ನವದೆಹಲಿ: ಇಡೀ ದೇಶದ ಮುಸ್ಲಿಂ ಸಮುದಾಯದ ಮತಗಳನ್ನ ಕಾಂಗ್ರೆಸ್, ತನ್ನ ವೋಟ್ ಬ್ಯಾಂಕ್ ಎಂದೇ ನಂಬಿಕೊಂಡಿದೆ. ಆದ್ರೆ, ಮುಂದಿನ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಈ ವೋಟ್ ಬ್ಯಾಂಕ್‌ಗೆ ಕನ್ನ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
60 ಲೋಕಸಭಾ ಕ್ಷೇತ್ರಗಳೇ ಟಾರ್ಗೆಟ್!
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲೇ ಪ್ರಧಾನಿ ನರೇಂದ್ರ ಮೋದಿ, ದೇಶದ ಎಲ್ಲಾ ಸಮುದಾಯದ ಸಂಪರ್ಕ ಸಾಧಿಸಲು ಸೂಚನೆ ಕೊಟ್ಟಿದ್ದರು. ಅದರಂತೆ ಬಿಜೆಪಿ ದೇಶದ ಮುಸ್ಲಿಂ ಸಮುದಾಯವನ್ನು ಸೆಳೆಯಲು ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ 60 ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಾಬಲ್ಯವಿದೆ. ಈ 60 ಕ್ಷೇತ್ರಗಳಲ್ಲೂ ಮುಸ್ಲಿಂ ಸಮುದಾಯದ ಜನರಿಗೆ ಬಿಜೆಪಿಯ ತತ್ವ, ಸಿದ್ಧಾಂತವನ್ನ ವಿವರಿಸಲಾಗುವುದು. ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ 5 ಸಾವಿರ ಮುಸ್ಲಿಮರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಲು ಚಿಂತಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಮಾಲ್ ಸಿದ್ದೀಕಿ ಹೇಳಿದ್ದಾರೆ.
3 ಲಕ್ಷ ಮುಸ್ಲಿಂರನ್ನ ಸೇರಿಸಿ ಮೋದಿ ಱಲಿ!
ರಾಜಸ್ಥಾನದಲ್ಲಿ ಫೆಬ್ರವರಿ 1 ಮತ್ತು 2ರಂದು ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಅಲ್ಲಿ ವಿದ್ಯಾವಂತ, ಸಣ್ಣ ಉದ್ಯಮಿ, ಸೂಫಿಗಳು, ಸರ್ಕಾರಿ ಯೋಜನೆ ಫಲಾನುಭವಿಗಳು, ಉತ್ತರ ಪ್ರದೇಶದ ಪಸ್ಮಂದ್ ಮುಸ್ಲಿಮರನ್ನು ಬಿಜೆಪಿಯತ್ತ ಸೆಳೆಯಲು ಪ್ಲ್ಯಾನ್ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಸ್ಕೂಟರ್ ಯಾತ್ರೆ, ಬಳಿಕ ಸ್ನೇಹ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ 60 ಲೋಕಸಭಾ ಕ್ಷೇತ್ರದ 3 ಲಕ್ಷ ಮುಸ್ಲಿಮರನ್ನು ಸೇರಿಸಿ ದೆಹಲಿಯಲ್ಲಿ ದೊಡ್ಡ ಱಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಱಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಆಹ್ವಾನಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಿರ್ಧಾರ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post