ಬೆಂಗಳೂರು: ನಮ್ಮ ಮೆಟ್ರೋ ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ ಮೆಟ್ರೋ ಸಂಚಾರ ಸೇವೆಯನ್ನು ಜನವರಿ 27ರಿಂದ 30ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ಮಾರ್ಗದ ತಾಂತ್ರಿಕ ದೋಷದ ಕಾರಣಕ್ಕಾಗಿ ಕೆಂಗೇರಿಯಿಂದ ಮೈಸೂರು ರಸ್ತೆಯ ಮೆಟ್ರೋ ಸಂಚಾರವನ್ನು 4 ದಿನಗಳ ಕಾಲ ಸ್ಥಗಿತ ಮಾಡಲಾಗಿದೆ. ನಾಲ್ಕು ದಿನಗಳ ಬಳಿಕ ಎಂದಿನಂತೆ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೆಟ್ರೋ ಸಂಚಾರ ಲಭ್ಯವಾಗಲಿದೆ.
ಅಂದರೆ ಜನವರಿ 31ರ ಬೆಳಗ್ಗೆ 5 ಗಂಟೆಯಿಂದ ಬೈಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೂ ಮೆಟ್ರೋ ರೈಲು ಸೇವೆಗಳು ಮತ್ತೆ ಆರಂಭ ಆಗಲಿದೆ ಎಂದು ಖುದ್ದು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post