ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧ ಅಮೋಘವಾದ 6 ಸಿಕ್ಸ್ರ್ಗಳನ್ನ ಸಿಡಿಸಿದ್ರು. ಇದರಿಂದ ರೋಹಿತ್ ಮತ್ತೊಂದು ದಾಖಲೆಯನ್ನ ತಮ್ಮದಾಗಿಸಿಕೊಂಡ್ರು. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ 3ನೇ ಸ್ಥಾನಕ್ಕೆ ಏರಿದ್ರು. ಅಲ್ಲದೆ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯರ ಸಿಕ್ಸರ್ಗಳ ದಾಖಲೆ ಬ್ರೇಕ್ ಮಾಡಿದ್ದಾರೆ.
445 ಏಕದಿನ ಪಂದ್ಯಗಳಲ್ಲಿ ಜಯಸೂರ್ಯ 270 ಸಿಕ್ಸರ್ಗಳನ್ನು ಸಿಡಿಸಿದ್ರೆ, ರೋಹಿತ್ 241 ಪಂದ್ಯಗಳಲ್ಲಿ ಈ ದಾಖಲೆ ಉಡೀಸ್ ಮಾಡಿದ್ದಾರೆ. ನಿನ್ನೆಯ ಮ್ಯಾಚ್ನಲ್ಲಿ ರೋಹಿತ್ ಬ್ಯಾಟ್ನಿಂದ ಬಂದ ಭರ್ಜರಿ 6 ಸಿಕ್ಸರ್ನಿಂದ ಹಿಟ್ಮ್ಯಾನ್ ಒಟ್ಟು 273 ಸಿಕ್ಸರ್ಗಳನ್ನ ಸಿಡಿಸಿರುವ ಬಗ್ಗೆ ದಾಖಲೆಯಾಯಿತು. ಕ್ರಿಸ್ಗೇಲ್, ಶಾಹೀದಿ ಅಫ್ರಿದಿ ಮೊದಲೆರಡು ಸ್ಥಾನದಲ್ಲಿದ್ರೆ ರೋಹಿತ್ 3ನೇ ಸ್ಥಾನದಲ್ಲಿದ್ದಾರೆ.
ಒನ್ ಡೇ ಮ್ಯಾಚ್ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಕೆಟರ್ಸ್
- ಪಾಕಿಸ್ತಾನದ ಶಾಹೀದಿ ಅಫ್ರಿದಿ 351 ಸಿಕ್ಸರ್ಗಳು
- ವೆಸ್ಟ್ಇಂಡೀಸ್ನ ಕ್ರಿಸ್ಗೇಲ್ 331 ಸಿಕ್ಸರ್ಗಳು
- ಭಾರತದ ರೋಹಿತ್ ಶರ್ಮಾ 273 ಸಿಕ್ಸರ್ಗಳು
- ಶ್ರೀಲಂಕಾದ ಸನತ್ ಜಯಸೂರ್ಯ 270 ಸಿಕ್ಸರ್ಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post