ವಾಷಿಂಗ್ಟನ್: ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್ನಿಂದ ಇದುವರೆಗೆ ಬರೋಬ್ಬರಿ 3 ಲಕ್ಷ ಜನ ಉದ್ಯೋಗಿಗಳನ್ನ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದರಲ್ಲಿ 80 ಸಾವಿರ ಮಂದಿ ಭಾರತೀಯರೆಂದು ತಿಳಿದು ಬಂದಿದೆ.
ಅಮೆರಿಕವು ಕೌಶಲ್ಯಯುತ ಉದ್ಯೋಗಿಗಳಿಗಾಗಿ H-1B, L1 ಎನ್ನುವ ಕಠಿಣ ನಿಯಮದ ವೀಸಾ ನೀಡುತ್ತದೆ. ಸದ್ಯ ಈಗ ಜಾಬ್ ಕಳೆದುಕೊಂಡವರೆಲ್ಲ ಬಹುತೇಕ ಈ ವೀಸಾ ಹೊಂದಿದವರೇ ಆಗಿದ್ದಾರೆ. ಅಮೆರಿಕದಲ್ಲಿ ಈ ವೀಸಾ ಹೊಂದಿದವರು ಯಾರೇ ಆಗಿರಲಿ ಜಾಬ್ ಕಳೆದುಕೊಂಡ 60 ದಿನದಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕು. ಇಲ್ಲದಿದ್ರೆ ಈ ವೀಸಾ ರದ್ದು ಆಗಿ ಅವರು ತಮ್ಮ ತಮ್ಮ ದೇಶಗಳಿಗೆ ಮರಳಬೇಕಾಗುತ್ತದೆ.
ಆರ್ಥಿಕ ಕುಸಿತ, ಕಂಪನಿಯ ವೆಚ್ಚ ಕಡಿತದಿಂದ ಮೈಕ್ರೋಸಾಫ್ಟ್, ಮೇಟಾ, ಅಮೇಜಾನ್, ಗೂಗಲ್, ಅಲ್ಪಬೆಟ್ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗಿಗಳನ್ನ ವಜಾ ಮಾಡಿವೆ. ಎಂಜಿನಿಯರ್, ಡಾಟಾ ಅನಲಿಸ್ಟ್, ವಿಜ್ಞಾನಿಗಳು, ಕ್ಲೌಡ್ ಇಂಜಿನಿಯರ್ಸ್, ಆಪರೇಷನ್ ಸ್ಪೆಷಲಿಸ್ಟ್ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಯಲ್ಲಿರುವವರು ಕೂಡ ಜಾಬ್ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post