ಬೆಂಗಳೂರು: ನಾನು ಕನಕಪುರದಲ್ಲೇ ಸ್ಪರ್ಧೆ ಮಾಡೋದು. ಮದ್ದೂರು, ಮಂಡ್ಯದವರು ಬನ್ನಿ, ಬನ್ನಿ ಅಂತಾ ಕರೆಯುತ್ತಿದ್ದಾರೆ. ಆದ್ರೆ, ನಾನು ಸ್ಪರ್ಧೆ ಮಾಡೋದು ಕನಕಪುರದಲ್ಲೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸಿದ್ದು ಮಾದರಿಯಲ್ಲೇ ಡಿಕೆ ಮದ್ದೂರಿನಿಂದ ಸ್ಪರ್ಧೆ?; ಮಗಳು, ಅಳಿಯನಿಗಾಗಿ ರೆಡಿ ಆಗ್ತಿದ್ಯಾ ಕನಕಪುರ?
‘ನನ್ನ ಕುಟುಂಬದಿಂದ ಯಾರೂ ಬರಲ್ಲ’
ಡಿಕೆ ಶಿವಕುಮಾರ್ ಅವರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಡ ಏರಲಾಗಿತ್ತು. ಒಂದು ವೇಳೆ ಡಿಕೆಶಿ ಮನಸು ಮಾಡಿದ್ರೆ ಕನಕಪುರವನ್ನ ಮಗಳು ಐಶ್ವರ್ಯಾ ಅಥವಾ ಅಳಿಯ ಅಮಾರ್ತ್ಯ ಹೆಗ್ಡೆ ಅವರಿಗೆ ಬಿಟ್ಟು ಕೊಡೋ ಲೆಕ್ಕಾಚಾರಗಳು ಕೇಳಿ ಬಂದಿತ್ತು. ಈ ಊಹಾಪೋಹಗಳಿಗೆಲ್ಲಾ ಖುದ್ದು ಡಿಕೆ ಶಿವಕುಮಾರ್ ಅವರೇ ಇದೀಗ ಫುಲ್ ಸ್ಟಾಪ್ ಇಟ್ಟಿದ್ದಾರೆ. ನನ್ನ ಕುಟುಂಬದವರು ಯಾರೂ ಕೂಡ ರಾಜಕಾರಣಕ್ಕೆ ಬರಲು ಬಿಡೋದಿಲ್ಲ. ನಾನು ರಾಜಕಾರಣದಲ್ಲಿ ಇರೋವರೆಗೂ ಅದಕ್ಕೆ ಅವಕಾಶವಿಲ್ಲ. ನಾನು ಕನಕಪುರದಲ್ಲೇ ಸ್ಪರ್ಧಿಸುತ್ತಿದ್ದೇನೆ ಎಂದು ನ್ಯೂಸ್ ಫಸ್ಟ್‌ಗೆ ಡಿಕೆಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post