ಇತ್ತೀಚಿಗೆ ರಾಜ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಕಾಡಿನಲ್ಲಿ ಬೇಟೆಯಾಡ್ಬೇಕಾದ ವನ್ಯಮೃಗಗಳು ನಾಡಿಗೆ ಎಂಟ್ರಿ ಕೊಟ್ಟು ಮಾನವನ ರಕ್ತ ಹೀರುತ್ತಿವೆ. ಮನುಷ್ಯರ ರಕ್ತದ ರುಚಿ ನೋಡಿರೋ ಚಿರತೆಗಳು ಜನರ ಮೇಲೆ ದಾಳಿ ಮಾಡ್ತಿವೆ. ಹಲವು ಜನರನ್ನೂ ಬಲಿಪಡೀತಿವೆ. ಇಷ್ಟುದಿನ ಕೇವಲ ಚಿರತೆಗಳು ನಾಡಿಗೆ ಎಂಟ್ರಿ ಕೊಟ್ಟು ಭೀತಿ ಹುಟ್ಟಿಸಿದ್ವು. ಇದೀಗ ಜನವಸತಿ ಪ್ರದೇಶದಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿಬಿಟ್ಟಿದೆ.
ರಾಜ್ಯದಲ್ಲಿ ವನ್ಯಮೃಗಗಳು ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದೆ. ರಾಜ್ಯದ ಉದ್ದಗಲಕ್ಕೂ ಚಿರತೆಗಳು ಮಾನವನ ಹಸಿರಕ್ತದ ರುಚಿ ಹಿಡಿದು ಕಾಡಿನಿಂದ ನಾಡಿಗೆ ಎಂಟ್ರಿ ಕೊಡ್ತಿವೆ. ಅಮಾಯಕ ಜನರನ್ನ ಬಲಿಪಡಿಯುತ್ತಿವೆ. ಇಷ್ಟು ದಿನ ಕೇವಲ ಚಿರತೆಗಳ ಹಾವಳಿಯಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಹುಲಿರಾಯ ನಡುಕ ಹುಟ್ಟಿಸಿದ್ದಾನೆ.
ಮೈಸೂರಲ್ಲಿ ಚಿರತೆ ಬೆನ್ನಲ್ಲೇ ಹುಲಿ ಕಾಟ ಶುರು
ಹುಲಿ ದಾಳಿಗೆ ಬಳ್ಳೆಹಾಡಿಯ ಯುವಕ ಬಲಿ
ಮೈಸೂರಿನ ಜನರು ಇಷ್ಟು ದಿನ ಚಿರತೆಯ ದಾಳಿಗೆ ಬೇಸತ್ತ್ತು ಹೋಗಿದ್ರು. ಚಿರತೆಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ರು. ಅರಣ್ಯ ಇಲಾಖೆ ಕೂಡಾ ಹಲವು ಚಿರತೆಗಳನ್ನ ಹಿಡಿದು ಕಾಡಿಗೆ ಬಿಟ್ಟಿತ್ತು. ಆದ್ರೂ ಜಿಲ್ಲೆಯಲ್ಲಿ ಕಾಡುಮೃಗಗಳ ಕೀಟಲೆ ಕಡಿಮೆಯಾಗಿಲ್ಲ. ಇದೀಗ ಮೈಸೂರಿನ ವ್ಯಾಪ್ತಿಯಲ್ಲಿ ಹುಲಿರಾಯ ಎಂಟ್ರಿ ಕೊಟ್ಟಿದ್ದಲ್ಲದೇ ಯುವಕನ ಪ್ರಾಣವನ್ನೇ ಬಲಿಪಡೆದಿದ್ದಾನೆ. ಮೈಸೂರಿನ ಹೆಚ್.ಡಿ. ಕೋಟೆ ತಾಲೂಕಿನ ಬಳ್ಳೆ ಹಾಡಿಯ ಮಂಜು ಎಂಬ ಯುವಕ ನಿನ್ನೆ ಹುಲಿ ದಾಳಿಯಲ್ಲಿ ಬಲಿಯಾಗಿದ್ದಾನೆ. ಇದೀಗ ವ್ಯಾಘ್ರದ ದಾಳಿಗೆ ಭಯಗೊಂಡಿರೋ ಜನರು ಹುಲಿಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಮೈಸೂರು-ಮಾನಂದವಾಡಿ ಮಾರ್ಗದ ರಸ್ತೆಗೆ ಕಲ್ಲಿಟ್ಟು ಆಕ್ರೋಶವ್ಯಕ್ತಪಡಿಸಿದ್ರು. ಶೀಘ್ರವೇ ಕಂಡಲ್ಲಿ ಗುಂಡಿಕ್ಕಿ ಹುಲಿಯನ್ನ ಸಾಯಿಸಿ ಅಂತಾ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಸದ್ಯ ಜನರು ಹುಲಿ ಕೊಲ್ಲಲು ಆಗ್ರಹಿಸ್ತಿದ್ರೆ, ಬಳ್ಳೆ ಹಾಡಿ ಬಳಿಯಲ್ಲೇ ಹುಲಿರಾಯ ಪ್ರತ್ಯಕ್ಷವಾಗಿದ್ದಾನೆ. ಇದೀಗ ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹುಲಿಯನ್ನ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ರಾಮನಗರದಲ್ಲಿ ಚಿರತೆ ಪ್ರತ್ಯಕ್ಷ.. ಶ್ವಾನದ ಬೇಟೆ
ಇತ್ತ ರೇಷ್ಮೆ ನಾಡು ರಾಮನಗರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರ ಎದೆಬಡಿತವನ್ನ ಹೆಚ್ಚಿಸಿದೆ. ರಾಮನಗರ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ಚಿರತೆಯೊಂದು ಗೋವಿಂದರಾಜು ಎಂಬುವವರ ಶ್ವಾನದ ಮೇಲೆ ದಾಳಿ ಮಾಡಿದೆ. ಕಾಡುಮೃಗದ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಶ್ವಾನ ಚಿರತೆಯ ಬಾಯಿಯಿಂದ ಬಚಾವ್ ಆಗಿದೆ. ಬದುಕಿದೆಯಾ ಬಡಜೀವವೇ ಎಂಬಂತೆ ಸಾವನ್ನ ಗೆದ್ದು ನಿಟ್ಟುಸಿರು ಬಿಟ್ಟಿದೆ. ಒಟ್ಟಾರೆ ರಾಜ್ಯದಲ್ಲಿ ಚಿರತೆಗಳ ಹಾವಳಿ ಬೆನ್ನಲ್ಲೇ ನರಭಕ್ಷಕ ಹುಲಿಗಳು ನಾಡಿಗೆ ಬಂದು ಘರ್ಜಿಸಲು ಶುರು ಮಾಡಿವೆ. ಇದು ಅರಣ್ಯಾಧಿಕಾರಿಗಳಿಗೆ ಸವಾಲಾಗಿದ್ದು, ಹುಲಿಯನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಡ್ತಾರಾ? ಅಥವಾ ಕಂಡಲ್ಲಿ ಗುಂಡಿಟ್ಟು ಕೊಲ್ತಾರಾ? ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post