ಬೆಳಗಾವಿ: ‘ಕೆಟ್ಟ ಹುಳ’. ಆರು ಸಾವಿರ ದುಡ್ಡು ಕೊಟ್ರೆ ವೋಟ್ ಹಾಕಿ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಖರ್ಚು ಮಾಡ್ತಾರೋ ಅದಕ್ಕಿಂತ 10 ಕೋಟಿ ಹೆಚ್ಚು ಖರ್ಚು ಮಾಡ್ತೀನಿ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನುಡಿದ ಒಂದೊಂದು ಮಾತು ಕುಂದಾನಗರಿ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಲಕ್ಷ್ಮೀ ಸೋಲಿಗೆ ಸಾಹುಕಾರ್ ಪಣ!
ನಿನ್ನೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ನಡೆಸಿದ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ಸೋಲಿಸಲು ಪಣತೊಟ್ಟಿದ್ದಾರೆ. ಇದಕ್ಕೆ ಇಂದು ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಗೆಲ್ಲೋಕೆ ಚುನಾವಣೆ ನಿಲ್ಲುತ್ತೇನೆ. ಸೋಲಿಸಲು ಪ್ರಯತ್ನ ಮಾಡೋರು ಸೋಲಿಸೋಕೆ ಪ್ರಯತ್ನ ಮಾಡ್ತಾರೆ ನೋಡೋಣ. ಕಾಲಾಯ ತಸ್ಮೈ ನಮಃ ಎಂದಿದ್ದಾರೆ.
ಮೋರ್ ಎನಿಮಿಸ್ ಮೋರ್ ಸ್ಟ್ರಾಂಗ್
‘ಕೆಟ್ಟ ಹುಳ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಇದು ಅವರ ಸಂಸ್ಕೃತಿಯನ್ನು ತೋರಿಸುತ್ತೆ. ನಾನು ಇಡೀ ಬಿಜೆಪಿ ಪಕ್ಷವನ್ನು ಬೈಯ್ಯಲಿಕ್ಕೆ ಹೋಗಲ್ಲ. ಅವರು ಮುಂಚೆಯಿಂದ ಹೆಣ್ಣು ಮಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಮ್ಮ ಗುರುಗಳು ಯಾವಾಗಲೂ ಒಂದು ಮಾತು ಹೇಳ್ತಾರೆ. ಮೋರ್ ಎನಿಮಿಸ್ ಮೋರ್ ಸ್ಟ್ರಾಂಗ್. ಲೆಸ್ ಎನಿಮಿಸ್ ಲೆಸ್ ಸ್ಟ್ರಾಂಗ್, ನೋ ಎನಿಮಿಸ್ ನೋ ಸ್ಟ್ರಾಂಗ್ ಎಂದು ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.
ಮೂರ್ಖತನದ ಪರಮಾವಧಿ
ಆರು ಸಾವಿರ ದುಡ್ಡು ಹಾಕಿದ್ರೆ ವೋಟ್ ಹಾಕಿ ಎನ್ನುವುದು ಮೂರ್ಖತನದ ಪರಮಾವಧಿ. ನನ್ನ ಕ್ಷೇತ್ರದ ಮತದಾರರು ಬಹಳಷ್ಟು ಸ್ವಾಭಿಮಾನಿಗಳು. ಅವರಿಗೆ ಗೊತ್ತಿದೆ ಯಾರು ಏನೂ ಅಂತಾ ಇದನ್ನ ನಾನು ಜನರೇ ತೀರ್ಮಾನ ಮಾಡಲು ಬಿಡ್ತೀನಿ. ನಾನು ಒಬ್ಬ ಮಹಿಳೆಯಾಗಿ ಜವಾಬ್ದಾರಿಯುತ ಶಾಸಕಿಯಾಗಿ ಇಷ್ಟೇ ಹೇಳ್ತೇನೆ. ಸರ್ಕಾರ ಅವರದ್ದಿದೆ, ಮೇಲಿಂದೂ ಕೆಳಗಿಂದೂ ಅಧಿಕಾರಿಗಳು ಅವರ ಮಾತುಗಳನ್ನು ಕೇಳುತ್ತಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ದುಡ್ಡು ಹಂಚಿದ ಫೋಟೋ ರಿಲೀಸ್
ನಾನು 6 ಎಲೆಕ್ಷನ್‌ನಲ್ಲಿ ಗೆದ್ದಿದ್ದೇನೆ. ಆದ್ರೆ ದುಡ್ಡು ಹಂಚಿಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೂ ಕಾಂಗ್ರೆಸ್ ಟಾಂಗ್ ನೀಡಿದೆ. ಗೋಕಾಕ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಶೋಕ ಪೂಜಾರಿ, 2018ರ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ದುಡ್ಡು ಹಂಚುತ್ತಿದ್ದ ಫೋಟೋ, FIR ಪ್ರತಿ ಬಿಡುಗಡೆ ಮಾಡಿದ್ದಾರೆ. 2018ರಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮೇಲೆ ದುರ್ಗಾ ಮಂದಿರದಲ್ಲಿ ಹಣ ಹಂಚಿದ ಆರೋಪವಿದೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post