ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನೆಲೆಸಿರುವವರನ್ನ ಅವರ ದೇಶಕ್ಕೆ ಕಳಿಸುವ ಕೆಲಸವನ್ನ ಬೆಂಗಳೂರು ಪೊಲೀಸರು ಮಾಡ್ತಿದ್ದಾರೆ. ಅದ್ರಂತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ದಂಪತಿಯನ್ನ ಬೆಳ್ಲಂದೂರು ಪೊಲೀಸರು ಬಂಧಿಸಿದ್ದಾರೆ.
ಈಕೆ ಇಕ್ರಾ ಜೀವನಿ. ಮೂಲತಃ ಪಾಕಿಸ್ತಾನದವಳು. ಈತ ಮುಲಾಯಂ ಸಿಂಗ್. ಉತ್ತರಪ್ರದೇಶದವನು. ನೇಪಾಳದ ಮೂಲಕ ಮುಲಾಯಂನನ್ನ ಪರಿಚಯ ಮಾಡ್ಕೊಂಡು ಪ್ರೀತಿಸಿ ಮದುವೆಯಾಗಿದ್ದ ಯುವತಿ ಬೆಂಗಳೂರಿನ ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ಲು. ಈ ವೇಳೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಈಕೆಯನ್ನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಯಾತಕ್ಕಾಗಿ ಬಂದಿದ್ದು ಯುವತಿ..?
ಬೆಂಗಳೂರಿನಲ್ಲಿ ಇದ್ಕೊಂಡು ಪಾಕ್ನಲ್ಲಿರೋ ತನ್ನ ತಾಯಿಯನ್ನ ಸಂಪರ್ಕಿಸಲು ಯುವತಿ ಯತ್ನಿಸಿದ್ಲು ಎನ್ನಲಾಗ್ತಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕೇಂದ್ರ ಗುಪ್ತಚರ ಇಲಾಖೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿತ್ತು. ಈ ಹಿನ್ನೆಲೆ ವಿಶೇಷ ಕಾರ್ಯಾಚರಣೆ ನಡೆಸಿ ಬೆಳ್ಳಂದೂರು ಪೊಲೀಸರು ದಂಪತಿಯನ್ನ ಬಂಧಿಸಿದ್ದಾರೆ.
ಇನ್ನು ಇಬ್ಬರ ವಿಚಾರಣೆ ವೇಳೆ ಹೆಸ್ರು ಬದಲಾಯಿಸಿಕೊಂಡು ಯುವತಿ ಪಾಸ್ ಪೋರ್ಟ್ಗೆ ಅಪ್ಲೈ ಮಾಡಿರೋದು ಬೆಳಕಿಗೆ ಬಂದಿದೆ. ರಾವಾ ಯಾದವ್ ಎಂದು ಹೆಸರು ಬದಲಿಸಿದ್ದ ಯುವತಿ ಬಗ್ಗೆ ಪೊಲೀಸರು FRRO ಅಂದ್ರೆ ಫಾರಿ ರೀಜನಲ್ ರಿಜಿಸ್ಟ್ರೇಷನ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಯುವತಿಯನ್ನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.
ಈ ಯುವತಿ ಯಾತಕ್ಕಾಗಿ ಭಾರತಕ್ಕೆ ಬಂದ್ಲು? ಯಾತಕ್ಕಾಗಿ ತಾಯಿಯ ಸಂಪರ್ಕ ಮಾಡಿದ್ಲು? ಹೆಸರು ಬದಲಾಯಿಸಿದ್ದೇಕೆ ಅನ್ನೋ ಬಗ್ಗೆ ಬೆಳ್ಳಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post