ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ ದೊಡ್ಡವರು. ಆದರೆ ಈಗಿನ ಕಾಲದಲ್ಲಿ ಇವೆರಡು ಪೂರ್ಣಗೊಳಿಸೋದು ಅಷ್ಟೊಂದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಹಾಗಾಗಿ ಬಹುತೇಕರು ಸಿಂಪಲ್ಲಾಗಿ ಮದುವೆ ಆಗುತ್ತಿದ್ದಾರೆ. ಆ ಮೇಲೆ ರಿಚ್ ಆಗಿ ಪಾರ್ಟಿ ಕೊಡ್ತಾರೆ. ಅದರಂತೆಯೇ ಇಲ್ಲೊಂದು ಜೋಡಿ ಕೂಡ ಸಿಂಪಲ್ಲಾಗಿ ಮದುವೆ ಆಗಿದ್ದಾರೆ. ಆದರೆ ಈ ಮದುವೆಯನ್ನು ಸಿಂಪಲ್ಲಾಗಿ ಅನ್ನೋದಕ್ಕಿಂದ ಪಾಕೆಟ್ ಫ್ರೆಂಡ್ಲಿ ವೆಡ್ಡಿಂಗ್ ಎಂದು ಹೇಳಿಕೊಂಡಿದ್ದಾರೆ. ಈ ವಿವಾಹದ ವಿಶೇಷತೆ ಬಹಳಷ್ಟು ಜನರ ಮನಗೆದ್ದಿರೋದಂತೂ ಸುಳ್ಳಲ್ಲ.
ಬಹಳಷ್ಟು ಮಂದಿ ಮದುವೆ ಆಗೋದು ಯೋಗ್ಯತೆ ಅಥವಾ ಸ್ಟೇಟಸ್ ಅನ್ನು ಪ್ರತಿಬಿಂಬಿಸುತ್ತದೆ ಎಂದು ನಂಬಿದ್ದಾರೆ. ಆದರೆ ಇದೇ ವಿಚಾರವನ್ನು ತಲೆಯಲ್ಲಿಟ್ಟುಕೊಂಡ ಶೆಲ್ಬಿ ಫೆಲ್ಪ್ಸ್ (26) ಮತ್ತು ಗ್ಯಾರೆಟ್ (26) ಸಿಂಪಲ್ಲಾಗಿ ಮದುವೆ ಆಗುವ ಯೋಚನೆ ಬರುತ್ತಾರೆ. ಅದರಕ್ಕಾಗಿ ಸಣ್ಣ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಅದುವೇ ಪಾಕೆಟ್ ಫ್ರೆಂಡ್ಲಿ ಮದುವೆ!.
ಶೆಲ್ಬಿ ಫೆಲ್ಪ್ಸ್ ಮತ್ತು ಗ್ಯಾರೆಟ್ ಜೋಡಿ ಈ ಪಾಕೆಟ್ ಫ್ರೆಂಡ್ಲಿ ಮದುವೆಯಿಂದ ಬರೋಬ್ಬರಿ 8,09,874 ರೂಪಾಯಿ ಉಳಿಸಿದ್ದಾರೆ. ಮಾತ್ರವಲ್ಲದೆ, ತಮ್ಮ ಮದುವೆಗೆ ಕೇವಲ 25 ಜನರನ್ನು ಮಾತ್ರ ಆಹ್ವಾನಿಸಿದ್ದಾರೆ. ಅಷ್ಟು ಮಾತ್ರವಲ್ಲ, ಮದುವೆ ಬರುವ ಜೋಡಿಗಳಿಗೆ ತಮ್ಮ ಆಹಾರವನ್ನು ತಾವೇ ಮನೆಯಿಂದ ತರುವುದಾಗಿ ಹೇಳಿದ್ದಾರೆ. ಜೊತೆಗೆ ವಧು-ವರನಿಗೆ ಸೆಕೆಂಡ್ ಹ್ಯಾಂಡ್ ಗಿಫ್ಟ್ ನೀಡುವಂತೆ ಕೋರಿದ್ದಾರೆ. ಅದರಂತೆ ಈ ಜೋಡಿ ಪಾಕೆಟ್ ಫ್ರೆಂಡ್ಲಿಯಾಗಿ ವಿವಾಹವಾಗಿದ್ದಾರೆ.
ಈ ಜೋಡಿಗಳು ತಮ್ಮ ವಿವಾಹಕ್ಕೆ ಬಟ್ಟೆಯನ್ನು ಕೂಡ ಖರೀದಿಸಿಲ್ಲ. ತಮಗಿಷ್ಟವಾದ ಬಟ್ಟೆ ಧರಿಸಿಕೊಂಡು ವಿವಾಹವಾಗಿದ್ದಾರೆ. ಅಂದಹಾಗೆಯೇ ಶೆಲ್ಬಿ ಫೆಲ್ಪ್ಸ್ ಅವರು 2017ರಲ್ಲಿ ಗ್ಯಾರೆಟ್ ಅವರನ್ನು ಡೇಟಿಂಗ್ ಆ್ಯಪ್ನಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಕೊನೆಗೆ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈ ಜೋಡಿ ಪಾಕೆಟ್ ಫ್ರೆಂಡ್ಲಿಯಾಗಿ ವಿವಾಹವಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post