ಪಾಕಿಸ್ತಾನದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಸಾಲ ತೆಗೆದುಕೊಂಡಿರೋ ಹಣ ವಾಪಸ್ ಮಾಡಲಾಗದ ಸ್ಥಿತಿಗೆ ತಲುಪಿದೆ. ಇಡೀ ದೇಶವನ್ನೇ ಮಾರಿದ್ರೂ ತೀರಿಸಲಾಗದಷ್ಟು ಸಾಲದ ಸುಳಿಯಲ್ಲಿ ಪಾಕ್ ಸಿಲುಕಿ ಒದ್ದಾಡ್ತಿದೆ. ಶ್ರಿಲಂಕಾದಲ್ಲಾದ ನಾಗರೀಕ ದಂಗೆಯತ್ತ ನೆರೆಯ ರಾಷ್ಟ್ರ ಹೆಜ್ಜೆ ಇಡ್ತಿದೆ.
ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಅವನತಿಯ ಅಂಚಿನಲ್ಲಿದೆ. ಆಹಾರಕ್ಕೆ ಹಾಹಾಕಾರ ಎದ್ದ ಬೆನ್ನಲ್ಲೇ ವಿದ್ಯುತ್ ಕಡಿತಕ್ಕೆ ದೇಶವೇ ಕತ್ತಲಲ್ಲಿ ಮುಳುಗಿತ್ತು. ಇದೀಗ ಬೆಟ್ಟದಷ್ಟು ವಿದೇಶಿ ಸಾಲ ಮಾಡಿರೋ ಪಾಕಿಸ್ತಾನ ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿದೆ. ತೆಗೆದುಕೊಂಡಿರೋ ಸಾಲ ತೀರಿಸಲಾಗದೆ ಹೊಸ ಸಾಲಕ್ಕೂ ಕೈ ಒಡ್ಡಲಾಗದೆ ಅತಂತ್ರ ಸ್ಥಿತಿಗೆ ಬಂದು ನಿಂತಿದೆ.
100 ಬಿಲಿಯನ್ ಡಾಲರ್ ದಾಟಿದ ಪಾಕಿಸ್ತಾನ ಸಾಲದ ಮೊತ್ತ!
ಪಾಕಿಸ್ತಾನದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸ್ತಿದೆ. ಆಹಾರ ಕೊರತೆ, ಪವರ್ ಕಟ್, ಹದಗೆಟ್ಟಿರೋ ಕಾನೂನು ಸುವ್ಯವಸ್ಥೆ ಜೊತೆಗೆ ಇದೀಗ ಸಾಲದ ಹೊರೆಯಲ್ಲಿ ಸಿಲುಕಿ ಪಾಕ್ ನಲುಗುತ್ತಿದೆ. ಬರೋಬ್ಬರಿ 100 ಬಿಲಿಯನ್ ಡಾಲರ್ ವಿದೇಶಿ ಸಾಲದಿಂದ ಪಾಕಿಸ್ತಾನ ಕಂಪ್ಲೀಟ್ ಕಂಗಾಲಾಗಿ ಹೋಗಿದೆ.
ಆದ್ರೆ ಸಾಲ ಮರುಪಾವತಿಗೆ ಪಾಕಿಸ್ತಾನದ ಬಳಿ ಹಣವೇ ಇಲ್ಲ
ಪಾಕಿಸ್ತಾನದ ಸಾಲದ ಮೊತ್ತ ಬರೋಬ್ಬರಿ 100 ಬಿಲಿಯನ್ ಡಾಲರ್ಗೆ ತಲುಪಿದೆ. ಇದರ ಪೈಕಿ ಮುಂದಿನ ಮೂರು ವರ್ಷದಲ್ಲಿ 70 ಬಿಲಿಯನ್ ಡಾಲರ್ ಸಾಲ ಮರುಪಾವತಿ ಮಾಡಬೇಕು. ಈ ಹಣಕಾಸು ವರ್ಷದಲ್ಲಿ 20 ಬಿಲಿಯನ್ ಡಾಲರ್ ಸಾಲ ಮರುಪಾವತಿಸಬೇಕು. ಸಾಲ ಮರುಪಾವತಿಗೆ ಪಾಕ್ ಬಳಿ ಹಣವೇ ಇಲ್ಲ. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹದಲ್ಲಿ 8 ಬಿಲಿಯನ್ ಡಾಲರ್ ಮಾತ್ರ ಇದೆ. ಇದರಲ್ಲಿ ಸಾಲ ಮರುಪಾವತಿಸಲು ಸಾಧ್ಯವಿಲ್ಲ.
ಇದನ್ನು ಓದಿ: ಮೋದಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ!
ಇನ್ನು ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಕೊಡುತ್ತಾ ಬಂದಿರೋ ಚೀನಾ ಕೂಡಾ ಸ್ನೇಹಿತನ ನೆರವಿಗೆ ಬಂದಿಲ್ಲ. ಅಲ್ಲದೆ ಅರಬ್ ರಾಷ್ಟ್ರಗಳೂ ಪಾಕಿಸ್ತಾನಕ್ಕೆ ಹಣ ನೀಡಲು ಹಿಂದೆ ಮುಂದೆ ನೋಡ್ತಿವೆ.
ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ಬೇಡುವ ಸ್ಥಿತಿ ನಿರ್ಮಾಣವಾಗುತ್ತೆ ಅಂತಾ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರೋ ಮಾತು ನಿಜವಾಗ್ತಿದೆ. ತುತ್ತು ಅನ್ನಕ್ಕೂ ಪರದಾಡ್ತಿರೋ ಪಾಕಿಸ್ತಾನದಲ್ಲಿ ದಿನಕ್ಕೊಂದು ಸಮಸ್ಯೆ ಉದ್ಭವವಾಗ್ತಿದೆ. ಇದೀಗ ಬೆಟ್ಟದಷ್ಟಿರೋ ಸಾಲ ಮರುಪಾವತಿ ಮಾಡಲಾಗದೆ, ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೆ ಬೆತ್ತಲಾಗಿದೆ. ಮಾಡಿರೋ ಪಾಪದ ಕೊಡ ತುಂಬುತ್ತಿದ್ಯೋ ಏನೋ, ಮೇಲಿಂದ ಮೇಲೆ ಸಂಕಷ್ಟಗಳಿಂದ ಪಾಕ್ ಬರ್ಬಾದ್ ಆಗುವತ್ತ ಹೆಜ್ಜೆ ಇಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post