ಬೆಂಗಳೂರು: ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣ ಎಸೆದ ಅರುಣ್ ಯಾರು. ಬಿಸಾಡಿದ ದುಡ್ಡು ಜನರ ಜೇಬು ಸೇರುವಷ್ಟರಲ್ಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕುತ್ತಿಗೆಗೆ ಗಡಿಯಾರ ಹಾಕಿಕೊಂಡು 10 ರೂಪಾಯಿ 500 ರೂಪಾಯಿ ನೋಟುಗಳನ್ನ ಎಸೆದ ಕಾರಣವೂ ಬಯಲಾಗಿದೆ.
ಸೂಟು ಬೂಟು.. ಕತ್ತಲ್ಲಿ ಗಡಿಯಾರ.. ಕೈಯಲ್ಲಿ ಗರಿ ಗರಿ ನೋಟು.. ಬೇಕಾಬಿಟ್ಟಿ ಹಣ ಎಸೆದು ಹೋದ ಅರುಣ್, ಬೆಂಗಳೂರಿನ ನಾಗರಬಾವಿಯ ನಿವಾಸಿ. ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಅರುಣ್, ಅರುಣ್ ವಿ ಡಾಟ್ 9 ಇವೆಂಟ್ಸ್ನ ಸಿಇಓ. ಇವೆಂಟ್ ಪ್ಲಾನ್ ಮಾಡ್ತಿದ್ದ ಅರುಣ್ ಇದ್ದಕ್ಕಿದ್ದಂತೆ ಹಣ ಎಸೆದು ಫಜೀತಿಗೆ ಸಿಲುಕಿದ್ದಾರೆ.
ಇದನ್ನೂ ಓದಿ: ತಗೊಳಿ 10 ರೂಪಾಯಿ, 500 ರೂಪಾಯಿ; ಫ್ಲೈ ಓವರ್ ಮೇಲಿಂದ ಹಣ ಎರಚಿ ಹೋದ ಆಸಾಮಿ
ಪೊಲೀಸರಿಂದ ಅರುಣ್‌ಗೆ ನೋಟಿಸ್
ಮಾರ್ಕೆಟ್ ಫ್ಲೈ ಓವರ್ ಮೇಲೆ ಅರುಣ್, ಹಣ ಎಸೆದಿದ್ದು ಹಲ್‌ಚಲ್ ಸೃಷ್ಟಿಸಿತ್ತು. ಅದಕ್ಕೆ ಕೆ.ಆರ್.ಮಾರ್ಕೆಟ್ ಪೊಲೀಸರು ಅರುಣ್ ವಿರುದ್ಧ NCR ದಾಖಲು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಿದ್ದು ಯಾಕೆ ಅನ್ನೋ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದಾರೆ.
ಕುತ್ತಿಗೆಗೆ ಗಡಿಯಾರ ಯಾಕೆ?
ಕುತ್ತಿಗೆಗೆ ಗಡಿಯಾರ ಹಾಕೊಂಡು ಬಂದಿದ್ದ ಅರುಣ್, ಅದಕ್ಕೆ ಕಾರಣ ಏನು ಅನ್ನೋದನ್ನು ತಿಳಿಸಿದ್ದಾರೆ. ನಾನು ರೀಲ್ಸ್‌ಗಾಗಿ ಮಾಡಿಲ್ಲ. ನಾನು ರೀಲ್ಸ್ ಮಾಡೋನು ಅಲ್ಲ. ಟೈಮ್ ಅನ್ನೋದೇ ಸಂದೇಶ. ಒಳ್ಳೆಯ ಸಂದರ್ಭದಲ್ಲಿ ಹಣ ಎಸೆದಿದ್ದೇನೆ. ಅದರಲ್ಲಿಯೇ ಸಂದೇಶ ಇದೆ. ಆ ಸಂದರ್ಭದಲ್ಲಿ ಹಣ ಎರಚಿದ್ರೆ ಒಳ್ಳೆಯದು ಅಂತಾ ಎರಚಿದ್ದೇನೆ. ಒಳ್ಳೆಯ ಸಂದೇಶ ಇದೆ ಅದನ್ನು ಎಲ್ಲರಿಗೂ ಹೇಳ್ತೀನಿ. ಕುತ್ತಿಗೆಯಲ್ಲಿ ಗಡಿಯಾರ ಹಾಕಿರೋದೇ ಅದಕ್ಕೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post