ಇಸ್ಲಾಮಾಬಾದ್: ಪಾಕಿಸ್ತಾನ ಸಾಲದ ಮೊತ್ತ ಬರೋಬ್ಬರಿ 100 ಬಿಲಿಯನ್ ಡಾಲರ್ ದಾಟಿದ್ದು ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೆ ತಲುಪಿದೆ. ಮುಂದಿನ 3 ವರ್ಷದಲ್ಲಿ ಪಾಕ್ 70 ಬಿಲಿಯನ್ ಡಾಲರ್ ಸಾಲ ಮರುಪಾವತಿ ಮಾಡಬೇಕು. ಇದು ಅಲ್ಲದೇ ಈ ಹಣಕಾಸು ವರ್ಷದಲ್ಲಿ 20 ಬಿಲಿಯನ್ ಡಾಲರ್ ಸಾಲ ತೀರಿಸಬೇಕು. ಆದ್ರೆ ಪಾಕ್ ಬಳಿ ಇಷ್ಟೊಂದು ಮೊತ್ತದ ಹಣವೇ ಇಲ್ಲ. ಕೇವಲ 8 ಬಿಲಿಯನ್ ಡಾಲರ್ ಮಾತ್ರ ಇದೆ. ಇದರಿಂದ ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ.
ಈ ಬಗ್ಗೆ ಅಂತರಾಷ್ಟ್ರೀಯ ಮಾನಿಟರಿ ಫಂಡ್ (ಐಎಂಎಫ್) ಈ ಹಿಂದೆ ಪ್ರತಿಕ್ರಿಯಿಸಿತ್ತು. ಪಾಕ್ ಆರ್ಥಿಕ ಸುಧಾರಣಾ ಕ್ರಮ ಕೈಗೊಂಡ್ರೆ ಹೊಸ ಸಾಲ ನೀಡುತ್ತೇವೆ. ಈ ಕ್ರಮ ತೆಗೆದುಕೊಳ್ಳದಿದ್ರೆ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ನಾವು ಹಣ ನೀಡಲಾಗಲ್ಲ ಎಂದು ಹೇಳಿತ್ತು. ಆದ್ರೆ ಪಾಕ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆರ್ಥಿಕವಾಗಿ ದಿವಾಳಿಯಾಗಿದೆ.
ಪಾಕಿಸ್ತಾನದ ಸ್ನೇಹಿ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳು ಸಾಲ ನೀಡದೇ ಕೈ ಕೊಟ್ಟಿವೆ. ಶ್ರೀಲಂಕಾ ಹಾದಿಯಲ್ಲಿ ಪಾಕ್ ಹೆಜ್ಜೆ ಹಾಕಿದೆ. ಇನ್ನು ಮಾರ್ಚ್ ಬಳಿಕ ಸಾಲ ಮರುಪಾವತಿ ಮಾಡದೇ ಇದ್ರೇ ದಿವಾಳಿ ಆಗೋದು ಪಕ್ಕಾ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post