ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಿದ್ದಂತೆ, ತನಿಖಾಧಿಕಾರಿಗಳ ವಿರುದ್ಧ ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾನೆ. ಆಡಿಯೋ ಸಾಕ್ಷಿ ಸಮೇತ, ವಿಡಿಯೋ ಮಾಡಿ ತನಿಖೆಗೆ ಆಗ್ರಹಿಸಿದ್ದಾನೆ. ಮತ್ತೊಂದ್ಕಡೆ ಆರ್.ಡಿ ಪಾಟೀಲ್ ವಿಚಾರವಾಗಿ ನಾಯಕರ ವಾಗ್ಯುದ್ಧ ಹೆಚ್ಚಾಗತೊಡಗಿದೆ. ಪಿಎಸ್ಐ ಸ್ಕ್ಯಾಮ್ 2022ರಲ್ಲಿ ರಾಜ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದ ಅತೀ ದೊಡ್ಡ ಹಗರಣ. ಇಲಾಖೆಯೊಳಗೇ ಇದ್ದು, ಪಾಪದ ಹಣಕ್ಕೆ ಕೈಚಾಚಿದ ಸಣ್ಣ ಸಣ್ಣ ಮೀನುಗಳು ಜೈಲು ಹಕ್ಕಿಯಾದದ್ದು, ಈಗ ಹಳೇ ಇತಿಹಾಸ.
ಪಿಎಸ್ಐ ಸ್ಕ್ಯಾಮ್ನಲ್ಲಿ ದೊಡ್ಡ ತಿಮಿಂಗಿಲ ಎಂಬ ಬಿರುದು ಬಂದಿದ್ದು, R.D ಪಾಟೀಲ್. ಇಷ್ಟು ದಿನ ಕಣ್ಣಾ ಮುಚ್ಚಾಲೆ ಆಟವಾಡಿ, ನಿನ್ನೆ ಪೊಲೀಸರ ಮುಂದೆ PSI ಸ್ಕ್ಯಾಮ್ ಕಿಂಗ್ಪಿನ್ R.D ಪಾಟೀಲ್ ಶರಣಾಗಿ ಶಸ್ತ್ರತ್ಯಾಗ ಮಾಡಿದ್ದ.. ಈ ವೇಳೆ ತನಿಖಾಧಿಕಾರಿಯ ಮೇಲೆಯೇ ಗಂಭೀರ ಆರೋಪ ಮಾಡಿದ್ದಾನೆ.
PSI ಸ್ಕ್ಯಾಮ್ ಕಿಂಗ್ಪಿನ್ R.D ಪಾಟೀಲ್ಗೆ ಬ್ಲ್ಯಾಕ್ಮೇಲ್
3 ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ರಾ ತನಿಖಾಧಿಕಾರಿ?
ಹೀಗೊಂದು ಪ್ರಶ್ನೆ R.D ಪಾಟೀಲ್ ಮಾಡಿದ ಗಂಭೀರ ಆರೋಪದ ಮೇಲೆ ಎದ್ದಿದೆ.. PSI ಸ್ಕ್ಯಾಮ್ ಕಿಂಗ್ಪಿನ್ ಪಾಟೀಲ್ಗೆ ಬ್ಲ್ಯಾಕ್ಮೇಲ್ ಮಾಡಲಾಗಿದೆಯಂತೆ.. 3 ಕೋಟಿ ರೂಪಾಯಿಗೆ ತನಿಖಾಧಿಕಾರಿ ಡಿಮ್ಯಾಂಡ್ ಮಾಡಿದ್ರು ಅಂತ R.D ಪಾಟೀಲ್ಗೆ ಆರೋಪಿಸಿದ್ದಾನೆ..
DYSP ಶಂಕರಗೌಡ ಮೇಲೆ R.D ಪಾಟೀಲ್ ಆರೋಪ!
ನ್ಯಾಯಾಲಯದ ಮುಂದೆ ಶರಣಾಗೋದಕ್ಕೂ ಮುನ್ನವೇ ಆರ್.ಡಿ.ಪಾಟೀಲ್, ಪೊಲೀಸ್ ಅಧಿಕಾರಿಯ ವಿರುದ್ಧವೇ ದೊಡ್ಡ ಬಾಂಬ್ ಸಿಡಿಸಿದ್ದಾನೆ. ತನಿಖಾಧಿಕಾರಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, 3 ಕೋಟಿಗೆ ಡಿಮ್ಯಾಂಡ್ ಮಾಡಿದ್ರು. ಬೇಡಿಕೆಗೆ ಒಪ್ಪಿ 76 ಲಕ್ಷ ತಲುಪಿಸಿದ್ದೇನೆ. ಉಳಿದ ಹಣ ಕೊಡಲು ಆಗದಿದ್ದಾಗ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಅಂತ ಆರ್ಡಿ ಪಾಟೀಲ್ ಆರೋಪಿಸಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಜೊತೆ ಮಾತನಾಡಿರೋ ಫೋನ್ ಸಂಭಾಷಣೆಯನ್ನೂ ರಿಲೀಸ್ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತರಿಗೂ ಪತ್ರ ಬರೆದಿದ್ದಾರೆ. ಇದರ ಬಗ್ಗೆ ರಿಯಾಕ್ಟ್ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ತನಿಖಾಧಿಕಾರಿಯ ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಅಂದ್ರು. ಮತ್ತೊಂದು ಪಿಎಸ್ಐ ಹಗರಣದ ಕಿಂಗ್ಪಿನ್ ಕಾಂಗ್ರೆಸ್ ಮುಖಂಡ ಅಂತಾ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ರು.
ಸಾಲು ಸಾಲು ಹಗರಣಗಳ ಸುಳಿಯಲ್ಲಿ ಸಿಲುಕಿದ ರಾಜ್ಯ ಸರ್ಕಾರಕ್ಕೆ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಸರ್ಕಾರದಲ್ಲಿ ಕಂಟ್ರೋಲ್ ಇಲ್ಲ. ಹಾದಿ ಬೀದಿಯಲ್ಲಿ ಕೂತು ದಂಧೆ ಮಾಡೋರಿಂದ ಸರ್ಕಾರ ನಡೀತಿದೆ ಅಂತ ಅಸಮಾಧಾನ ಹೊರಹಾಕಿದ್ರು. ಒಟ್ಟಾರೆ, ಪಿಎಸ್ಐ ಸ್ಕ್ಯಾಮ್ ಕಿಂಗ್ಪಿನ್ ಆರ್.ಡಿ ಪಾಟೀಲ್ ಈಗ ಪೊಲೀಸರ ವ್ಯೂಹದಲ್ಲಿ ಬಂಧಿಯಾಗಿದ್ದಾನೆ. ಪ್ರಕರಣದ ಅಳ, ಅಗಲವನ್ನ ಪಾಪದ ಹಣ ನುಂಗಿದ್ದ ಪಾಟೀಲ್ ಕಡೆಯಿಂದ ಕಕ್ಕಿಸಬೇಕಿದೆ. ಭ್ರಷ್ಟಾಚಾರ ಎಸಗಿದ್ದು ಯಾರು? ಇದರ ಹಿಂದೆ ಯಾರ ಕೈವಾಡ ಇದೆ ಅನ್ನೋದನ್ನ ಆಳಕ್ಕಿಳಿದು ತನಿಖೆ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post