ಬಹಳಷ್ಟು ಒಳ್ಳೆ ಕಥೆಯ ಆಧಾರಿತ ಧಾರಾವಾಹಿಗಳು ಕಿರುತೆರೆಯಲ್ಲಿ ಬಂದಿವೆ. ಪ್ರೇಕ್ಷಕರೆಲ್ಲರೂ ಅದನ್ನ ಇಷ್ಟ ಪಟ್ಟು ನೋಡ್ತಾ ಇದ್ದಾರೆ. ಒಬ್ಬ ಕಪ್ಪು ಹೆಣ್ಣು ಮಗಳು ಸಮಾಜದಲ್ಲಿ ಎದುರಿಸುವ ಸವಾಲುಗಳು ಏನು? ತನ್ನ ಜೀವನದಲ್ಲಿ ರೂಪ ಮೈಬಣ್ಣದ ಬಗ್ಗೆ ಮಾತನಾಡುವವರನ್ನು ಎದುರಿಸುವುದು ಹೇಗೆ ಇವೆಲ್ಲವನ್ನ ಎಂಬುವುದನ್ನು ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ ಲಕ್ಷಣ ಧಾರಾವಾಹಿಯಲ್ಲಿ ತೋರಿಸಲಾಗಿದೆ.
ಲಕ್ಷಣ ಧಾರಾವಾಹಿಯಲ್ಲಿ ನಾಯಕ ನಟಿ ನಕ್ಷತ್ರ ಪಾತ್ರದಲ್ಲಿ ನಟಿ ವಿಜಯಲಕ್ಷ್ಮೀ ಕಾಣಿಕೊಂಡಿದ್ದಾರೆ. ಅದ್ಭುತ ನಟನೆಯಿಂದ ಈಗಾಗಲೇ ಸಾಕಷ್ಟು ವೀಕ್ಷಕರ ಮನಸ್ಸಿನಲ್ಲಿ ಜಾಗವನ್ನು ಭದ್ರವಾಗಿ ಉಳಿಸಿಕೊಂಡಿದ್ದಾರೆ. ಈ ಮಧ್ಯೆ ನಟಿ ವಿಜಯಲಕ್ಷ್ಮೀ ತನ್ನ ತಾಯಿಯ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ತನ್ನ ತಾಯಿ ತನಗೆಷ್ಟು ಮುಖ್ಯ ಅನ್ನೋದನ್ನ ಮನತುಂಬಿ ಹೇಳಿಕೊಂಡಿದ್ದಾರೆ.
ನಟನೆ ಸಂಬಂಧ ನಾನು ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಅಪಘಾತದಲ್ಲಿ ನನ್ನ ಕಾಲಿಗೆ ತುಂಬಾ ಪೆಟ್ಟಾಗಿತ್ತು. ಆಗ ನನ್ನ ಅಮ್ಮ ತುಂಬಾನೇ ನೊಂದುಕೊಂಡರು. ಮಧ್ಯರಾತ್ರಿಯೆಲ್ಲ ಕಣ್ಣೀರು ಇಡುತ್ತ ಕೂತಿದ್ದರು. ಎರಡು ತಿಂಗಳು ಮಧ್ಯರಾತ್ರಿ ಎದ್ದು ಅಳೋರು. ನನ್ನ ಕಾಲನ್ನು ಸವರೋರು. ಅವರು ಅಳುತ್ತಿರಬೇಕಾದರ ಕಣ್ಣಿರು ನನ್ನ ಮೈಮೇಲೆ ಬೀಳುತ್ತಿತ್ತು. ಅಮ್ಮ ಅದು ಕೆಟ್ಟ ಘಳಿಗೆ, ಅದೇನೋ ತಪ್ಪು ನಡೆದು ಹೋಯಿತು. ನೀನು ನನ್ನನ್ನು ಬೆಂಗಳೂರಿಗೆ ಕಳುಹಿಸಿದ್ದರಿಂದ ಅಲ್ಲ.
ವಿಜಯಲಕ್ಷ್ಮೀ, ಲಕ್ಷಣ ನಟಿ
ಸ್ವತಃ ವಿಜಯಲಕ್ಷ್ಮೀ ಅವರ ತಾಯಿಯೇ ವೇದಿಕೆಗೆ ಬಂದು ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ. ಮಗಳ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ನವಿರಾದ ಅಮ್ಮ ಮಗಳ ಸಂಬಂಧವನ್ನ ಸೆಲೆಬ್ರೇಟ್ ಮಾಡೋ ಮೂಲಕ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಗೆ ಗೌರವ ಹೆಚ್ಚಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post