ಕೋಲಾರ: ನಾನು ರಾಜಮಾರ್ಗದಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಕಳ್ಳ ಮಾರ್ಗದಲ್ಲಿ ಬರಲಿಲ್ಲ. ನಾವೇನು ಸಣ್ಣ ಮಕ್ಕಳು ಅಲ್ಲ. ಯಾರೋ ಹೇಳಿಕೊಟ್ಟಿದ್ದನ್ನು ಹೇಳಲು. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನ ಕಲಿತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ 3 ಕೋಟಿ ಲಂಚದ ಆರೋಪಕ್ಕೆ ಗರಂ ಆದ ಸುಧಾಕರ್, ಸಿದ್ಧಾಂತಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ನೀವು ಬಂದಿದ್ದು ಎಲ್ಲಿಂದ. ಜನತಾದಳದಿಂದ ಕಾಂಗ್ರೆಸ್‌ಗೆ ಯಾಕೆ ಬಂದ್ರಿ. ನಾನಾದ್ರು ಹತ್ತು ವರ್ಷ ಕಾಂಗ್ರೆಸ್‌ನಲ್ಲಿದ್ದೆ. ನೀವು ಮೂವತ್ತು ವರ್ಷಗಳ ಕಾಲ ಜನತಾದಳದಲ್ಲಿದ್ರಿ. ಇಡೀ ಜೀವನ ನೀವು ಕಾಂಗ್ರೆಸ್‌ಗೆ ಬೈದುಕೊಂಡು ಬಂದ್ರಿ. ಕೊನೆಯಲ್ಲಿ ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಸೇರಿದ್ದೀರಾ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
2019ರಲ್ಲಿ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರ ಬೀಳುತ್ತೆ ಅಂತಾ ಸಿದ್ದರಾಮಯ್ಯ ಮೊದಲೇ ಹೇಳಿದ್ರು. ಲೋಕಸಭೆ ಚುನಾವಣೆವರೆಗೂ ಕಾಯಲು ನೀವೇ ಹೇಳಿದ್ರಿ. ನಿಮ್ಮ ಮಾತನ್ನು ನಂಬಿಕೊಂಡು ಒಂದು ವರ್ಷ ಕಾದಿದ್ದೇವೆ. ಒಂದು ವರ್ಷ ಆದ ಮೇಲೆ ರಾಹುಲ್‌ಗಾಂಧಿ ಐದು ವರ್ಷ ಎಂದು ಹೇಳುತ್ತಿದ್ದಾರೆ ಅಂದ್ರಿ. ನಮ್ಮ ರಾಜಕೀಯ ಜೀವನಕ್ಕೆ ಧಕ್ಕೆ ಆಗಿತ್ತು. ಅದಕ್ಕಾಗಿ ಪಕ್ಷ ಬಿಡಬೇಕಾಯಿತು. ಅಧಿಕಾರಕ್ಕಾಗಿ ನಾನು ಹೊರಗೆ ಬರಲಿಲ್ಲ. ವೈಯುಕ್ತಿಕವಾಗಿ ನಿಮ್ಮೊಂದಿಗೆ ಈಗಲೂ ನನಗೆ ಉತ್ತಮ ಸಂಬಂಧವಿದೆ. ಆದ್ರೆ ರಾಜಕೀಯವೇ ಬೇರೆ ಎಂದು ಸುಧಾಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post