ವೀಕೆಂಡ್ ಮಾತ್ರ ಬ್ಯಾಕ್ ಟೂ ಬ್ಯಾಕ್ ರಿಯಾಲಿಟಿ ಎಂಟರ್ಟೈನ್ಮೆಂಟ್ ಮಾತ್ರ ಮಿಸ್ ಆಗಲ್ಲ. ಬ್ಯಾಕ್ ಟೂ ಬ್ಯಾಕ್ ಶೋಸ್ಗಳು ನಿಮ್ಮನ್ನ ವಾರಂತ್ಯದಲ್ಲಿ ರಂಜಿಸುತ್ತಾ ಇರುತ್ತವೆ. ಸದ್ಯ ಹೊಸ ರಿಯಾಲಿಟಿ ಶೋ ಬರಲಿದೆ ಎಂಬ ಗಾಳಿ ಸುದ್ದಿ ಹರಿದಾಡ್ತಿದೆ. ಕಾಮಿಡಿ ಮಾಡಿ ನಗುವಿನ ಅಲೆಯಲ್ಲಿ ತೇಲಿಸ್ತಿದ್ದಾರೆ ಕಿಲಾಡಿಗಳು, ಅದೆಷ್ಟು ನೋವುಂಡ ಮನಸ್ಸುಗಳಿಗೆ ಕಾಮಿಡಿ ಮಾಡಿ ನಕ್ಕು ನಗಿಸಿ ನಮ್ ಕಿಲಾಡಿಗಳು ಸಾಂತ್ವನ ಹೇಳ್ತಿದ್ದಾರೆ.
ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ 04 ಅಂತ್ಯವಾಗಲಿದೆ. ಇನ್ನೊಂಷ್ಟು ವಾರಗಳ ನಂತರ ಕಾಮಿಡಿ ಕಿಲಾಡಿಗಲು ಫಿನಾಲೆ ಹಂತ ತಲುಪಲಿದ್ದಾರೆ. ಈ ಸೀನ್ ಒಬ್ಬ ಕಂಟೆಸ್ಟೆಂಟ್ ವಿನ್ನರ್ ಪಟ್ಟ ಅಲಂಕರಿಲಿದ್ದಾರೆ. ಈ ಶೋ ಮುಗಿದ ನಂತರ ನಿಮ್ಮೆಲ್ಲರ ನೆಚ್ಚಿನ ಮೋಸ್ಟ್ ಅವೈಟೆಡ್ ರಿಯಾಲಿಟಿ ಶೋ ವಿಕೇಂಡ್ ವಿಥ್ ರಮೇಶ್ ಬರಲಿದೆ ಎಂಬ ಮಾಹಿತಿ ಹರಿದಾಡ್ತಿದೆ.
ಸದ್ಯ ಈ ರಿಯಾಲಿಟಿ ಶೋ ಬರಬೇಕು ಅನ್ನೋದು ಅದೇಷ್ಟೋ ಅಭಿಮಾನಿಗಳ ಕೋರಿಕೆ. ಅದರಂತೆಯೆ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮುಗಿದ ನಂತರದಲ್ಲಿ ವಿಕೇಂಡ್ ವಿಥ್ ರಮೇಶ್ ಬರಲಿದೆ. ಒಟ್ಟಿನಲ್ಲಿ ಒಂದರ ಅಂತ್ಯದಿಂದ ಮತ್ತೊಂದರ ಆರಂಭವಿರಲಿದೆ ಅನ್ನೋ ಮಾತಿನಂತೆ ಅಭಿಮಾನಿಗಳು ವಿಕೇಂಡ್ ವಿಥ್ ರಮೆಶ್ ರಿಯಾಲಿಟಿ ಶೋವನ್ನು ಎದುರು ನೋಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post