ಕಿರುತೆರೆಯ ಲೆಕ್ಕಾಚಾರ ಪ್ರತಿ ವಾರ ಬದಲಾಗುತ್ತಾನೇ ಇರುತ್ತದೆ. ಈ ವಾರ ಯಾವ ಸೀರಿಯಲ್ಗಳು ಯಾವ್ ಯಾವ ಪ್ಲೇಸ್ಗಳಲ್ಲಿ ಇದೆ ಅಂತ ಮಾಹಿತಿ ಲಭ್ಯವಾಗಿದೆ. ಕಳೆದ 15 ದಿನಗಳ ಹಿಂದೆ ಎರಡು ಹೊಸ ಸೀರಿಯಲ್ಗಳು ಲಾಂಚ್ ಆಗಿದ್ದವು. ಆದರೆ ಕಳೆದ ವಾರ ಎರಡು ಸೀರಿಯಲ್ಗಳ ಟಿಆರ್ಪಿ ಅಂದುಕೊಂಡಷ್ಟೇನು ಬರ್ಲಿಲ್ಲ. ಆದ್ರೆ ಈ ವಾರ ಆ ಎರಡರಲ್ಲಿ ಒಂದು ಸೀರಿಯಲ್ ತನ್ನ ಗ್ರಾಫ್ ರೈಸ್ ಮಾಡಿಕೊಂಡಿದೆ.ಹೌದು ಪುಣ್ಯವತಿ ಸೀರಿಯಲ್ ಕಳೆದ ವಾರ ತೀರ ಕಮ್ಮಿ ಟಿಆರ್ಪಿ ಪಡೆದುಕೊಂಡಿತ್ತು ಅಂದ್ರೆ 3.5 ಟಿವಿಆರ್ ಪಡೆದುಕೊಂಡಿತ್ತು. ಆದ್ರೆ ಈ ಬಾರಿ ಪುಣ್ಯವತಿ ತನ್ನ ಗ್ರಾಫ್ನ ಒಂದು ಸ್ಟೆಪ್ ರೈಸ್ ಮಾಡಿಕೊಂಡಿದೆ. ಈ ವಾರ 3.5 ಟಿವಿಆರ್ ಪಡೆಯೋ ಮೂಲಕ ಸ್ಲಾಟ್ ಲೀಡರ್ ಆಗಿ ರಾರಾಜಿಸ್ತಿದ್ದಾಳೆ ಪುಣ್ಯವತಿ. ತ್ರಿಪುರ ಸುಂದರಿ ಧಾರಾವಾಗಿ ಎಲ್ಲರಿಗೂ ಅತೀ ಹೆಚ್ಚು ಕೂತೂಹಲವಿದ್ದ ಧಾರಾವಾಹಿ. ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಹೌದು ಆದ್ರೆ ಟಿಆರ್ಪಿ ವಿಷಯದಲ್ಲಿ ತ್ರಿಪುರ ಸುಂದರಿಗೆ ಹೊಡೆತ ಬಿಳ್ತಿದೆ. ಈ ಕತೆಗೆ ಸ್ಕ್ರೀನ್ ಪ್ಲೇ ವಿಶ್ಯೂಲ್ಸ್ಗೆ ಅಂದುಕೊಂಡಂತ ಟಿಆರ್ಪಿ ದಕ್ಕಿಲ್ಲ. ಈ ವಾರ 4.3 ಟಿವಿಆರ್ಗೆ ತೃಪ್ತಿ ಕಂಡಿದೆ ಈ ಸೀರಿಯಲ್.
ಇನ್ನು, ಮೊದಲ ಸ್ಥಾನದಲ್ಲಿ ಗಟ್ಟಿಮೇಳ 10.4 ಟಿವಿಆರ್ ಪಡೆಯೋ ಮೂಲಕ ಎಲ್ಲರ ಮನಗೆದ್ದಿದೆ. ಎರಡನೇ ಸ್ಥಾನದಲ್ಲಿ 9.9 ಟಿವಿಆರ್ ಪಡೆದು ಪುಟ್ಟಕ್ಕನ ಮಕ್ಕಳು ಸ್ಥಾನ ಅಲಂಕರಿಸಿದೆ. ಮೂರನೇ ಸ್ಥಾನದಲ್ಲಿ 8.8 ಟಿವಿಆರ್ ಪಡೆದು ಶ್ರೀರಸ್ತು ಶುಭಮಸ್ತು ಇದೆ. ನಾಲ್ಕನೇ ಸ್ಥಾನದಲ್ಲಿ 7.3 ಟಿವಿಆರ್ ಪಡೆಯೋ ಮೂಲಕ ಸತ್ಯ ಗೆದ್ದಿದ್ದಾಳೆ.
ಕೊನೆಯ ಐದನೇ ಸ್ಥಾನದಲ್ಲಿ 7.0 ಟಿವಿಆರ್ ಪಡೆಯೋ ಮೂಲಕ ಭಾಗ್ಯಲಕ್ಷ್ಮೀ ಮಿಂಚ್ತಿದೆ. ರಿಯಾಲಿಟಿ ಶೋಗಳ ಕಡೆ ಮುಖ ಮಾಡೋದಾದ್ರೆ ಸರಿಗಮಪ 11.2 ಟವಿಆರ್ ಪೆಡೆದುಕೊಂಡಿದೆ. ಕಾಮಿಡಿ ಕಿಲಾಡಿಗಳು 8.7 ಟಿವಿಆರ್ ಪಡೆದುಕೊಂಡಿದೆ. ಸೂಪರ್ ಕ್ವೀನ್ಸ್ 5.0 ಟಿವಿಆರ್ ಪಡೆದುಕೊಂಡಿದೆ. ನನ್ನಮ್ಮ ಸೂಪಪರ್ ಸ್ಟಾರ್ 3.2 ಟಿವಿಆರ್ ಪಡೆದುಕೊಂಡಿದೆ. ಕಿರುತೆರೆಯ ಲೆಕ್ಕಾಚಾರಗಳು ಬದಲಾಗ್ತಾನೆ ಇರ್ತಾವೆ ವೀಕ್ಷಕರು ಇಷ್ಟ ಪಟ್ಟರೆ ಮಾತ್ರ ಸ್ಮಾಲ್ ಸ್ಕ್ರೀನ್ನಲ್ಲಿ ಧಾರಾವಾಹಿಗಳಿಗೆ ಅವಕಾಶ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post