇ ಮನೆಯಿಂದ ಆಚೆ ಬಂದಿದ್ದರು.
ಯೆಸ್, ಬಿಗ್ಬಾಸ್ ಶೋ ಕೈ ಹಿಡಿಯಲಿಲ್ಲ ನಿಜ ಆದ್ರೆ, ಅನುಪಮಾ ಗೌಡ ಫ್ಯಾನ್ಸ್ ಕೈ ಬಿಡಲಿಲ್ಲ. ಅನುಪಮಾ ವಾರಿಯಸರ್ಸ್ಗಳು ಅನು ವ್ಯಕ್ತಿತ್ವಕ್ಕೆ ಈ ಸೀಸನ್ನಲ್ಲಿ ಫುಲ್ ಫಿದಾ ಆಗಿದ್ದಾರೆ. ಹಾಗಾಗಿ ಅನುಗೆ ಸರ್ಪ್ರೈಸ್ ಪ್ಲಾನ್ ಮಾಡಿ ಅವ್ರ ಎಲ್ಲಾ ಫ್ಯಾನ್ಸ್ಗಳು ಒಟ್ಟಿಗೆ ಸೇರಿ. ಅನುಪಮಾ ಅವ್ರನ್ನ ಸೆಲೆಬ್ರೇಟ್ ಮಾಡಿದ್ದಾರೆ.
‘ನಮ್ ಅನು ನಮ್ಗೆ ಸೂಪರ್, ಈ ಸೀಸನ್ನ ಟ್ರು ವಿನ್ನರ್ ನಮ್ ಪ್ರೀತಿಯ ಅನು’ ಅಂತ ಅವ್ರ ಫ್ಯಾನ್ಸ್ ಎಲ್ರು ಅನು ಫೋಟೋ ಪ್ರಿಟೆಂಡ್ ಶರ್ಟ್ಸ್ ಹಾಕಿಕೊಂಡು ಒಬ್ಬೊಬ್ಬ ಅಭಿಮಾನಿ ಕೂಡ ಅನು ಬಗ್ಗೆ ಒಂದೊಂದು ಲೈನ್ ಬರೆದುಕೊಂಡಿದ್ದಾರೆ.ಟ್ರು ವಿನ್ನರ್ ಅನುಪಮಾ ಗೌಡ ಅವ್ರನ್ನ ಸಖತ್ತಾಗಿ ಸೆಲೆಬ್ರೇಟ್ ಮಾಡಿದ್ದಾರೆ.
View this post on Instagram
ಇದನ್ನ ನೋಡಿ ಅನುಪಮಾ ಅವ್ರಿಗೆ ಮನಸ್ಸು ತುಂಬಿ ಬಂದಿದೆ. ಹೇಳಿಕೊಳ್ಳಲಾಗದಷ್ಟು ಖುಷಿಯಲ್ಲಿದ್ದಾರೆ. ಈ ಅದ್ಭುತ ಕ್ಷಣಗಳನ್ನ ಬಿಗ್ಬಾಸ್ ಸ್ಫರ್ಧಿ ಅನುಪಮಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post