ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದ ವೇಳೆ 2002ರಲ್ಲಿ ನಡೆದ ಗುಜರಾತ್ ಗಲಭೆ, ಹಿಂಸಾಚಾರದ ಪ್ರಕರಣ ಬ್ರಿಟನ್ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಪಾಕಿಸ್ತಾನ ಮೂಲದ ಸಂಸದ ಇಮ್ರಾನ್ ಹುಸೇನ್, ಈ ವಿಷಯವನ್ನ ಪ್ರಸ್ತಾಪಿಸಿದ್ದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಂದ ಉತ್ತರ ಕೇಳಿದ್ದಾರೆ.
BBC ಡಾಕ್ಯುಮೆಂಟರಿಯ ಸಂಚಲನ
ಗುಜರಾತ್ ಗಲಭೆ ಬಗ್ಗೆ BBCಯಿಂದ ಹೊಸ ಡಾಕ್ಯುಮೆಂಟರಿ ಪ್ರಸಾರವಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಗುಜರಾತ್ ಗಲಭೆಗೆ ಪ್ರಧಾನಿ ನರೇಂದ್ರ ಮೋದಿಯೇ ನೇರ ಹೊಣೆ ಎಂದು ಹೇಳಲಾಗಿದೆ. ಈ ವಿಚಾರವನ್ನೇ ಸಂಸದ ಇಮ್ರಾನ್ ಹುಸೇನ್ ಇಂಗ್ಲೆಂಡ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ರು. ಇದಕ್ಕೆ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಂದ ಉತ್ತರವನ್ನು ಬಯಸಿದ್ದೇನೆ ಎಂದರು.
ರಿಷಿ ಸುನಕ್ ಸ್ಪಷ್ಟ ನಿಲುವು
ಡಾಕ್ಯುಮೆಂಟರಿ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದ ರಿಷಿ ಸುನಕ್, ಡಾಕ್ಯುಮೆಂಟರಿಯ ಅಂಶಗಳನ್ನ ಒಪ್ಪಲು ಸಾಧ್ಯವಿಲ್ಲ. ಇಂಗ್ಲೆಂಡ್ ಈ ಬಗ್ಗೆ ಹಿಂದೆಯೂ ತನ್ನ ನಿಲುವು ಸ್ಪಷ್ಟಪಡಿಸಿದೆ ಅನ್ನೋ ಮೂಲಕ ರಿಷಿ ಸುನಕ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸಮರ್ಥಿಸಿಕೊಂಡಿದ್ದಾರೆ.
ಪ್ರಚಾರದ ಡಾಕ್ಯುಮೆಂಟರಿ
ಇಂಗ್ಲೆಂಡ್ ಪಾರ್ಲಿಮೆಂಟ್‌ನಲ್ಲಿ ರಿಷಿ ಸುನಕ್, ಮೋದಿ ಅವರನ್ನ ಸಮರ್ಥಿಸಿಕೊಳ್ತಿದ್ದಂತೆ ಭಾರತದ ವಿದೇಶಾಂಗ ಇಲಾಖೆ ಕೂಡ ಸ್ಪಷ್ಟನೆ ಕೊಟ್ಟಿದೆ. ಬಿಬಿಸಿ ಡಾಕ್ಯುಮೆಂಟರಿ ಪ್ರಚಾರದ ಡಾಕ್ಯುಮೆಂಟರಿ. ಡಾಕ್ಯುಮೆಂಟರಿ ಅಂಶಗಳನ್ನು ಖಂಡಿಸುತ್ತೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗುಚಿ ತಿಳಿಸಿದ್ದಾರೆ.
I honour & respect the clarity of thinking of our PM @RishiSunak & his swift response to the characterisation of Sri @narendramodi ji done in the parliament. #DefundtheBBC @VDoraiswami @reachind_uk @amarprasadreddy @KirenRijiju pic.twitter.com/JXpht87VDw
— Gayatri 🇬🇧🇮🇳(BharatKiBeti) (@changu311) January 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post