ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ. ಕಂಕಣಭಾಗ್ಯ ಕೂಡಿ ಬಂದ ಮೇಲೆ ಹಲವರ ಲೈಫೇ ಚೇಂಜ್ ಆಗಿದೆ. There is a woman Behind Every Successful Man.! ಈ ಮಾತು ಸುಳ್ಳಲ್ಲ. ಹಲವರ ಬಾಳಲ್ಲಿ ಇದು ನಿಜ ಆಗಿದೆ. ಕ್ರಿಕೆಟರ್ಸ್ ಲೈಫ್ ಕೂಡ ಇದಕ್ಕೆ ಹೊರತಾಗಿಲ್ಲ. ಪತ್ನಿ, ಗರ್ಲ್ಫ್ರೆಂಡ್ ಬಂದ್ಮೇಲೆ ಹಲವು ಕ್ರಿಕೆಟರ್ಸ್ ಲೈಫ್ ಕಂಪ್ಲೀಟ್ ಚೇಂಜ್ ಆಗಿದೆ. ಅದೃಷ್ಟನೋ, ಕಾಲ್ಗುಣನೋ ಗೊತ್ತಿಲ್ಲ. ಅದ್ರೆ, ಕೆಲ ಕ್ರಿಕೆಟರ್ಸ್ ಮದುವೆಯಾದ ಮೇಲೆ ಹೆಚ್ಚು ಸಕ್ಸಸ್ ಕಂಡಿದ್ದಾರೆ.
ಅನುಷ್ಕಾ ಕೈ ಹಿಡಿದ ಮೇಲೆ ಕೊಹ್ಲಿ ಮತ್ತಷ್ಟು ಸಕ್ಸಸ್
ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನ ಮದುವೆಯಾದ್ರು. ಮದುವೆಗೆ ಮುನ್ನವೂ ಕೊಹ್ಲಿ ಜಬರ್ದಸ್ತ್ ಪ್ರದರ್ಶನವನ್ನೇ ನೀಡಿದ್ರು. ಆದ್ರೆ, ಅನುಷ್ಕಾ ಕೈ ಹಿಡಿದ ಮೇಲೆ ಕೊಹ್ಲಿ ಮತ್ತಷ್ಟ ಯಶಸ್ಸು ಕಂಡ್ರು. ಅವ್ರ ಅದೃಷ್ಟ ಬದಲಾಯ್ತು.
ಮದುವೆ ನಂತರ ಕೊಹ್ಲಿ ಎರಡು ಫಾರ್ಮೆಟ್ನಲ್ಲಿ 18 ಶತಕ
ಮದುವೆಗೂ ಮುನ್ನ ಟೆಸ್ಟ್ ತಂಡಕ್ಕೆ ಮಾತ್ರ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಮದುವೆ ನಂತರ ಮೂರು ಫಾರ್ಮೆಟ್ಗೂ ನಾಯಕರಾದ್ರು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ರು. ಇನ್ನು ಬ್ಯಾಟಿಂಗ್ನಲ್ಲೂ ಕೊಹ್ಲಿ ಮಿಂಚಿದ್ರು. 2017 ರಿಂದ 2019 ರವರೆಗೆ ಕೊಹ್ಲಿ, ಒಟ್ಟು 7 ಟೆಸ್ಟ್ ಸೆಂಚುರಿ, 11 ಒನ್ಡೇ ಸೆಂಚುರಿ ಸಿಡಿಸಿದ್ರು.
ವಿರಾಟ್ ಕೊಹ್ಲಿ ಅಷ್ಟೇ ಅಲ್ಲ, ರೋಹಿತ್ ಶರ್ಮಾರ ಕರಿಯರ್ ಗ್ರಾಫ್, ಸಹ ಮದುವೆಯ ನಂತರ ಮತ್ತಷ್ಟು ಎತ್ತರಕ್ಕೇರಿತು.
ಮದುವೆಯ ನಂತರ ಅಬ್ಬರಿಸಿದ ಹಿಟ್ಮ್ಯಾನ್.!
ರೋಹಿತ್ ಶರ್ಮಾ, 2015ರಲ್ಲಿ ರಿತಿಕಾ ಸಜ್ದೇಹ್ರನ್ನ ವಿವಾಹವಾದ್ರು. ರಿತಿಕಾರನ್ನ ಮದುವೆಯಾಗೋವರೆಗು ರೋಹಿತ್ ಬ್ಯಾಟಿಂಗ್ ರೆಕಾರ್ಡ್ ಅಷ್ಟಕಷ್ಟೇ ಎನ್ನುವಂತಿತ್ತು. ಮದುವೆಗೂ ಮೊದಲು ಎರಡು 2013 ರಿಂದ 2015ರವರೆಗೆ ಮೂರು ಫಾರ್ಮೆಟ್ ಸೇರಿ, ರೋಹಿತ್ ಶರ್ಮಾ, 51 ಪಂದ್ಯಗಳನ್ನಾಡಿದ್ರು. 38.81ರ ಸರಸಾರಿಯಲ್ಲಿ 2,329 ರನ್ಗಳಿಸಿದ್ರು. ಆದ್ರೆ, ಮದುವೆಯಾದ್ಮೇಲೆ ರೋಹಿತ್, ಬ್ಯಾಟಿಂಗ್ನಲ್ಲಿ ನಿಜಕ್ಕೂ ಅಬ್ಬರಿಸಿದ್ರು. ಅದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.
ಮದುವೆಯ ನಂತರ ರೋಹಿತ್ ಸಾಧನೆ.!
ಮದುವೆಯಾದ ನಂತರ 2 ವರ್ಷ ಅಂದ್ರೆ, 2015 ರಿಂದ 2017ರವರೆಗೆ ರೋಹಿತ್ ಶರ್ಮಾ, 61 ಪಂದ್ಯಗಳನ್ನಾಡಿ, 54.05ರ ಸರಾಸರಿಯಲ್ಲಿ 2,973 ರನ್ ಕಲೆ ಹಾಕಿದ್ರು. 9 ಶತಕ ಹಾಗೂ 17 ಅರ್ಧಶತಕ ಸಿಡಿಸಿ ಘರ್ಜಿಸಿದ್ರು.
ಬರೀ ಬ್ಯಾಟಿಂಗ್ನಲ್ಲಿ ಮಾತ್ರ ಅಲ್ಲ, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿಯೂ ರೋಹಿತ್ ಸಕ್ಸಸ್ ಕಂಡಿದ್ದಾರೆ. ಮದುವೆಯ ನಂತರ ರೋಹಿತ್ ಕ್ಯಾಪ್ಟೆನ್ಸಿಯಲ್ಲಿ ಮುಂಬೈ ಇಂಡಿಯನ್ಸ್, 3 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ಸಾಕ್ಷಿ ಎಂಟ್ರಿಯಾದ ಒಂದೇ ವರ್ಷಕ್ಕೆ ವಿಶ್ವಕಪ್ ಗೆಲುವು.!
ಸಾಕ್ಷಿ ಸಿಂಗ್ಗೆ ಮೂರು ಗಂಟು ಹಾಕಿದ ಮೇಲೆ ಧೋನಿ, ಬ್ಯಾಟಿಂಗ್ನಲ್ಲಿ ಅಂತಹ ಭಾರಿ ಬದಲಾವಣೆ ಆಗ್ಲಿಲ್ಲ. INFACT ಧೋನಿ ಬ್ಯಾಟಿಂಗ್ ಸರಾಸರಿ ಡೌನ್ ಆಯ್ತು. ಮದುವೆಗೂ ಮುಂಚೆ ಅದ್ಭುತವಾಗಿ ಆಡ್ತಿದ್ದ ಧೋನಿ, ಮದುವೆಯಾದ್ಮೇಲೆ ಡಲ್ ಆದ್ರು. ಆದ್ರೆ, ಕ್ಯಾಪ್ಟನ್ ಆಗಿ ಧೋನಿ, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಯನ್ನ ಭಾರತಕ್ಕೆ ಗೆದ್ದುಕೊಟ್ರು.
ಮದುವೆಯಾದ್ಮೇಲೆ ಬದಲಾಗುತ್ತಾ ಕೆ.ಎಲ್ ರಾಹುಲ್ ಲಕ್.?
ಕಳೆದ ಎಲ್ಲಾ ಫಾರ್ಮೆಟ್ನಲ್ಲೂ ಫ್ಲಾಪ್ ಶೋ ನೀಡಿದ್ದ ರಾಹುಲ್, ಈ ವರ್ಷ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಆಡಿರೋ 3 ಏಕದಿನ ಪಂದ್ಯಗಳಿಂದ 55ರ ಸರಾಸರಿಯಲ್ಲಿ 110 ರನ್ಗಳಿಸಿದ್ದಾರೆ. ಇದರಿಂದ ಈ 2023ರ ವರ್ಷ ರಾಹುಲ್ಗೆ ಲಕ್ಕಿ ಇಯರ್ ಆಗಲಿದೆ ಎನ್ನಲಾಗ್ತಿದೆ. ಯಾಕಂದ್ರೆ, ಇಂದು ರಾಹುಲ್ ಕೂಡ ಸಿಂಗಲ್ ಲೈಫ್ಗೆ ಗುಡ್ ಬೈ ಹೇಳೋಕೆ ರೆಡಿಯಾಗಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿಯನ್ನ ರಾಹುಲ್ ಮದುವೆಯಾಗ್ತಿದ್ದಾರೆ. ಮುಂಬೈನಲ್ಲಿ ರಾಹುಲ್- ಅಥಿಯಾ ಕಲ್ಯಾಣೋತ್ಸವಕ್ಕೆ ವೇದಿಕೆ ಸಿದ್ಧವಾಗಿದೆ.
ಇದನ್ನು ಓದಿ: ಮೈಸೂರಿಗೆ ನರಭಕ್ಷಕ ಚಿರತೆ, ಹುಲಿ ಕಾಟ; ಅಳಿದುಳಿದವರ ನೋವಿನ ಕಥೆ ಕೇಳುವರ‍್ಯಾರು?
ಕಳೆದ ವರ್ಷ ಕಳಪೆ ಪರ್ಫಾಮೆನ್ಸ್ ನೀಡಿದ್ದ ರಾಹುಲ್, ತೀವ್ರ ಟೀಕೆಗೆ ಗುರಿಯಾಗಿದ್ರು. ತಂಡದಿಂದಲೇ ಡ್ರಾಪ್ ಮಾಡಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಮದುವೆ ಆದ್ಮೇಲೆ, ಕ್ರಿಕೆಟರ್ಸ್ ಜೀವನ ಬದಲಾಗಿರೋ ಉದಾಹರಣೆ ಇರೋದ್ರಿಂದ. ಕೆ.ಎಲ್ ರಾಹುಲ್ ಬಾಳಲ್ಲೂ ಅಥಿಯಾ, ಯಶಸ್ಸಿನ ಅಧ್ಯಾಯ ಬರೀತಾರಾ? ರಾಹುಲ್ ಲೈಫ್ಗೆ ಸಕ್ಸಸ್ ತರ್ತಾರಾ ಅನ್ನೋ ಕುತೂಹಲ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post