ಸಾಲು, ಸಾಲು ಶೂಟೌಟ್ ಪ್ರಕರಣಗಳಿಗೆ ಅಮೆರಿಕಾ ಬೆಚ್ಚಿ ಬಿದ್ದಿದೆ. ಮತ್ತೆ ಮೂರು ಶೂಟೌಟ್ ಘಟನೆ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇನಲ್ಲೇ ಎರಡು ಶೂಟೌಟ್ ಪ್ರಕರಣ ವರದಿ ಆಗಿದೆ. ಇತ್ತೀಚಿಗೆ ಲಾಸ್ ಏಂಜೆಲ್ಸ್‌ನ ಚೀನಾ ಹೊಸ ವರ್ಷದ ಡ್ಯಾನ್ಸ್ ಸಮಾರಂಭದ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ರು. ಇದೀಗ 48 ಗಂಟೆ ಕಳೆಯುವಷ್ಟರಲ್ಲೇ ಗನ್ ಹಿಡಿದ ಅಪರಿಚಿತರು ಅಟ್ಟಹಾಸ ಮೆರೆದಿದ್ದಾರೆ. ಅಮೆರಿಕಾದ ವಿವಿಧ ಕಡೆ ಪದೇ ಪದೇ ಈ ರೀತಿಯ ದುರಂತ ಸಂಭವಿಸುತ್ತಿದೆ.
2022ರಲ್ಲಿ ಅಮೆರಿಕಾದ ವಿವಿಧೆಡೆ ಸಂಭವಿಸಿದ ಶೂಟೌಟ್ ಘಟನೆಗಳಿಗೆ 44 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 44 ಸಾವಿರದಲ್ಲಿ ಅರ್ಧದಷ್ಟು ಮಂದಿ ಗನ್‌ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post