ದೇಶ ಕಂಡ ಉತ್ತಮ ಪ್ರಧಾನಿಗಳ ಸಾಲಿನಲ್ಲಿರೋ ಪ್ರಧಾನಿ ಮೋದಿ ವಿರುದ್ಧ ವಿದೇಶಿ ನೆಲದಲ್ಲಿ ಅಪಪ್ರಚಾರದ ಅಲೆಯೊಂದು ಎದ್ದಿದೆ. ಪ್ರತಿಷ್ಠಿತ ಸುದ್ದಿ ಸಂಸ್ಥೆ ಮಾಡಿದ ಸಾಕ್ಷ್ಯ ಚಿತ್ರ ಮೋದಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ನರೇಂದ್ರ ಮೋದಿ ಭಾರತ ಕಂಡ ಧೀಮಂತ ನಾಯಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನ ಎತ್ತಿಹಿಡಿಯುತ್ತಿರೋ ಸಾರಥಿ. ಹಲವು ಏಳು ಬೀಳಿನ ಹಾದಿ, ರಾಜಕೀಯ ಏರಿಳಿತಗಳನ್ನೆಲ್ಲ ಎದುರಿಸಿ ದೇಶದ ಪ್ರಧಾನಿಯಾಗಿ ಭಾರತವನ್ನ ಮುನ್ನಡೆಸುತ್ತಿರೋ ವ್ಯಕ್ತಿ. ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿರೋ ಪ್ರಧಾನಿ. ಆದರೆ ವಿದೇಶಿ ನೆಲದಲ್ಲಿ ಮೋದಿ ಬಗ್ಗೆ ಎದ್ದಿರೋ ಒಂದು ಅಪಪ್ರಚಾರದ ಅಲೆ ಸದ್ಯ ಮೋದಿಯ ಅಪ್ತರು ಹಾಗೂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೋದಿ ಬೆನ್ನಿಗೆ ನಿಂತ ರಿಷಿ ಸುನಕ್; ಬ್ರಿಟನ್ ಸಂಸತ್ತಿನಲ್ಲಿ ಗುಜರಾತ್ ಗಲಭೆಯ ಗದ್ದಲ!
ಗುಜರಾತ್ ಗಲಭೆಗೆ ಮೋದಿ ಹೊಣೆ ಎಂದು ಪ್ರಚಾರ
ಬ್ರಿಟನ್ ಮೂಲದ ಬಿಬಿಸಿ ವಾಹಿನಿ ಪ್ರಧಾನಿ ಮೋದಿ ಅವರ ಕುರಿತಾದ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಎಂಬ ಸಾಕ್ಷ್ಯಚಿತ್ರವೊಂದನ್ನ ಬಿಡುಗಡೆ ಮಾಡಿದೆ. ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಈ ಸಾಕ್ಷ್ಯಚಿತ್ರದಲ್ಲಿ 2002ರಲ್ಲಿ ಗುಜರಾತ್ ನಡೆದ ಗಲಭೆಗೆ ಅಂದು ಗುಜರಾತ್ ಸಿಎಂ ಆಗಿದ್ದ ಮೋದಿಯೇ ಹೊಣೆ ಎಂಬ ರೀತಿ ಪ್ರಚಾರ ಮಾಡಲಾಗಿದೆ. ಬಿಬಿಸಿಯ ಈ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಪಕ್ಷಪಾತಿ ಧೋರಣೆಯುಳ್ಳ ಅಪಪ್ರಚಾರದ ತುಣಕು ಅಂತ ಕಿಡಿಕಾರಿದೆ.
ಸಾಕ್ಷ್ಯಚಿತ್ರದಿಂದ ಮೋದಿ ವಿರುದ್ಧ ಅಪಪ್ರಚಾರದ ‘ಅಜೆಂಡಾ’
ಬಿಬಿಸಿ ಬಿಡುಗಡೆ ಮಾಡಿರೋ ಸಾಕ್ಷ್ಯ ಚಿತ್ರದ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅಸಮಾಧಾನ ಹೊರಕಾಕಿದ್ದಾರೆ.
ಅಪಪ್ರಚಾರ ನಡೆಸಲು ಪಿತೂರಿ!
ಈ ಸಾಕ್ಷ್ಯಚಿತ್ರ ಪಕ್ಷಪಾತಿಯಾಗಿದ್ದು, ಮೋದಿ ಬಗ್ಗೆ ಅಪಪ್ರಚಾರ ನಡೆಸಲು ಪಿತೂರಿ ನಡೆಸಲಾಗಿದೆ. ಸಾಕ್ಷ್ಯ ಚಿತ್ರ ವಸ್ತುನಿಷ್ಠತೆ ಕೊರತೆಯಿಂದ ಕೂಡಿದೆ, ಈ ಚಿತ್ರಕ್ಕೆ ಯಾವುದೇ ಯೋಗ್ಯತೆ ಇಲ್ಲ. ಈ ಚಿತ್ರದ ಹಿಂದೆ ಬೇರೆಯದೇ ಅಜೇಂಡ ಇದ್ದು, ಸಾಕ್ಷ್ಯಚಿತ್ರ ಪ್ರದರ್ಶನವು ವಸಾಹತುಶಾಹಿ ಮನಸ್ಥಿತಿಯನ್ನ ತೋರಿಸುತ್ತಿದೆ.
– ಅರಿಂದಮ್ ಬಾಗ್ಚಿ, ವಿದೇಶಾಂಗ ಇಲಾಖೆ ವಕ್ತಾರ
ಸಾಕ್ಷ್ಯ ಚಿತ್ರದ ಬಗ್ಗೆ ಮೋದಿ ಬೆನ್ನಿಗೆ ನಿಂತ ರಿಷಿ ಸುನಕ್
ಸಾಕ್ಷ್ಯ ಚಿತ್ರದ ವಿಚಾರದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪ್ರಧಾನಿ ಮೋದಿಯನ್ನು ಸಮರ್ಥಿಸಿಕೊಂಡಿದ್ದಾರೆ. ಬ್ರಿಟನ್ ಸಂಸತ್‌ನಲ್ಲಿ ಡಾಕ್ಯುಮೆಂಟ್ರಿ ಬಗ್ಗೆ ಪಾಕ್ ಮೂಲದ ಸಂಸದ ಇಮ್ರಾನ್ ಹುಸೇನ್ ಪ್ರಸ್ತಾಪಿಸಿದ್ರು. ಇದಕ್ಕೆ ರಿಶಿ ಸುನಕ್ ತಿರುಗೇಟು ನೀಡಿದ್ದಾರೆ.
ಈ ಪಾತ್ರವನ್ನ ನಾನು ಒಪ್ಪುವುದಿಲ್ಲ
ಗುಜರಾತ್ ಗಲಭೆ ಬಗ್ಗೆ ಬ್ರಿಟನ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲೀಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಖಂಡಿತವಾಗಿಯೂ, ನಾವು ಎಲ್ಲಿಯೂ ಕಿರುಕುಳವನ್ನು ಸಹಿಸುವುದಿಲ್ಲ. ಆದರೆ ಸಾಕ್ಷ್ಯ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನ ಬಿಂಬಿಸಿರುವ ರೀತಿಯನ್ನ ನಾನು ಒಪ್ಪುವುದಿಲ್ಲ.
– ರಿಷಿ ಸುನಕ್, ಬ್ರಿಟನ್ ಪ್ರಧಾನಿ
ಸದ್ಯ ವಿದೇಶಿ ನೆಲದಲ್ಲಿ ಎದ್ದಿರೋ ಈ ಮೋದಿ ಅಪಪ್ರಚಾರದ ಅಲೆ ದೇಶಿ ಅಭಿಮಾನಿಗಳನ್ನ ಕೆರಳುವಂತೆ ಮಾಡಿದೆ. ವಿವಾದದ ಬೆನ್ನಲ್ಲೇ ಬಿಬಿಸಿ ‘ಮೋದಿ ಪ್ರಶ್ನೆ’ ಎಂಬ ಶೀರ್ಷಿಕೆಯನ್ನ ಸಹ ತೆಗೆದು ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post