ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನ ಕ್ಲೀನ್ಸ್ವೀಪ್ ಸಾಧಿಸಿದ ಟೀಮ್ ಇಂಡಿಯಾ ಏಕದಿನ ಱಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಕಿವೀಸ್ 2ನೇ ಮ್ಯಾಚ್ ಸೋತಿರುವಾಗ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿತ್ತು. ಆದ್ರೆ 3ನೇ ಮ್ಯಾಚ್ನ್ನು ಕೂಡ ಭಾರತ ವಿನ್ ಆಗಿದ್ದರಿಂದ ಇಂಗ್ಲೆಂಡ್ನ್ನ 2ನೇ ಸ್ಥಾನಕ್ಕೆ ತಳ್ಳಿ ನಂಬರ್ 1 ಸ್ಥಾನವನ್ನ ಭಾರತ ಕಾಯ್ದುಕೊಂಡಿತು.
ಕಿವೀಸ್ ಎದುರು ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದ ಬಳಿಕ ಭಾರತ ಈ ಅಮೋಘ ಸಾಧನೆ ಮಾಡಿದೆ. ಆ ಮೂಲಕ ನಂಬರ್ವನ್ ಪಟ್ಟದಲ್ಲಿದ್ದ ನ್ಯೂಜಿಲೆಂಡ್ ತಂಡವನ್ನ 4ನೇ ಸ್ಥಾನಕ್ಕೆ ತಳ್ಳಿದೆ. ಇಷ್ಟು ದಿನವಾದರು ನ್ಯೂಜಿಲೆಂಡ್ ಅಂಗ್ರಸ್ಥಾನದಲ್ಲೇ ಇತ್ತು. ಆದ್ರೆ ಈ ಭಾರತದ ಪ್ರವಾಸದಲ್ಲಿ ಇಡೀ ಸರಣಿಯನ್ನೇ ಹೀನಾಯ ಸೋಲಿನಿಂದ ಱಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ನಂತರದ ಸ್ಥಾನ ಪಡೆದಿದೆ.
ಅಗ್ರಸ್ಥಾನಕ್ಕೆ ಏರಿರುವ ಟೀಮ್ ಇಂಡಿಯಾ 114 ಅಂಕ ಪಡೆದಿದ್ರೆ, 113 ಮತ್ತು 112 ಅಂಕ ಪಡೆದಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇನ್ನು 4ನೇ ಸ್ಥಾನ ಕುಸಿತ ಕಂಡಿರುವ ಕಿವೀಸ್ 111 ಅಂಕ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post