ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ದೈತ್ಯ ಕಂಪನಿಗಳು ಉದ್ಯೋಗಿಗಳನ್ನ ವಜಾ ಮಾಡುವ ಪರಿಪಾಠ ಆರಂಭವಾಗಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳಾದ ಟ್ವಿಟ್ಟರ್, ಅಮೆಜಾನ್, ಮೆಟಾ ಈಗಾಗಲೇ ಉದ್ಯೋಗಿಗಳನ್ನು ವಜಾ ಮಾಡಿವೆ. ಇದೀಗ ಈ ಲಿಸ್ಟ್‌ಗೆ ಗೂಗಲ್ ಕೂಡಾ ಸೇರ್ಪಡೆಯಾಗಿದೆ.
ಗೂಗಲ್ ತಂತ್ರಜ್ಞಾನದ ದೈತ್ಯ ಕಂಪನಿ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರೋ ಕಂಪನಿ. ಆದ್ರೀಗ ಆರ್ಥಿಕ ಹೊಡೆತದ ಅಲೆಗೆ ಈ ಟೆಕ್ನಾಲಜಿ ದೈತ್ಯ ಕೂಡಾ ಕುಗ್ಗಿಹೋಗಿದೆ. ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡ್ತಿರೋ ಲಿಸ್ಟ್‌ಗೆ ಗೂಗಲ್ ಕೂಡಾ ಸೇರಿ ಬಿಟ್ಟಿದೆ.
12 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಿದ ಗೂಗಲ್
ಅಮೆರಿಕಾದ ಬಹುತೇಕ ಕಂಪನಿಗಳು ಕಷ್ಟಕರ ಆರ್ಥಿಕ ಪರಿಸ್ಥಿತಿಯನ್ನ ಎದುರಿಸುತ್ತಿವೆ. ಹೀಗಾಗಿ ಆರ್ಥಿಕ ಬರೆಯಿಂದ ಬಚಾವ್ ಆಗಲು ಕಂಪನಿಯ ಉದ್ಯೋಗಿಗಳನ್ನ ಕಟ್ ಆಫ್ ಮಾಡುತ್ತಿದೆ. ಇದೀಗ ಜಗನತ್ತಿನ ತಂತ್ರಜ್ಞಾನದ ದೈತ್ಯ ಅಂತಲೇ ಕರೆಸಿಕೊಳ್ಳೋ ಗೂಗಲ್ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡೋದಾಗಿ ಘೋಷಿಸಿದೆ. ಈ ಸುದ್ದಿಯನ್ನ ಕೇಳಿ ವಿಶ್ವದಾದ್ಯಂತ ಗೂಗಲ್‌ನಲ್ಲಿ ಕೆಲಸ ಮಾಡ್ತಿರೋ ಉದ್ಯೋಗಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಈ ಬಗ್ಗೆ ಗೂಗಲ್ ಸಿಇಒ ತಮ್ಮ ಉದ್ಯೋಗಿಗಳಿಗೆ ಭಾವನಾತ್ಮಕ ಸಂದೇಶವನ್ನ ಕಳುಹಿಸಿದ್ದಾರೆ.
‘12,000 ಉದ್ಯೋಗಿಗಳ ಕಡಿತ’
ನಾನು ನಿಮ್ಮ ಜೊತೆ ಕಷ್ಟದ ಸುದ್ದಿಯೊಂದನ್ನ ಹಂಚಿಕೊಳ್ಳುತ್ತಿದ್ದೇನೆ. ಸುಮಾರು 12 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಲು ನಾವು ನಿರ್ಧರಿಸಿದ್ದೇವೆ. ಈಗಾಗಲೇ ವಜಾಗೊಂಡ ಅಮೆರಿಕಾದ ಉದ್ಯೋಗಿಗಳಿಗೆ ಈಗಾಗಲೇ ಪ್ರತ್ಯೇಕ ಇಮೇಲ್ ಕಳುಹಿಸಿದ್ದೇವೆ. ಇತರೆ ದೇಶಗಳಲ್ಲ ಉದ್ಯೋಗಿಗಳಿಗೂ ಇಮೇಲ್ ಬರಲಿದೆ. ಆದ್ರೆ, ಸ್ಥಳೀಯ ಕಾನೂನುಗಳ ಪ್ರಕ್ರಿಯೆಯಿಂದ ಇ-ಮೇಲ್ ಬರೋದು ಸ್ವಲ್ಪ ತಡವಾಗಲಿದೆ. ಪ್ರತಿಭಾವಂತ ಜನರಿಗೆ ವಿದಾಯ ಹೇಳುವುದು ಕಷ್ಟಕರವಾದ ಕೆಲಸ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ.
-ಸುಂದರ್ ಪಿಚೈ, ಗೂಗಲ್ ಸಿಇಒ
16 ವಾರಗಳ ಸಂಬಳ, 2 ವಾರದ ಬೇರ್ಪಡಿಕೆ ಪ್ಯಾಕೇಜ್
ಇನ್ನೂ ವಜಾಗೊಳಿಸುವ ಉದ್ಯೋಗಿಗಳಿಗೆ ಗೂಗಲ್ ಕಂಪನಿ ಕೆಲವೊಂದು ಆಸರೆಗಳನ್ನೂ ನೀಡಲು ಮುಂದಾಗಿದೆ. ಅದೇನು ಅಂತಾ ನೋಡೋದಾದ್ರೆ. ಕನಿಷ್ಠ 60 ದಿನಗಳ ನೋಟಿಸ್ ಪಿರಿಡ್ ವೇತನವನ್ನ ಉದ್ಯೋಗಿಗಳಿಗೆ ನೀಡುತ್ತೇವೆ ಅಂತಾ ಗೂಗಲ್ ತಿಳಿಸಿದೆ. ಅಲ್ಲದೇ 16 ವಾರಗಳ ಸಂಬಳ, 2 ವಾರಗಳ ಬೇರ್ಪಡಿಕೆ ಪ್ಯಾಕೇಜ್, 2022ರ ಬೋನಸ್, ಉಳಿದ ರಜೆಯ ವೇತನವನ್ನೂ ನೀಡಲು ನಿರ್ಧರಿಸಿದೆ. ಇದಲ್ಲದೇ ಅನಾರೋಗ್ಯ ಪೀಡಿತ ನೌಕರರಿಗೆ 6 ತಿಂಗಳ ಆರೋಗ್ಯ ಸೇವೆ ಒದಗಿಸ್ತೇವೆ. ಜೊತೆಗೆ ವಜಾಗೊಡ ನೌಕರರಿಗೆ ಇಮಿಗ್ರೇಷನ್ ಸೇವೆ ಒದಗಿಸುವುದಾಗಿಯೂ ಗೂಗಲ್ ಭರವಸೆ ನೀಡಿದೆ.
ಕೊರೊನಾ ಕೊಟ್ಟ ಎಫೆಕ್ಟ್‌ನಿಂದ ಇಷ್ಟೆಲ್ಲಾ ಆರ್ಥಿಕ ಹಿಂಜರಿಕೆ ಆಗಿದೆ. ಇದು ದೈತ್ಯ ಕಂಪನಿಗಳ ಮೇಲೆ ನೇರವಾಗಿ ಪರಿಣಾಮ ಬೀರಿದ್ದು, ಕಾಸ್ಟ್ ಕಟಿಂಗ್ ಹೆಸರಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡ್ತಿರೋದು ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post