ವೀರಸಿಂಹ ರೆಡ್ಡಿ ಸಿನಿಮಾದ ಸಕ್ಸಸ್ ಸಂಭ್ರಮ. ಚಿತ್ರ ಗೆದ್ದಿದ್ದಕ್ಕೆ ಎಲ್ಲರ ಬಗ್ಗೆ ಖುಷಿಯಿಂದ ಮಾತಾಡಿದ ಬಾಲಕೃಷ್ಣ, ಆ ಒಂದು ಮಾತು ಹೇಳಬಾರದಿತ್ತು. ಓಪನ್ ಸ್ಟೇಜ್ನಲ್ಲಿ ಬಾಲಯ್ಯ ಕೊಟ್ಟ ಆ ಸ್ಟೇಟ್ಮೆಂಟ್ ಈಗ ಅಕ್ಕಿನೇನಿ ಫ್ಯಾನ್ಸ್ನ ಕೆರಳಿಸಿದೆ. ಬಾಲಯ್ಯ ಅಗೌರವಾನ್ವಿತ ಹೇಳಿಕೆಗೆ ನಾಗಚೈತ್ಯ ಕೌಂಟರ್ ಕೊಟ್ಟ ವಿವಾದದ ಕಾವು ಹೆಚ್ಚಿಸಿದ್ರು.
ನಂದಮೂರಿ ರಾಮಾರಾವ್. ಅಕ್ಕಿನೇನಿ ನಾಗೇಶ್ವರ ರಾವ್. ಎಸ್ ವಿ ರಂಗಾರಾವ್. ಈ ಮೂವರು ತೆಲುಗು ಸಿನಿಮಾಪ್ರಪಂಚದ ಹೆಮ್ಮೆ. ಆದ್ರೀಗ, ಲೆಜೆಂಡ್ ಬಾಲಯ್ಯ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಬಗ್ಗೆ ಅಗೌರವವಾಗಿ ನಡೆದುಕೊಂಡು ನಾಗಾರ್ಜುನ ಕುಟುಂಬ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೀರಸಿಂಹ ರೆಡ್ಡಿ ಚಿತ್ರದ ಸಕ್ಸಸ್ ಸೆಲೆಬ್ರೇಷನ್. ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬಂದಿದ್ದ ಬಾಲಯ್ಯ ಅವರ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡು ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆ ಕಾಸು ಮಾಡಿದೆ. ಈ ವಿಶೇಷವಾಗಿ ಸಕ್ಸಸ್ ಸೆಲೆಬ್ರೇಷನ್ ಮಾಡಿ ಚಿತ್ರತಂಡ ಓಪನ್ ಸ್ಟೇಜ್ನಲ್ಲಿ ದೊಡ್ಡ ಇವೆಂಟ್ ಆರ್ಗನೈಸ್ ಮಾಡಿದ್ರು. ಈ ವೇದಿಕೆಯಲ್ಲಿ ಚಿತ್ರಕ್ಕಾಗಿ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಬಾಲಯ್ಯ ಮಾತಿನ ಭರದಲ್ಲಿ ಅಕ್ಕಿನೇನಿ ತೊಕ್ಕಿನೇನಿ ಅಂತ ಅವಹೇಳನವಾಗಿ ಮಾತಾಡಿದ್ದರು. ಅಕ್ಕಿನೇನಿ ತೊಕ್ಕಿನೇನಿ ಎಂದಿದ್ದು ಈಗ ನಾಗ್ ಫ್ಯಾಮಿಲಿ ಅಭಿಮಾನಿಗಳನ್ನ ಕೋಪಕ್ಕೆ ಕಾರಣವಾಗಿದ್ದು, ಬಾಲಯ್ಯ ವಿರುದ್ಧ ಕೆಂಡಕಾರುತ್ತಿದ್ದಾರೆ.
ಬಾಲಯ್ಯ ಅವರ ಈ ಹೇಳಿಕೆ ಈಗ ಟಾಲಿವುಡ್ನಲ್ಲಿ ಕಿಚ್ಚು ಹೊತ್ತಿಸಿದೆ. ಅಕ್ಕಿನೇನಿ ಅಭಿಮಾನಿ ಸಂಘಗಳು ಬಾಲಯ್ಯ ಅವರ ನಡೆ ವಿರುದ್ಧ ಟೀಕಾಪ್ರಹಾರ ನಡೆಸ್ತಿದೆ. ಕೂಡಲೇ ಬಾಲಕೃಷ್ಣ ಅವರ ಅಕ್ಕಿನೇನಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ನಾಗೇಶ್ವರ್ ರಾವ್ ಅವರ ಮೊಮ್ಮಗ, ನಾಗಾರ್ಜುನ ಅವರ ಮಗ ಅಕ್ಕಿನೇನಿ ನಾಗಚೈತನ್ಯ ಬಹಿರಂಗವಾಗಿ ಪತ್ರದ ಮೂಲಕ ಬಾಲಯ್ಯಗೆ ಕೌಂಟರ್ ಕೊಟ್ಟಿದ್ದಾರೆ.
ಬಾಲಯ್ಯಗೆ ನಾಗಚೈತನ್ಯ ಕೌಂಟರ್.!
ನಾಗೇಶ್ವರ್ ರಾವ್ ಅವರನ್ನು ತೊಕ್ಕಿನೇನಿ ಅಂತ ನಿಂದಿಸಿದ ಬಾಲಯ್ಯ ಹೇಳಿಕೆ ಖಂಡಿಸಿ ನಾಗಚೈತನ್ಯ ಪತ್ರದ ಮೂಲಕ ತಿರುಗೇಟು ಕೊಟ್ಟಿದ್ದಾರೆ. ”ನಂದಮೂರಿ ತಾರಕ್ ರಾಮಾರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಎಸ್ ವಿ ರಂಗಾರಾವ್ ಅವ್ರು ತೆಲುಗು ಮಾತೆಯ ಮಕ್ಕಳು. ಅವರನ್ನು ಅವಮಾನ ಮಾಡುವುದು ತಮಗೆ ತಾವೇ ಅಪಮಾನ ಮಾಡಿಕೊಂಡಂತೆ” ಅಂತ ಪೋಸ್ಟ್ ಹಾಕಿ ಲೆಜೆಂಡ್ಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯಕ್ಕೆ ಬಾಲಯ್ಯ ಮತ್ತು ಅಕ್ಕಿನೇನಿ ಅಭಿಮಾನಿಗಳ ಸಂಘರ್ಷ ಮುಗಿಯೋಥರಾ ಕಾಣ್ತಿಲ್ಲ. ಅಚಾನಕ್ ಆಗಿ ಹೇಳಿದ್ರೋ ಅಥವಾ ತಮ್ಮ ಮುಂಗೋಪಿತನದಿಂದ ಹೇಳಿದ್ರೋ ಬಾಲಯ್ಯ ಈ ವಿಚಾರದಲ್ಲಿ ಕ್ಷಮೆ ಕೇಳಿದ್ರೆ ಈ ವಿವಾದ ತಣ್ಣಗಾಗಬಹುದು. ಇಲ್ಲವಾದಲ್ಲಿ ಇದ್ರ ಮುಂದುವರಿದ ಭಾಗ ಭವಿಷ್ಯದಲ್ಲಿ ಮರುಕಳಿಸಿದ್ರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post