ಎಂ.ಎಸ್ ಧೋನಿ, ರವಿ ಶಾಸ್ತ್ರಿ ಇವರಿಬ್ಬರು ಸದ್ಯ ಟೀಮ್ ಇಂಡಿಯಾದ ಭಾಗವಾಗಿಲ್ಲ. ಆದ್ರೆ, ಇವರಿಬ್ಬರ ನಡುವೆ ನಡೆದಿದ್ದ ಕೋಲ್ಡ್ ವಾರ ಮಾತ್ರ ಈಗ, ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಸುದ್ದಿಯಾಗಿದೆ. ಅದಕ್ಕೆ ಈ ಪುಸ್ತಕ ಕಾರಣವಾಗಿದೆ.
M.S ಧೋನಿ, ಕ್ರಿಕೆಟ್ ಜಗತ್ತು ಕಂಡ ಕೂಲೆಸ್ಟ್ ಕ್ಯಾಪ್ಟನ್. ಆದ್ರೆ, ಧೋನಿ ಎಷ್ಟು ಕೂಲೋ.. ಅಷ್ಟೇ ಡೈನಾಮಿಕ್. ಧೋನಿಗೆ ಸಿಟ್ಟು ಬಂದ್ರೆ, ಯಾರನ್ನು ಬಿಡಲ್ಲ. ಕೆಲವೊಮ್ಮೆ ಆನ್ಫೀಲ್ಡ್ನಲ್ಲೇ ಧೋನಿ, ಆಟಗಾರರ ಮೇಲೆ ಫೈಯರ್ ಆಗಿದ್ದಾರೆ. ಆದ್ರೆ, ಯಾವುದೇ ಆಟಗಾರ ಧೋನಿ ಬೈದ್ರು, ಏನೇ ಅಂದ್ರು ತಿರುಗಿ ಮಾತಾಡ್ತಿರಲಿಲ್ಲ. ಧೋನಿ ಹೇಳಿದ್ದೇ ಶಾಸನ, ವೇದ ವಾಕ್ಯ ಅಂತ ಸುಮ್ಮನಾಗ್ತಿದ್ರು.
ಆಟಗಾರರಷ್ಟೇ ಅಲ್ಲ, ತಂಡದ ಕೋಚ್ಗಳು ಕೂಡ, ಧೋನಿಗೆ ಒಂದ್ ಮಾತು ಅನ್ನೋದಕ್ಕು ಹಿಂದೆ- ಮುಂದೆ ನೋಡ್ತಿದ್ರು. ಧೋನಿ ಏನೇ ಮಾಡಿದ್ರು ಸೈ ಅಂತಿದ್ರು. ನಾಯಕನ ಸ್ಥಾನದಿಂದ ಕೆಳಗಿಳದ್ಮೇಲು, ಧೋನಿ ಅದೇ ಹವಾ ಮೆಂಟೇನ್ ಮಾಡಿದ್ರು.
ಆದ್ರೆ, ರವಿ ಶಾಸ್ತ್ರಿ ಕೋಚ್ ಆಗಿದ್ದಾಗ ಧೋನಿಗೆ ಕ್ಯಾರೇ ಅಂದಿರಲಿಲ್ಲ. ಅಷ್ಟೇ ಅಲ್ಲ, ನಾನು ಹೇಳಿದಂತೆ ಆಡದೇ ಇದ್ರೆ, ಮುಲಾಜಿಲ್ಲದೇ ತಂಡದಿಂದ ಹೊರಗೆ ಹಾಕ್ತೀನಿ ಅಂತ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಿದ್ರು. ರವಿ ಶಾಸ್ತ್ರಿಯ ಮಾತುಗಳನ್ನ ಕೇಳಿ ತಂಡದ ಆಟಗಾರರೆಲ್ಲಾ ಫುಲ್ ಸೈಲೆಂಟ್ ಆಗಿದ್ರು. ಇದೆಲ್ಲಾ ನಡೆದದ್ದು, 2018ರ ಇಂಗ್ಲೆಂಡ್ ಟೂರ್ನಲ್ಲಿ.
ಧೋನಿ ಸ್ಲೋ ಬ್ಯಾಟಿಂಗ್ನಿಂದ ರವಿ ಶಾಸ್ತಿ ಕೆಂಡಾಮಂಡಲ
2018ರಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. T20 ಸರಣಿ ಗೆದ್ದುಕೊಂಡಿದ್ದ ಭಾರತ, ಏಕದಿನ ಸರಣಿಯ ಮೊದಲ ಪಂದ್ಯದಲ್ಲು ಗೆಲುವು ಸಾಧಿಸಿತ್ತು. 2ನೇ ಪಂದ್ಯ ಗೆದ್ರೆ, ಏಕದಿನ ಸರಣಿಯು ಭಾರತದ ಪಾಲಾಗ್ತಿತ್ತು. ಆದ್ರೆ, 323 ರನ್ಗಳ ಬಿಗ್ ಟಾರ್ಗೆಟ್ ಮಾಡಲಾಗದೇ, ವಿರಾಟ್ ಕೊಹ್ಲಿ ಪಡೆ 69 ರನ್ಗಳಿಂದ ಆಂಗ್ಲರಿಗೆ ಶರಣಾಗಿತ್ತು. ಈ ಸೋಲಿಗೆ ಧೋನಿಯ ಸ್ಲೋ ಬ್ಯಾಟಿಂಗೇ, ಪ್ರಮುಖ ಕಾರಣವಾಗಿತ್ತು. 6ನೇ ಕ್ರಮಾಂಕದಲ್ಲಿ ಕೆಳಗಿಳಿದಿದ್ದ ಧೋನಿ, 59 ಬಾಲ್ಗಳಲ್ಲಿ ಕೇವಲ 37 ರನ್ಗಳಿಸಿದ್ರು.
ಇನ್ನೊಮೆ ಹಿಂಗೆ ಆಡಿದ್ರೆ, ಇದೇ ಲಾಸ್ಟ್ ಮ್ಯಾಚ್ ಆಗಲಿದೆ
ಧೋನಿಯ ಈ ನಿಧಾನಗತಿಯ ಬ್ಯಾಟಿಂಗ್, ಕೋಚ್ ರವಿ ಶಾಸ್ತ್ರಿಗೆ ಸಿಟ್ಟು ತರಿಸಿತ್ತು. 3ನೇ ಪಂದ್ಯಕ್ಕು ಮುನ್ನ ನಡೆದ ಟೀಮ್ ಮೀಟಿಂಗ್ನಲ್ಲಿ ರವಿ ಶಾಸ್ತ್ರಿ ಧೋನಿಯನ್ನ ಗುರಾಯಿಸುತ್ತಾ, ಆಟದಲ್ಲಿ ಸೋಲು, ಗೆಲುವು ಇದ್ದದ್ದೇ. ಆದ್ರೆ, ಗೆಲುವಿಗಾಗಿ ಹೋರಾಡದೇ, ಹೀನಾಯವಾಗಿ ಸೋಲೋದನ್ನ ನಾನು ಒಪ್ಪಲ್ಲ. ಇನ್ನೊಮ್ಮೆ ಯಾರಾದ್ರು ಆ ರೀತಿ ಆಡಿದ್ರೆ, ಆ ಆಟಗಾರ ನಾನು ಇರೋವರೆಗು ಯಾವುದೇ ಮ್ಯಾಚ್ ಆಡಲ್ಲ ಖಡಕ್ ವಾರ್ನಿಂಗ್ ನೀಡಿದ್ರು.
5 ವರ್ಷಗಳ ಹಿಂದಿನ ಕಥೆ ಈಗ ಹೇಗೆ ಬಯಲಿಗೆ ಬಂತು ಅಂದ್ರೆ, ಟೀಮ್ ಇಂಡಿಯಾ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಬರೆದಿರೋ ’Coaching Beyond: My Days with the Indian Cricket Team’ ಪುಸ್ತಕದಿಂದ. ಇದು ಆರ್.ಶ್ರೀಧರ್ ಅವರ ಆತ್ಮಚರಿತ್ರೆಯಾಗಿದೆ. ಅಷ್ಟಕ್ಕು ಈ ಪುಸ್ತಕದಲ್ಲಿ ಏನು ದಾಖಲಾಗಿದೆ?.
ಧೋನಿಗೆ ರವಿ ಶಾಸ್ತ್ರಿ ಪರೋಕ್ಷ ವಾರ್ನಿಂಗ್.!
ನೀವು ಯಾರೇ ಆಗಿರಿ, ಗೆಲುವಿನ ಪ್ರಯತ್ನವನ್ನೇ ಮಾಡದೇ ಪಂದ್ಯ ಸೋಲೋದನ್ನ ನಾನು ಸಹಿಸಲ್ಲ. ನಾನು ಕೋಚ್ ಆಗಿ ಇರೋವರೆಗು ಇದು ಮತ್ತೆಂದು ರಿಪೀಟ್ ಆಗಬಾರದು. ಯಾರಾದ್ರು ಆ ತರ ಆಡಿದ್ರೆ, ನನ್ನ ಕೋಚಿಂಗ್ನಡಿ ಆ ಆಟಗಾರನಿಗೆ ಅದೇ ಕೊನೆಯ ಪಂದ್ಯವಾಗಲಿದೆ. ಸೋಲೋದು ನಾಚಿಕೆಯ ಸಂಗತಿಯಲ್ಲ. ಆದ್ರೆ, ಗೆಲುವಿಗೆ ಕನಿಷ್ಠ ಹೋರಾಟ ಮಾಡದೇ ಸೋಲುವುದನ್ನ ಒಪ್ಪಲು ಸಾಧ್ಯವಿಲ್ಲ.
ರವಿ ಶಾಸ್ತ್ರಿ- ಟೀಮ್ ಇಂಡಿಯಾ ಮಾಜಿ ಕೋಚ್
ಆ ದಿನ ಒಬ್ಬ ಕೋಚ್ ಆಗಿ ರವಿ ಶಾಸ್ತ್ರಿ, ಧೋನಿಗೆ ಆ ರೀತಿ ವಾರ್ನಿಂಗ್ ನೀಡಿದ್ದರಲ್ಲಿ ತಪ್ಪೇನಿಲ್ಲ. ಆ ಪಂದ್ಯದಲ್ಲಿ ಧೋನಿ ಆಡಿದ್ದು, ನಿಜಕ್ಕೂ ಸ್ಲೋ ಇನ್ನಿಂಗ್ಸ್. ಒನ್ಡೇ ಕ್ರಿಕೆಟ್ನಲ್ಲಿ, ಅದು ಚೇಸಿಂಗ್ ವೇಳೆ 62ರ ಸ್ಟ್ರೈಕ್ರೇಟ್ನಲ್ಲಿ ಆಡೋದನ್ನ, ಯಾರು ಸಹಿಸೋಕೆ ಸಾಧ್ಯವಿಲ್ಲ. ಧೋನಿ ಅದ್ಯಾಕೆ ಆವತ್ತು ಆ ರೀತಿ ಬ್ಯಾಟಿಂಗ್ ಮಾಡಿದ್ರು ಅನ್ನೋದು ಮಾತ್ರ ಇಂದಿಗು ದೊಡ್ಡ ಪ್ರಶ್ನೆಯಾಗೇ ಉಳಿದಿದೆ. ಈ ಪ್ರಶ್ನೆಗೆ ಧೋನಿ ಮುಂದೆ ಎಂದಾದ್ರು ಉತ್ತರಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post