ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. 8 ವರ್ಷ ವಯಸ್ಸಿನ ರಿಷಿ ಪ್ರಸನ್ನ ಸೇರಿದಂತೆ, 11 ಮಕ್ಕಳಿಗೆ ಪಿಎಂ ರಾಷ್ಟ್ರೀಯ ಬಾಲ ಪುರಸ್ಕಾರ 2023 ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಕಲಾ ವಿಭಾಗದಲ್ಲಿ ಆದಿತ್ಯ ಸುರೇಶ್, ಎಮ್ ಗೌರವಿ ರೆಡ್ಡಿ, ಸಂಭಾಬ್ ಮಿಶ್ರಾ ಮತ್ತು ಶ್ರೇಯಾ ಭಟ್ಟಾಚಾರ್ಯ ಅವರನ್ನು ಗುರುತಿಸಿ ಪ್ರಧಾನಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಗಿದೆ.
ರೋಹನ್ ಬಹಿರ್ ಶೌರ್ಯತೆಯ ವಿಚಾರದಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಪಡೆದಿದ್ದಾರೆ. ಕ್ರೀಡೆಯಲ್ಲಿ ಶೌರ್ಯಜಿತ್ ಖೈರೆ ಮತ್ತು ಹನಯ ನಿಸಾರ್ ಅವರನ್ನು ಸನ್ಮಾನಿಸಲಾಗಿದೆ.
ಇನ್ನು ಅನೌಷ್ಕಾ ಜಾಲಿ, ಆದಿತ್ಯ ಚೌಹಾಣ್ ಮತ್ತು ಕೊಳಗಟ್ಲ ಮೀನಾಕ್ಷಿಯನ್ನು ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post