ಬೆಂಗಳೂರು: ಇನ್ನು 40 ರಿಂದ 45 ದಿನ ಅಷ್ಟೇ ನಿಮ್ಮ ಸರ್ಕಾರ. ಟೆಂಟು ಗಿಂಟು ಪ್ಯಾಕ್ ಮಾಡಿಕೊಳ್ಳಿ. ನಾವು ವಿಧಾನಸೌಧಕ್ಕೆ ಗಂಜಲ ಹಾಕಿ ಕ್ಲೀನ್ ಮಾಡ್ತೀವಿ ಅಂತಾ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಕ್ಸಮರ ನಡೆಸಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ. ಪ್ರತಿಯೊಂದು ಔಷಧಿ, ಬೆಡ್‌ನಲ್ಲೂ ಸ್ಕ್ಯಾಮ್ ನಡೆದಿದೆ. ಬಿಜೆಪಿಯಲ್ಲಿ ಮುತ್ತುರತ್ನಗಳೆಲ್ಲ ಇದ್ದಾರಲ್ಲ ಅವಱರು ಮಾತನಾಡ್ತಿಲ್ಲ. ಆಪರೇಷನ್ ಲೋಟಸ್ ಆದವರ ಕೈಯಲ್ಲೇ ಮಾತನಾಡಿಸುತ್ತಿದ್ದಾರೆ. ಇದು B ರಿಪೋರ್ಟ್ ಸರ್ಕಾರ. ಏನ್ರೀ 35 ಸಾವಿರ ಕೋಟಿ ಹಗರಣ ಅಂದರೆ ಎಂದು ಪ್ರಶ್ನಿಸಿದರು
ಇವರು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡ್ತಿದ್ದಾರೆ. ಈ ಸರ್ಕಾರದ ಆಯಸ್ಸು ಮುಗಿದಿದೆ. ಈ ಕೆಟ್ಟ ಸರ್ಕಾರವನ್ನ ಜನ ಓಡಿಸ್ತಿದ್ದಾರೆ. ನಾವು ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡ್ತೀವಿ. ನಾನು ಶುದ್ಧ ಮಾಡಲು ಗಂಜಲ ಗಿಂಜಲ ತರ್ತೀನಿ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post