ಹುಲಿ ದಾಳಿಯಿಂದ ಹಾಲು ನೀಡುತ್ತಿದ್ದ ಹಸು ಒಂದು ಬಲಿಯಾಗಿರುವ ಘಟನೆ ಕೊಡಗು ಜೊಲ್ಲೆಯ ವಿರಾಜಪೇಟೆ ನಗರದ ಹೊರವಲಯ ಕಿರುಮಕ್ಕಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಕಿರುಮಕ್ಕಿ ಗ್ರಾಮದ ನಿವಾಸಿ ಹೆಚ್ ಪಿ ಲವ ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಯಿಂದ ಸಾವನ್ನಪ್ಪಿದೆ.
ಕೆಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿನ ಸುಮಾರು ಮೂರರಿಂದ ನಾಲ್ಕು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿದೆ. ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲವ ಅವರಿಗೆ ಆರು ಹಸುಗಳಿದೆ. ಸಂಜೆ ವೇಳೆಗೆ ಹಾಲು ಕರೆದು ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಿಂದಿರುಗಿದ್ದಾರೆ. ನಿನ್ನೆ ಮುಂಜಾನೆ ಎಂದಿನಂತೆ ಹಾಲು ಕರೆಯುವ ಸಲುವಾಗಿ ಕೊಟ್ಟಿಗೆ ಬಳಿ ಹೋದಾಗ ಹಾಲು ನೀಡುತ್ತಿದ್ದ ಒಂದು ಹಸು ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಗುಡ್ಡಂಡ ನರೇಶ್ ಎಂಬುವವರ ಗದ್ದೆಯಲ್ಲಿ ಹಸುವಿನ ಮೃತ ದೇಹ ಪತ್ತೆಯಾಗಿದೆ. ಲವ ಅವರು ನೀಡಿರುವ ದೂರಿನ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post