ಇಂದು ಇಂದೋರ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಕೊನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡಕ್ಕೆ ಭಾರೀ ಮೊತ್ತದ ಟಾರ್ಗೆಟ್ ನೀಡಿದೆ. ನಿಗದಿತ 50 ಓವರ್ಗಳಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಶತಕಗಳ ನೆರವಿನಿಂದ 9 ವಿಕೆಟ್ ಕಳೆದುಕೊಂಡು 385 ರನ್ ಬಾರಿಸಿದೆ. ಈ ಮೂಲಕ ಕಿವೀಸ್ ಪಡೆಗೆ 386 ರನ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಓಪನರ್ ಆಗಿ ಬಂದ ರೋಹಿತ್ ಕಿವೀಡ್ ಬೌಲರ್ಸ್ ಬೆಂಡೆತ್ತಿದ್ರು. ಕೇವಲ 81 ಬಾಲ್ನಲ್ಲಿ ಶತಕ ಪೂರೈಸಿದ ರೋಹಿತ್ ದಾಖಲೆ ಬರೆದಿದ್ದಾರೆ.
ಬರೋಬ್ಬರಿ 119 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಕ್ರೀಸ್ನಲ್ಲಿ ನಿಂತು ಅದ್ಭುತವಾಗಿ ಬ್ಯಾಟ್ ಬೀಸಿದ್ರು. ಕೇವಲ 85 ಬಾಲ್ನಲ್ಲಿ ಬರೋಬ್ಬರಿ 9 ಫೋರ್, 6 ಸಿಕ್ಸರ್ ಸಮೇತ 101 ರನ್ ಸಿಡಿಸಿದ್ದಾರೆ.
ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರವಲ್ಲ ಶುಭ್ಮನ್ ಗಿಲ್ ಕೂಡ ಶತಕ ದಾಖಲಿಸಿದ್ರು. ರೋಹಿತ್ ಶರ್ಮಾಗೆ ಸಾಥ್ ನೀಡುತ್ತಲೇ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ಕಿವೀಸ್ ಬೌಲರ್ಸ್ ಬೆವರಿಳಿಸಿದ್ರು.
ಕೇವಲ 78 ಬಾಲ್ನಲ್ಲಿ ಬರೋಬ್ಬರಿ 143 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಗಿಲ್ 13 ಫೋರ್, 5 ಸಿಕ್ಸರ್ ಸಮೇತ 112 ರನ್ ಚಚ್ಚಿದ್ರು. ವಿರಾಟ್ ಕೊಹ್ಲಿ 36, ಹಾರ್ದಿಕ್ ಪಾಂಡ್ಯ 54, ಶಾರ್ದೂಲ್ ಠಾಕೂರ್ 25 ರನ್ ಗಳಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post