ಮೊದಲು ವಿರಾಟ್ ಕೊಹ್ಲಿ ಶತಕ ಯಾವಾಗ ಅಂತಿದ್ರು. ಆದ್ರೆ, ಕೊಹ್ಲಿ ಎಲ್ಲದಕ್ಕೂ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ರು. ಇದರ ನಡುವೆ ಎದ್ದಿದ್ದ ಮತ್ತೊಂದು ಪ್ರಶ್ನೆ ಅಂದ್ರೆ, ODIನಲ್ಲಿ ರೋಹಿತ್ ಶತಕ ಯಾವಾಗ ಅನ್ನೋದು. ಆದ್ರೀಗ ಇಂದೋರ್ನ ಹೋಲ್ಕರ್ ಮೈದಾನದಲ್ಲಿ ಹಿಟ್ಮ್ಯಾನ್ರ ಶತಕಗಳ ಬರ ನೀಗಿಸಿಕೊಂಡಿದ್ದಾರೆ.
𝐓𝐇𝐄 𝐖𝐀𝐈𝐓 𝐈𝐒 𝐎𝐕𝐄𝐑.. ರೋಹಿತ್ ಶರ್ಮಾರ ಶತಕದ ಬರ ನೀಗಿದೆ. 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಸೆಂಚುರಿಗಳ ವನವಾಸ ಮುಗಿದಿದೆ. ಟೀಕೆ, ಅವಮಾನ, ನೋವು, ಹತಾಶೆ ಹೀಗೆ ಎಲ್ಲವನ್ನೂ ಮೆಟ್ಟಿನಿಂತಿದ್ದಾರೆ. ಕೊನೆಗೂ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೂವರೆ ವರ್ಷದ ಬಳಿಕ ಅಗಸಕ್ಕೆ ತನ್ನ ಬ್ಯಾಟ್ ದರ್ಶನ ಮಾಡಿದ್ದಾರೆ. ಆ ಮೂಲಕ ಮುಂಬೈಕರ್, I AM BACK ಎಂಬ ಸಂದೇಶ ಕಳ್ಸಿದ್ದಾರೆ.
3 ವರ್ಷಗಳ ಬಳಿಕ ಬ್ಯಾಟ್ ಮೇಲೆತ್ತಿದ ಹಿಟ್ಮ್ಯಾನ್
3 ವರ್ಷ 5 ದಿನ ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಸಂಭ್ರಮಿಸೋಕೆ ತೆಗೆದುಕೊಂಡ ವರ್ಷಗಳು. ನಿನ್ನೆ ನ್ಯೂಜಿಲೆಂಡ್ ವಿರುದ್ಧ ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸಿದ ಹಿಟ್ಮ್ಯಾನ್, ಕೊನೆಗೂ ಶತಕದ ಬರ ನೀಗಿಸಿಕೊಂಡ್ರು. ಸಿಕ್ಕಸಿಕ್ಕ ಕಡೆಯಲ್ಲಾ ಚೆಂಡನ್ನ ಹಿಟ್ ಮಾಡಿದ ಮುಂಬೈಕರ್ ಬರೋಬ್ಬರಿ 1100 ದಿನಗಳು, 36 ತಿಂಗಳು, 157 ವಾರಗಳ ಬಳಿಕ ODIನಲ್ಲಿ ದಾಖಲೆಯ ಸೆಂಚುರಿ ಸಿಡಿಸಿದ್ರು. 85 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 101 ರನ್ ಚಚ್ಚಿದ್ರು.
2020ರ ಜನವರಿ 19ರಂದು ಸಿಡಿಸಿದ್ದು ಕೊನೆಯ ಶತಕ
ಟೀಮ್ ಇಂಡಿಯಾ ಕ್ಯಾಪ್ಟನ್, 3 ವರ್ಷಗಳ ಬಳಿಕ ನೂರರ ಗಡಿ ದಾಟಿದ್ದಾರೆ. ಆದ್ರೆ, ತಮ್ಮ ಕೊನೆಯದಾಗಿ ತಮ್ಮ ಬ್ಯಾಟನ್ನು ತೋರಿಸಿದ್ದು 2020ರ ಜನವರಿ 19ರಂದು. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 119 ರನ್ ಗಳಿಸಿದ್ರು. ಅದಾದ ಬಳಿಕ ನಿನ್ನೆವರೆಗೂ ಶತಕದ ಬರ ಎದುರಿಸ್ತಿದ್ದ ಸಿಕ್ಸರ್ ಕಿಂಗ್, ಏಕದಿನದಲ್ಲಿ 3 ವರ್ಷಗಳಿಂದ ರನ್ಗಾಗಿ ಪರದಾಡ್ತಿದ್ರು. ಹೀಗಾಗಿ ಟೀಮ್ನಿಂದ ಕೈಬಿಡಬೇಕು ಎಂಬ ಟೀಕೆಯೂ ವ್ಯಕ್ಯವಾಗಿತ್ತು. ಅದಕ್ಕೀಗ ತಕ್ಕ ಉತ್ತರ ನೀಡಿದ್ದಾರೆ.
ಕ್ಯಾಪ್ಟನ್ ಆಗಿ ಮೊದಲ ಶತಕ ಸಿಡಿಸಿದ ಮುಂಬೈಕರ್
ಸ್ಫೋಟಕ ಆಟವಾಡಿದ ಮುಂಬೈಕರ್, ಸೆಂಚುರಿ ಬಾರಿಸಿದ್ದು ಜಸ್ಟ್ 83 ಎಸೆತಗಳಲ್ಲಿ. ಇದು ಅವರ 2ನೇ ಫಾಸ್ಟೆಸ್ಟ್ ಹಂಡ್ರೆಡ್ ಆಗಿದೆ. ಜೊತೆಗೆ ನ್ಯೂಜಿಲೆಂಡ್ ವಿರುದ್ಧವೇ 2ನೇ ಶತಕ ದಾಖಲಿಸಿ ಮಿಂಚಿದ್ರು. ಇನ್ನ ರೋಹಿತ್ ಏಕದಿನ ತಂಡಕ್ಕೆ ಫುಲ್ ಟೈಮ್ ಕ್ಯಾಪ್ಟನ್ ಆಗಿ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. 2022ರಲ್ಲಿ ಕ್ಯಾಪ್ಟನ್ಸಿಯನ್ನ ಟೇಕ್ ಓವರ್ ಮಾಡಿದ ಹಿಟ್ಮ್ಯಾನ್, ತಮ್ಮ ಪೂರ್ಣಾವಧಿ ಕ್ಯಾಪ್ಟನ್ಸಿಯಲ್ಲಿ ಫಸ್ಟ್ ಸೆಂಚುರಿ ಸಿಡಿಸಿದ್ದು ವಿಶೇಷ.
ರಿಕಿ ಪಾಂಟಿಂಗ್ ಶತಕ ರೆಕಾರ್ಡ್ ಸರಿಗಟ್ಟಿದ ಹಿಟ್ಮ್ಯಾನ್
ತಮ್ಮ ಏಕದಿನ ಕರಿಯರ್ನಲ್ಲಿ 30ನೇ ಶತಕ ಚಚ್ಚಿದ ಕ್ಯಾಪ್ಟನ್, ಆಸಿಸ್ ದಿಗ್ಗಜ ರಿಕಿ ಪಾಂಟಿಂಗ್ರ ಶತಕಗಳ ದಾಖಲೆ ಸಮಗೊಳಿಸಿದ್ರು. ಆದ್ರೆ, 30 ಶತಕ ಸಿಡಿಸಲು ರೋಹಿತ್ 234 ಇನ್ನಿಂಗ್ಸ್ ತೆಗೆದುಕೊಂಡಿದ್ರೆ, ಪಾಂಟಿಂಗ್ ಬರೋಬ್ಬರಿ 365 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ರು. ಆ ಮೂಲಕ ಏಕದಿನದಲ್ಲಿ ಹೆಚ್ಚು ಸೆಂಚುರಿ ಸಿಡಿಸಿದ ಆಟಗಾರರಲ್ಲಿ 3ನೇ ಸ್ಥಾನಕ್ಕೆ ಏರಿದ ರೋಹಿತ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಫುಲ್ ಟೈಮ್ ಓಪನರ್ ಆಗಿ 10 ವರ್ಷ ಪೂರೈಸಿದ ರೋಹಿತ್
ಏಕದಿನ ಕ್ರಿಕೆಟ್ಗೆ ಡೆಬ್ಯೂ ಮಾಡಿ ರೋಹಿತ್ 15 ವರ್ಷ ಕಳೆದಿದೆ. ಆದ್ರೆ, ಭಾರತದ ಪರ ಏಕದಿನದಲ್ಲಿ ಓಪನರ್ ಆಗಿ, 10 ವರ್ಷ ಕಂಪ್ಲೀಟ್ ಮಾಡಿದ್ದಾರೆ. ಆದ್ರೆ ಇದರ ಕ್ರೆಡಿಟ್ MS ಧೋನಿಗೆ ಸೇರಬೇಕು. ಯಾಕಂದ್ರೆ, ರೋಹಿತ್ಗೆ ಓಪನರ್ ಆಗಿ ಪ್ರಮೋಷನ್ ನೀಡಿದ್ದೇ ಧೋನಿ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಿಟ್ಮ್ಯಾನ್ಗೆ ಈ ಸುವರ್ಣಾವಕಾಶ ಸಿಕ್ಕಿತ್ತು. ಆರಂಭಿಕನಾಗಿ ರೋಹಿತ್ 28 ಶತಕ ಸಿಡಿಸಿದ್ದು, 7,764 ರನ್ ಕಲೆ ಹಾಕಿದ್ದಾರೆ.
ಇದನ್ನು ಓದಿ: VIDEO: ಮಲ್ಪೆಗೆ ಬಂತು ಅಟ್ಲಾಂಟಿಕ್ ಸರೋವರದ ಗೋಲ್ಡನ್ ಫಿಶ್! ದುಬಾರಿ ಬೆಲೆಗೆ ಸೇಲ್..
ರೋಹಿತ್ ಫಾರ್ಮ್ ಸಮಸ್ಯೆಯೇ ಟೀಮ್ ಮ್ಯಾನೇಜ್ಮೆಂಟ್ ಚಿಂತೆಗೆ ಕಾರಣವಾಗಿತ್ತು. ಏಕದಿನ ವಿಶ್ವಕಪ್ ಹತ್ತಿರವಾಗ್ತಿರೋದ್ರಿಂದ ನಾಯಕನ ಕಳಪೆ ಆಟ, ಟೆನ್ಶನ್ಗೆ ಒಳಗಾಗುವಂತೆ ಮಾಡಿತ್ತು. ಆದ್ರೀಗ ರೋಹಿತ್ ಸೆಂಚುರಿ ಸಿಡಿಸಿ, ಫಾರ್ಮ್ಗೆ ಬಂದಿರೋದು ಮ್ಯಾನೇಜ್ಮೆಂಟ್ ನಿಟ್ಟುಸಿರು ಬಿಡುವಂತೆ ಮಾಡಿದೆ. ಹಿಟ್ಮ್ಯಾನ್ ಇದೇ ರೀತಿ ಅಬ್ಬರಿಸುತ್ತಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post