ಇದೇ ಮೊದಲ ಬಾರಿಗೆ ಗಿರಿಗಳನಾಡು ಯಾದಗಿರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನಾರಾಯಣಪುರ ಬಸವ ಸಾಗರ ಜಲಾಶಯದ ‘ಸ್ಕಾಡಾ ತಂತ್ರಜ್ಞಾನ’ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಏನಿದು ಸ್ಕಾಡಾ ಯೋಜನೆ..?
ಸುಮಾರು 4700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್-ರಿಮೋಟ್ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆಯನ್ನು ಉದ್ಘಾಟಿಸಿದರು.
ಸ್ಕಾಡಾದಿಂದ ಏನ್ ಪ್ರಯೋಜನ..?
4400 ಗೇಟ್ಗಳ ಮೂಲಕ ಹರಿಯುವ ನೀರು ಪೋಲಾಗದಂತೆ ಸ್ಕಾಡಾ ತಂತ್ರಜ್ಞಾನ ನೋಡಿಕೊಳ್ಳಲಿದೆ. ಜಿಪಿಎಸ್ ಮೂಲಕ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಈ ಗೇಟ್ಗಳು ತುಕ್ಕು ಹಿಡಿಯದಂತೆ ಸ್ಟೈನ್ಲೆಸ್ ಸ್ಟೀಲ್ ಅಳವಡಿಸಲಾಗಿದೆ. ನಿರಾವರಿ ಸಾಮರ್ಥವ್ಯನ್ನು ಹೆಚ್ಚಿಸುವುದು, ನೀರು ಪೋಲಾಗದಂತೆ ತಡೆಯುವುದು. ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರಿಗೂ ನೀರು ಒದಗಿಲು ಸಹಾಯ ಆಗಲಿದೆ. ಈ ಯೋಜನೆಯಡಿ ಬರುವ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲಗಳ ಸಂಪೂರ್ಣ ನಕ್ಷೆ, ಗ್ರಾಮ ಹೋಬಳಿ, ತಾಲೂಕು, ಜಿಲ್ಲಾವಾರು ಕಂದಾಯ ವ್ಯಾಪ್ತಿಯ ನಕ್ಷೆ ಸೇರಿದಂತೆ ಇತ್ಯಾದಿ ಸಾಫ್ಟ್ವೇರ್ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ.
ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇಗೂ ಚಾಲನೆ
ಇದೇ ವೇದಿಕೆಯಲ್ಲಿ 2050 ಕೋಟಿ ರೂಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿಯನ ಯೋಜನೆ ಹಾಗೂ 2000 ಕೋಟಿ ರೂಪಾಯಿ ಮೌಲ್ಯದ ಸೂರತ್-ಚೆನ್ನೈ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post