ಮಂಡ್ಯ: ತಾಳಿ ಕಟ್ಟಿದ್ದ ಗಂಡನೇ ತನ್ನ ಹೆಂಡತಿಯನ್ನು ಕೊಲೆಗೈದು ಪರಾರಿಯಾದ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಶೋಭಾ (40) ಗಂಡನಿಂದ ಕೊಲೆಯಾದವಳು.
ಮನೋಹರ್ ತನ್ನ ಹೆಂಡತಿ ಶೋಭಾಳನ್ನು ಕುಡುಗೋಲಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕಂಠಪೂರ್ತಿ ಕುಡಿದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಶೋಭಾ ಹಾಗೂ ಮನೋಹರ್ ಒಂದೇ ಗ್ರಾಮದವರಾಗಿದ್ದು, 23 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಪತಿ ಮನೋಹರ್ ಪ್ರತಿದಿನ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ನಿನ್ನೆಯೂ ಬೈಕ್ ಸಾಲದ ವಿಚಾರಕ್ಕೆ ಜಗಳವಾಗಿದೆ. ಮಗನಿಗೆ ಸಾಲದ ಕಂತಿನಲ್ಲಿ ಬೈಕ್ ಕೊಡಿಸಿದ್ದ ಶೋಭಾ ಮೇಲೆ ಮನೋಹರ್ ಗಲಾಟೆ ಮಾಡಿದ್ದಾನೆ.
ಮಗನಿಗೆ ಬೈಕ್ ತೆಗೆಸಿಕೊಟ್ಟ ಶೋಭಾಗೆ ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರವಾಗಿ ನಿನ್ನೆ ಸಿಬ್ಬಂದಿಗಳು ಮನೋಹರ್‌ಗೆ ಕರೆ ಮಾಡಿ ಕಂತು ಕಟ್ಟುವಂತೆ ಕೇಳಿದ್ದಾರೆ. ಅಷ್ಟೇ ಅಲ್ಲದೆ ಮನೆ ಬಳಿಗೆ ಬಂದು ಹಣ ಕಟ್ಟುವಂತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಒತ್ತಡ ಹೇರಿದ್ದಾರೆ.
ಈ ವಿಚಾರಕ್ಕೆ ಕೋಪಗೊಂಡ ಮನೋಹರ್ ಕುಡಿದು ಹೆಂಡತಿ ಜೊತೆಗೆ ಜಗಳ ಶುರು ಮಾಡಿದ್ದಾನೆ. ನಂತರ ಪರಸ್ಪರ ಬೈದಾಡಿಕೊಂಡಿದ್ದಾರೆ. ಬಳಿಕ ಅಲ್ಲೇ ಇದ್ದ ಕುಡುಗೋಲಿನಿಂದ ಶೋಭಾ ತೊಡೆ ಭಾಗಕ್ಕೆ ಮನೋಹರ್ ಹಲ್ಲೆ ಮಾಡಿದ್ದಾರೆ.
ಮಗಳು ಅನುಷಾ ಕಣ್ಣೆದುರೇ ಪತ್ನಿ ಮೇಲೆ ಮನೋಹರ್ ಹಲ್ಲೆ ನಡೆಸಿದ್ದಾನೆ. ನಂತರ ಹಲ್ಲೆ ನಡೆಸಿ ಮನೋಹರ್ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ತಾಯಿ ನರಳಾಡುತ್ತಿರುವುದನ್ನು ಕಂಡು ಮಗಳು ಗೋಗರೆದರು ಸ್ಥಳೀಯರು ಸಹಾಯಕ್ಕೆ ಬರಲಿಲ್ಲ. ಮಾತ್ರವಲ್ಲದೆ ಸರಿಯಾದ ಸಮಯಕ್ಕೆ ಆ್ಯಂಬ್ಯಲೆನ್ಸ್ ಸಿಗದೆ ಶೋಭಾ ಸಾವನ್ನಪ್ಪಿದ್ದಾಳೆ.
ತಂದೆಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ ಪುತ್ರಿ ಅನುಷಾ ಪೊಲೀಸರ ಬಳಿ ಒತ್ತಾಯಿಸಿದ್ದಾಳೆ. ಸಾಯೋವರೆಗೂ ಜೈಲಲ್ಲೇ ಕೊಳೆಯುವ ರೀತಿ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿ ಮನೋಹರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post