ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬರೋದಿಲ್ಲ. ಸರ್ಕಾರ ರಚನೆಗೆ ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರ್ಕಾರ ಮಾಡ್ತೀವಿ ಅಂತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ದುಡ್ಡು ಹಂಚ್ತಿದ್ದ ಫೋಟೋ ರಿಲೀಸ್; ಸಾಹುಕಾರ್ಗೆ ಹೆಬ್ಬಾಳ್ಕರ್ ಕೌಂಟರ್
ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಚುನಾವಣೆಯ ಪ್ರಚಾರ ಸಭೆ ನಡೆಸಿದ್ರು. ಈ ವೇಳೆ ಬೆಂಬಲಿಗರಿಗೆ ಕಿವಿಮಾತು ಹೇಳಿದ ಸಾಹುಕಾರ್, ನಾನು ಬಿಜೆಪಿ ಬಿಡುತ್ತೇನೆ ಅನ್ನೋದು ಸುಳ್ಳು. ನನ್ನ ರಾಜಕೀಯ ಬಿಜೆಪಿಯಲ್ಲಿಯೇ ಎಂಡ್ ಆಗುತ್ತೆ ಎಂದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೂ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ವೋಟಿಗಾಗಿ ಕೆಟ್ಟ ಹುಳಗಳು ಇನ್ಮುಂದೆ ಗೋಕಾಕದ ಬೀದಿಗಳಲ್ಲಿ ಬರುತ್ತವೆ. ಮುಂದಿನ ಮೂರು ತಿಂಗಳಲ್ಲಿ ಕೆಟ್ಟ ಹುಳಗಳದ್ದೇ ಹವಾ ಇರುತ್ತೆ. ಇದಾದ ನಂತರ ಮತ್ತೆ ನಾಲ್ಕು ವರ್ಷ ಆ ಹುಳುಗಳು ಇರೋದಿಲ್ಲ. 3 ತಿಂಗಳ ಬಂದ ನಂತರ ಮಲಗೋಕೆ ಹೋಗ್ತಾವೆ ಎಂದು ಟಾಂಗ್ ಕೊಟ್ಟರು.
ಮೈತ್ರಿ ಸುಳಿವು ಕೊಟ್ರಾ ಸಾಹುಕಾರ್?
ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಕೈ ತಪ್ಪಿದ ಮೇಲೆ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆ ಎನ್ನಲಾಗಿತ್ತು. ಈ ಹಿಂದೆ ಹಲವು ಬಾರಿ ಬಿಜೆಪಿ ಸೇರಿದ ಬಳಿಕವೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ರು. ಈಗ ಚುನಾವಣೆಗೂ ಮುನ್ನವೇ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಬಿಜೆಪಿ, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾ? ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post