ಜಕಾರ್ತ್: ನದಿಗಳಲ್ಲಿ ಯಾವುದಾದ್ರೂ ಪ್ರಾಣಿ ಸಿಕ್ಕರೆ ಸಾಕು ಮೊಸಳೆ ಹಾಗೇ ಬಾಯಿ ತೆರೆದು ನುಂಗಲು ಬಂದು ಬಿಡುತ್ತವೆ. ಆದ್ರೆ ಇಲ್ಲೊಂದು ಮೊಸಳೆ ಮಾತ್ರ ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕನನ್ನ ತನ್ನ ಬೆನ್ನ ಮೇಲೆ ಹೊತ್ತು ತಂದು ರಕ್ಷಣೆ ಪಡೆಯ ಬೋಟ್ನಲ್ಲಿರುವ ಅಧಿಕಾರಿಗಳಿಗೆ ನೀಡಿದೆ. ಸದ್ಯ ಈ ವಿಡಿಯೋ ನೋಡಿ ಕೆಲವರಂತೂ ಶಾಕ್ಗೆ ಒಳಗಾಗಿದ್ದಾರೆ.
ಮಹಮ್ಮದ್ ಜಿಯಾದ್ ವಿಜಯಾ (4) ಮೊಸಳೆ ಹೊತ್ತು ತಂದ ಮೃತ ಬಾಲಕ. ಈ ಘಟನೆ ನಡೆದಿರುವುದು ಇಂಡೋನೇಷ್ಯಾದ ಜಾವಾ ಬಳಿಯ ಪೂರ್ವ ಕಾಲಿಮಂಟನ್ನಲ್ಲಿ. ಆಟವಾಡಲು ತೆರಳಿದ್ದ ಮಹಮ್ಮದ್ ನದಿಗೆ ಬಿದ್ದಿದ್ದಾನೆಂದು ತಿಳಿದ ಕುಟುಂಬಸ್ಥರು ನೀರಲ್ಲಿ ಹುಡುಕಾಟ ನಡೆಸಿದ್ರು ಸಿಕ್ಕಿರಲಿಲ್ಲ. ಬಳಿಕ ಮಾಹಿತಿ ಮೇರೆಗೆ ರಕ್ಷಣಾ ಇಲಾಖೆ ಸಿಬ್ಬಂದಿ ಕೂಡ 2 ದಿನ ಹುಡುಕಿದ್ರೂ ಬಾಲಕ ಪತ್ತೆಯಾಗಿಲ್ಲ.
2 ದಿನದ ಬಳಿಕವು ಸಿಬ್ಬಂದಿ ನದಿಯಲ್ಲಿ ಬಾಲಕನ ಹುಡುಕಾಟದಲ್ಲಿದ್ರು. ಆದ್ರೆ, ಜನವರಿ 21 ರಂದು ಸ್ವತಹ ಮೊಸಳೆಯೇ ನೀರಲ್ಲಿ ಬಾಲಕನ ಮೃತದೇಹವನ್ನ ತನ್ನ ಬೆನ್ನ ಮೇಲೆ ಹೊತ್ತು ನೇರ ಬಂದು ರಕ್ಷಣಾ ಅಧಿಕಾರಿಗಳಿಗೆ ತಲುಪಿಸಿ ಮತ್ತೆ ವಾಪಸ್ ಹೋಗಿದೆ. ಈ ಘಟನೆಯಿಂದ ಅಲ್ಲಿದ್ದವರಿಗೂ ಸಖತ್ ಅಚ್ಚರಿಯಾಗಿದೆ. ಈ ವಿಡಿಯೋ ನೋಡಿದ ಎಲ್ಲರಿಗೂ ಶಾಕ್ ಆಗುವುದಂತೂ ಗ್ಯಾರಂಟಿ.
ಇನ್ನು ಬಾಲಕನ ಮೃತದೇಹದ ಪ್ರಾಥಮಿಕ ಪರೀಕ್ಷೆ ವೇಳೆ ಯಾವುದೇ ಗಾಯಗಳು ಇರಲಿಲ್ಲ. ನೀರಿಗೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾನೆ. ಆದ್ರೆ ಈ ಘಟನೆಯಲ್ಲಿ ಮೊಸಳೆ ನಮಗೆ ಸಹಾಯ ಮಾಡಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಯೊಬ್ರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
A crocodile caught on camera carrying the body of a toddler above his head in the Mahakam River, Kutai Kartanegara, East Kalimantan, Indonesia 🇮🇩
Muhammad Ziyad Wijaya, 4 years old, was reportedly drowned & has been missing for 2 dayshttps://t.co/NsonbJEsHN pic.twitter.com/nBCuY8kXXQ
— Saad Abedine (@SaadAbedine) January 21, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post