ಪುಣೆ: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಜನರ ಮೃತದೇಹ ದೌಂಡ್ ತೆಹಸಿಲ್‌ನ ಪರಗಾಂವ್ ಗ್ರಾಮದ ಭೀಮಾ ನದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಪರಗಾಂವ್ ಮೂಲದ ಮೋಹನ್ ಉತ್ತಮ್ ಪವಾರ್ (50), ಪತ್ನಿ ಸಂಗೀತಾ ಪವಾರ್, ಪುತ್ರಿ ರಾಣಿ ಪುಲವಾರೆ, ಅಳಿಯ ಶ್ಯಾಮರಾವ್ ಪಂಡಿತ್ ಪುಲವಾರೆ ಮತ್ತು ಮೂವರು ಮೊಮ್ಮಕ್ಕಳಾದ ರಿತೇಶ್(7), ಚೋಟು (5) ಮತ್ತು ಕೃಷ್ಣ (3) ಎಂದು ಗುರುತಿಸಲಾಗಿದೆ.
ಜನವರಿ 18 ರಂದು ಮೊದಲ ಮೃತದೇಹ ಪತ್ತೆಯಾದರೆ, ಜನವರಿ 20 ರಿಂದ ಸತತ ಮೂರು ದಿನಗಳಲ್ಲಿ ಇನ್ನೂ ಮೂರು ದೇಹಗಳು ಪತ್ತೆಯಾಗಿವೆ. ಮಂಗಳವಾರ ಕೊನೆಯ ಮೂರು ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಇನ್ನು ಕುಟುಂಬದವರ ಆತ್ಮಹತ್ಯೆಗೆ ನೈಜ ಕಾರಣ ತಿಳಿದುಬಂದಿಲ್ಲ ಮತ್ತು ಆತ್ಮಹತ್ಯೆ ಪತ್ರ ಕೂಡ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post