ಅಮೆರಿಕದ ಜನಪ್ರಿಯ ನಟಿ ಕಿಮ್ ಕಾರ್ಡಶಿಯಾನ್, ರಾಜಕುಮಾರಿ ಡಯಾನಾ ಧರಿಸಿದ್ದ ಅಟಾಲಾ ಕ್ರಾಸ್ ನೆಕ್ಲೇಸ್ (Attallah Cross) ಖರೀದಿಸಿದ್ದಾರೆ. ಲಂಡನ್ನ ಐತಿಹಾಸಿಕ ಪ್ರಸಿದ್ಧ ಹರಾಜುಗಳ ನಡೆಯುವ ಹೌಸ್, Sothebyನಲ್ಲಿ ನಡೆದ ಅಕ್ಷನ್ನಲ್ಲಿ ಬರೋಬ್ಬರಿ 1.6 ಕೋಟಿಗೆ ಡಯಾನಾ ಈ ನೆಕ್ಲೇಸ್ ಖರೀದಿಸಿದ್ದಾರೆ.
1987ರಲ್ಲಿ ಲಂಡನ್‌ನಲ್ಲಿ ನಡೆದ ಚಾರಿಟಿ ಗಾಲಾದಲ್ಲಿ ರಾಜಕುಮಾರಿ ಡಯಾನಾ ಧರಿಸಿದ್ದ ಅಟಾಲಾ ಕ್ರಾಸ್ ನೆಕ್ಲೇಸ್ ಖರೀದಿಸಲಾಗಿದೆ. ಫಾಕ್ಸ್ ಬ್ಯುಸಿನೆಸ್ ವರದಿ ಪ್ರಕಾರ, 42 ವರ್ಷದ ರಿಯಾಲಿಟಿ ಸ್ಟಾರ್ ಕಿಮ್, ಡಯಾನಾ ಅವರ ಬೃಹತ್ ನೀಲಮಣಿ ಮತ್ತು ವಜ್ರದ ಆಭರಣವನ್ನು ಖರೀದಿಸಿದ್ದಾರೆ. ಡಯಾನಾ ಅವರ ಈ ಆಭರಣ ಖರೀದಿಸಲು ಮೂವರು ಸ್ಪರ್ಧಿಗಳು ಬಿಡ್ ಮಾಡಿದ್ದರು. ಆದರೆ ಕಿಮ್, ತನ್ನ ಪ್ರತಿಸ್ಪರ್ಧಿಗಳು ಮಾಡಿದ್ದ ಬಿಡ್ಗಿಂತ ಎರಡು ಪಟ್ಟು ಹೆಚ್ಚು ಬಿಡ್ ನೆಕ್ಲೇಸ್ ಖರೀದಿ ಮಾಡಿದ್ದಾರೆ.
ಅಂದು ಡಯಾನಾ ರಾಜಮನೆತನದ ಕ್ಯಾಥರೀನ್ ವಾಕರ್ ಅವರ ಕಪ್ಪು ಮತ್ತು ನೇರಳೆ ವೆಲ್ವೆಟ್ ಡ್ರೆಸ್‌ನೊಂದಿಗೆ ಹಾರವನ್ನು ಧರಿಸಿದ್ದರು. 1920ರ ದಶಕದಲ್ಲಿ ರಾಯಲ್ ಜ್ಯುವೆಲರ್ ಗ್ಯಾರಾರ್ಡ್, ಈ ನಕ್ಲೇಸ್ ತಯಾರಿಸಿದ್ದರು. ಇದು 5.25 ಕ್ಯಾರೆಟ್ ತೂಕ ಹೊಂದಿದೆ. ಮೆಟ್ ಗಾಲಾ ಶೋನ್ನಲ್ಲಿ ಕಿಮ್ ಧರಿಸಿದ್ದ ಜೀನ್ ಲೂಯಿಸ್ ಗೌನ್ ವಿಶ್ವದಾದ್ಯಂತ ಭಾರೀ ಸದ್ದು ಮಾಡಿತ್ತು. ನಟಿ ಕಿಮ್, ಯುವ ಉದ್ಯಮಿಗಳಿಗೆ ಸಹಾಯಕ್ಕಾಗಿ ಇಕ್ವಿಟಿ ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post