ಪಾರು ಧಾರಾವಾಹಿಯಲ್ಲಿ ಆದಿ ಪಾತ್ರ ನಿರ್ವಹಿಸುತ್ತಿರುವ ಶರತ್ ಪದ್ಮನಾಭ್ ತನ್ನ ನೆಚ್ಚಿನ ಹುಡುಗಿ ಜೊತೆ ಹಸೆಮಣೆ ಏರಿದ್ದಾರೆ. ಪಾರು ಧಾರಾವಾಹಿಯಲ್ಲಿ ಆದಿಯಾಗಿ ಎಲ್ಲ ವಿಕ್ಷಕರ ಗಮನ ಸೆಳೆದಿದ್ದ ನಟ ಶರತ್ ಪದ್ಮನಾಭ್ ಅವರು ಗೆಳತಿ ದಿವ್ಯಶ್ರೀ ಜೊತೆ ಮದುವೆ ಆಗಿದ್ದಾರೆ.
ಇನ್ನು ಕಿರುತೆರೆ ನಟ, ನಟಿಯರು ನಿಶ್ಚಿತಾರ್ಥ ಮಾಡಿಕೊಳ್ಳತ್ತಿದ್ದಾರೆ. ಕಳೆದ ನವೆಂಬರ್ನಲ್ಲಿ ಮನೆಯವರ ಸಮ್ಮುಖದಲ್ಲಿ ಒಬ್ಬರಿಗೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಶರತ್ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶರತ್ ಮದುವೆಗೆ ಪಾರು ಸೀರಿಯಲ್ ತಂಡದವರು ಭಾಗಿಯಾಗಿ ಶುಭಾಶಯ ಶುಭಕೋರಿದ್ದಾರೆ. ಈಗ ಶರತ್ ಪದ್ಮನಾಭ್ ಅವರನ್ನು ಕೈ ಹಿಡಿದ ಹುಡುಗಿ ದಿವ್ಯಶ್ರೀ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟಿ ಸಿತಾರಾ ಹಾಗೂ ಪಾರು ಸೀರಿಯಲ್ನ ಹೊಣೆ ಹೊತ್ತಿರೋ ದೀಲಿಪ್ ರಾಜ್ ಹಾಗೂ ಶ್ರೀವಿದ್ಯಾ ಕೂಡ ಭಾಗಿಯಾಗಿದ್ದರು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ನಟ ಶರತ್ ಪದ್ಮನಾಭ್ ಮದುವೆ ಫೋಟೋಗಳು ವೈರಲ್ ಆಗಿವೆ. ಅಧಿಕೃತವಾಗಿ ಶರತ್ ಪದ್ಮನಾಭ್ ಫೋಟೋಗಳನ್ನು ಎಲ್ಲಿಯೂ ಹಂಚಿಕೊಂಡಿಲ್ಲ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post