ಇವ್ರು ಜಗತ್ತಿನ ಹಿರಿಯಜ್ಜಿ ಅಂತಾನೇ ಫೇಮಸ್ ಆಗಿದ್ದವರು. ವಿಶ್ವದ ಅತ್ಯಂತ ಹಿರಿಯ ಮಹಿಳೆ, ಫ್ರೆಂಚ್ ಸನ್ಯಾಸಿನಿ, 118 ವರ್ಷದ ಲುಸಿಲ್ ರಾಂಡನ್ ಈಗ ಇಲ್ಲ. ಫ್ರಾನ್ಸ್ ನಗರದ ಟೌಲೋನ್‌ನಲ್ಲಿ ಕಳೆದ ಮಂಗಳವಾರ ಲುಸಿಲ್ ರಾಂಡನ್ ಸಾವನ್ನಪ್ಪಿದ್ದಾರೆ.
ಲುಸಿಲ್ ರಾಂಡನ್ ಅವರನ್ನ ಸಿಸ್ಟರ್ ಆ್ಯಂಡ್ರೆ ಅಂತಾನೂ ಕರೆಯಲಾಗ್ತಿತ್ತು. ಸಿಸ್ಟರ್ ಆ್ಯಂಡ್ರೆ ಫೆಬ್ರವರಿ 11, 1904ರಲ್ಲಿ ಜನಿಸಿದ್ದರು. ಹಿರಿಯಜ್ಜಿ ತನ್ನ ಜೀವನದುದ್ದಕ್ಕೂ ಧಾರ್ಮಿಕ ಸೇವೆಗಳನ್ನೇ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಲುಸಿಲ್ ರಾಂಡನ್, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದ ಹಿರಿಯ ಸನ್ಯಾಸಿನಿ ಅನ್ನೋ ದಾಖಲೆ ಬರೆದಿದ್ರು.
ಲುಸಿಲ್ ರಾಂಡನ್, ಫ್ರೆಂಚ್ ಸನ್ಯಾಸಿನಿಯಾಗಿ ತಮ್ಮ ಸೇವಾ ಕಾರ್ಯಗಳನ್ನ ಆರಂಭಿಸಿದ್ರು. ನಂತರ 2ನೇ ವಿಶ್ವ ಯುದ್ಧದಲ್ಲಿ ಮಡಿದವರ ಮಕ್ಕಳಿಗೆ ಇವರು ಅಜ್ಜಿಯೇ ಆಗಿದ್ರು. 30ಕ್ಕೂ ಹೆಚ್ಚು ವರ್ಷಗಳ ಕಾಲ ಆ ಮಕ್ಕಳಿಗೆ ಹಲವು ಆಸ್ಪತ್ರೆಗಳಲ್ಲಿ ಕೇರ್ ಟೇಕರ್ ಆಗಿ ಕೆಲಸ ನಿರ್ವಹಿಸಿದ್ದಾರೆ. 2022ರಲ್ಲಿ ರಾಂಡನ್ ಅವರು ಬರೋಬ್ಬರಿ 118 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post