ಅಪ್ಪು ಬರ್ತ್ಡೇಗೆ ‘ಕಬ್ಜ’ ರಿಲೀಸ್
ದೇಶಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ “ಕಬ್ಜ” ಸಿನಿಮಾ ತಂಡ ಕೊನೆಗೂ ರಿಲೀಸ್ ದಿನಾಂಕ ಅನೌನ್ಸ್ ಮಾಡಿದೆ. ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಅಂದ್ರೆ ಮಾರ್ಚ್ 17ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶನದ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಐದಕ್ಕೂ ಹೆಚ್ಚು ಭಾಷೆಯಲ್ಲಿ ತೆರೆಗೆ ಬರ್ತಿದೆ.
‘ಉಪಾಧ್ಯಕ್ಷ’ ಟೈಟಲ್ ಸಾಂಗ್
ಕಾಮಿಡಿ ಕಿಂಗ್ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಈ ಹಾಡಿನಲ್ಲಿ ಚಿಕ್ಕಣ್ಣ ಜಬರ್ದಸ್ತ್ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ. ಅನಿಲ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ.
‘ಥೇರಿ’ ರಿಮೇಕ್ನಲ್ಲಿ ಪವನ್ ಕಲ್ಯಾಣ್!
ತೆಲುಗು ಪವರ್ಸ್ಟಾರ್ ಪವನ್ ಕಲ್ಯಾಣ್ ಮತ್ತೊಂದು ರಿಮೇಕ್ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ‘ವಕೀಲ್ ಸಾಬ್’ ಮಾಡಿದ್ದ ಪವನ್ ಕಲ್ಯಾಣ್ ಈಗ ತಮಿಳು ನಟ ವಿಜಯ್ ನಟಿಸಿದ್ದ ‘ಥೇರಿ’ ಚಿತ್ರವನ್ನ ತೆಲುಗಿನಲ್ಲಿ ರಿಮೇಕ್ ಮಾಡೋಕೆ ಮುಂದಾಗಿದ್ದಾರೆ. ಸಾಕಷ್ಟು ಬದಲಾವಣೆಯೊಂದಿಗೆ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದು, ಪವನ್ ಕಲ್ಯಾಣ್ ಇಮೇಜ್ಗೆ ತಕ್ಕಂತೆ ಸಿನಿಮಾ ಮಾಡಲಾಗುತ್ತದೆಯಂತೆ.
‘ಜಸ್ಟಿಸ್ ಫಾರ್ ಸಂಗೀತಾ’ ಟ್ರೆಂಡಿಂಗ್
ತಮಿಳು ನಟ ವಿಜಯ್ ಮತ್ತು ಸಂಗೀತ ದಾಂಪತ್ಯದಲ್ಲಿ ಬಿರುಕು ಉಂಟಾಗಲು ಮಲಯಾಳಂ ನಟಿ ಕೀರ್ತಿ ಸುರೇಶ್ ಕಾರಣ ಎಂಬ ಸುದ್ದಿ ವೈರಲ್ ಆಗ್ತಿದೆ. ಈ ಹಿನ್ನೆಲೆ ‘ಜಸ್ಟಿಸ್ಟ್ ಫಾರ್ ಸಂಗೀತಾ’ ಎನ್ನುವ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದ್ದು, ನಟಿಯ ವಿರುದ್ಧ ಅಭಿಯಾನ ನಡೆಯುತ್ತಿದೆ. ವಿಜಯ್ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ಇರುವ ಫೋಟೋಗಳನ್ನ ಶೇರ್ ಮಾಡಿ ಸಂಗೀತಾಗೆ ನ್ಯಾಯ ಕೊಡಿ ಎಂದು ಟ್ರೆಂಡ್ ಸೃಷ್ಟಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post