ಪ್ರಪಂಚದ ಬಹುತೇಕ ದೇಶಗಳು ನೀರಿನ ಸಂರಕ್ಷಣೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಗಮನಕ್ಕೆ ಬಂದಿರಬಹುದು. ಅಷ್ಟೇ ಏಕೆ ಇಂದು ಭಾರತದಲ್ಲೇ ಒಂದು ಬಾಟಲಿ ನೀರಿನ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಇನ್ನು ವಿದೇಶದಲ್ಲಂತೂ ಹೇಳೋದೆ ಬೇಡ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಲ್ಲೊಂದು ರೆಸ್ಟೋರೆಂಟ್ ಏನು ಮಾಡುತ್ತಿದೆ ಗೊತ್ತಾ? ಟಾಯ್ಲೆಟ್ ನೀರನ್ನು ಮರುಬಳಸಿ ಗ್ರಾಹಕರಿಗೆ ನೀಡುತ್ತಿದೆ.
ಗೆಸ್ಟ್ಯಾಕ್ಸ್ ರೆಸ್ಟೋರೆಂಟ್ ತಮ್ಮ ಬಳಿ ಬರುವ ಗ್ರಾಹಕರಿಗೆ ಶೌಚಾಲಯದ ನೀರನ್ನು ಮರುಬಳಸಿ ಕೊಡುತ್ತಿದೆ. ಈ ನೀರನ್ನು ಕುಡಿಯಲು ಸಹ ನೀಡುತ್ತಾರಂತೆ. ಸಾಮಾನ್ಯ ನೀರಿನಂತೆಯೇ ಈ ನೀರು ಇರುತ್ತದೆ. ಯಾವುದೇ ಬಣ್ಣ ಮತ್ತು ವಾಸನೆಯನ್ನು ಹೊಂದಿಲ್ಲ. ಟಾಯ್ಲೆಟ್ ನೀರನ್ನು ತಂತ್ರಜ್ಞಾನ ಬಳಸಿಕೊಂಡು 5 ಹಂತದಲ್ಲಿ ಶುದ್ಧೀಕರಿಸುತ್ತಾರೆ.
ಬೆಲ್ಜಿಯಂನ ಗೆಸ್ಟ್ಯಾಕ್ಸ್ ರೆಸ್ಟೋರೆಂಟ್ನಲ್ಲಿ ಟಾಯ್ಲೆಟ್ ನೀರನ್ನು ಕುಡಿಯುವ ನೀರಿನಿಂದ ಹಿಡಿದು, ಕಾಫಿ ತಯಾರಿಸಲು ಮತ್ತು ಬಿಯರ್ ತಯಾರಿಸಲು ಸಹ ಬಳಸುತ್ತಾರೆ.
ಅಂದಹಾಗೆಯೇ ಪ್ರಾರಂಭದಲ್ಲಿ ಟಾಯ್ಲೆಟ್ ನೀರನ್ನು ಕೆಮಿಕಲ್ ಬಳಸಿ ಶುದ್ಧಗೊಳಿಸಿ ಸಸ್ಯಗಳಿಗೆ ಉಪಯೋಗಿಸಲಾಗುತ್ತದೆ. ಬಳಿಕ ಅದಕ್ಕೆ ಮಳೆ ನೀರನ್ನು ಮಿಶ್ರಣ ಮಾಡಿ ಶುದ್ಧೀಕರಿಸಲಾಗುತ್ತದೆ. ಬಳಿಕ ಈ ನೀರನ್ನು ಕುಡಿಯಲು ಮತ್ತು ಕಾಫಿ ತಯಾರಿಸಲು ಬಳಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post